ನವದೆಹಲಿ: Sore Throat Home Remedies - ಗಂಟಲು ನೋವಿನ ಸಮಸ್ಯೆಯು ವೈರಲ್ (Viral Infection) ಅಥವಾ ಬ್ಯಾಕ್ಟೀರಿಯಾದ (Bacteria Infection) ಸೋಂಕಿನಿಂದ ಅಥವಾ ಇತರ ಹಲವು ಕಾರಣಗಳಿಂದ ಉದ್ಭವಿಸಬಹುದು. ತಜ್ಞರ ಪ್ರಕಾರ, ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ (Streptococus Bacteria) ಉಂಟಾಗುವ ಗಂಟಲಿನ ಸೋಂಕು ಅಪಾಯಕಾರಿಯಾಗಿದೆ. ಇದರಿಂದ ಅಧಿಕ ಜ್ವರವೂ ಬರಬಹುದು. ವೈರಲ್ ಗಂಟಲು ಸೋಂಕು ಚಳಿಗಾಲದಲ್ಲಿ (Winter Tips) ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಔಷಧಿಗಳ ಜೊತೆಗೆ ಕೆಲ ಮನೆಮದ್ದುಗಳನ್ನು (Sore Throat Home Remedies) ಕೂಡ ಟ್ರೈ ಮಾಡಬಹುದು. ಇದು ಗಂಟಲು ನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.


COMMERCIAL BREAK
SCROLL TO CONTINUE READING

ಜೇನುತುಪ್ಪ  - ಗಂಟಲು ನೋವಿನ ಸಮಸ್ಯೆಯಲ್ಲಿ ಜೇನುತುಪ್ಪದ ಸೇವನೆಯು ತುಂಬಾ ಪ್ರಯೋಜನ ನೀಡುತ್ತದೆ. ಚಹಾಗೆ ಜೇನುತುಪ್ಪ ಬೆರೆಸಿ ಅದನ್ನು ನೀವು ಸೇವಿಸಬಹುದು. ಜೇನುತುಪ್ಪದಲ್ಲಿರುವ ಪೋಷಕಾಂಶಗಳು ವೈರಲ್ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಿಂದ ಗಂಟಲು ನೋವು ಕೂಡ ನಿವಾರಣೆಯಾಗುತ್ತದೆ.


ಅರಿಶಿಣ ಚಹಾ -  ನೋಯುತ್ತಿರುವ ಗಂಟಲಿನ ಸಮಸ್ಯೆಯಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ಅರಿಶಿನ ಚಹಾವನ್ನು ನೀವು ಟ್ರೈ ಮಾಡಬಹುದು. ಅರಿಶಿಣವನ್ನು ಸೇವಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ನೋಯುತ್ತಿರುವ ಗಂಟಲು, ಶೀತದಿಂದ ನೀವು ಪರಿಹಾರ ಪಡೆಯಬಹುದು.


ಇದನ್ನೂ ಓದಿ-Omicronನಿಂದ ಶೀಘ್ರ ಚೇತರಿಸಿಕೊಂಡರೂ, ಒಂದು ವರ್ಷದವರೆಗೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ


ತುಳಸಿ ಕಷಾಯ - ಗಂಟಲು ನೋವಿನ ಸಮಸ್ಯೆಯಲ್ಲಿ ತುಳಸಿ ಚಹಾ ಅಥವಾ ಕಷಾಯ ಸೇವನೆ ತುಂಬಾ  ಪ್ರಯೋಜನಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ವೈರಲ್ ಸೋಂಕನ್ನು ನಿವಾರಿಸುತ್ತದೆ.


ಇದನ್ನೂ ಓದಿ-Egg Benefits: ಚಳಿಗಾಲದಲ್ಲಿ ಈ ಕಾರಣಕ್ಕಾಗಿ ಮೊಟ್ಟೆಯ ಹಳದಿ ಲೋಳೆಯನ್ನು ತಿನ್ನಲೇಬೇಕು


(Disclaimer: ಇಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ, ಅನುಸರಿಸುವ ಮುನ್ನ ನುರಿತ ವೈದ್ಯರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-100 ಡಿಗ್ರಿಗಿಂತ ಹೆಚ್ಚು ಜ್ವರವಿದ್ದರೆ ಈ 7 ಪರಿಣಾಮಕಾರಿ ಮಾರ್ಗಗಳನ್ನು ಪ್ರಯತ್ನಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.