Omicronನಿಂದ ಶೀಘ್ರ ಚೇತರಿಸಿಕೊಂಡರೂ, ಒಂದು ವರ್ಷದವರೆಗೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ

ಓಮಿಕ್ರಾನ್‌ನ ಪರಿಣಾಮವು ಸೋಂಕಿತರ ಮೇಲೆ ದೀರ್ಘಕಾಲದವರೆಗೆ ಇರಲಿದೆ ಎಂದು ಅಧ್ಯಯನವೊಂದು ಹೇಳಿದೆ. ಓಮಿಕ್ರಾನ್ ನಿಂದ ಸೋಂಕಿತ ವ್ಯಕ್ತಿಯು ದೈನಂದಿನ ಕಾರ್ಯಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.

Written by - Ranjitha R K | Last Updated : Jan 21, 2022, 05:27 PM IST
  • ಸೋಂಕಿತರಿಗೆ ಹಿಂದಿನ ಘಟನೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ
  • ಸೋಂಕಿತರು 6 ರಿಂದ 9 ತಿಂಗಳ ನಂತರ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ
  • ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ ಬ್ರೈನ್ ಫಾಗ್
Omicronನಿಂದ ಶೀಘ್ರ ಚೇತರಿಸಿಕೊಂಡರೂ, ಒಂದು ವರ್ಷದವರೆಗೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ  title=
ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ ಬ್ರೈನ್ ಫಾಗ್ (file photo)

ನವದೆಹಲಿ : ಕೊರೊನಾವೈರಸ್‌ನ (oronavirus) ಹೊಸ ರೂಪಾಂತರವಾದ ಓಮಿಕ್ರಾನ್ ಕುರಿತು ವಿಶ್ವದಾದ್ಯಂತ ಅಧ್ಯಯನಗಳು ನಡೆಯುತ್ತಿವೆ. Omicron ನ ಹೊಸ ಲಕ್ಷಣಗಳು (Omicron symptoms) ಮತ್ತು ಪರಿಣಾಮಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ. ಓಮಿಕ್ರಾನ್‌ನ ಪರಿಣಾಮವು ಸೋಂಕಿತರ ಮೇಲೆ ದೀರ್ಘಕಾಲದವರೆಗೆ ಇರಲಿದೆ ಎಂದು ಅಧ್ಯಯನವೊಂದು ಹೇಳಿದೆ. ಓಮಿಕ್ರಾನ್ ನಿಂದ ಸೋಂಕಿತ ವ್ಯಕ್ತಿಯು ದೈನಂದಿನ ಕಾರ್ಯಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ ಬ್ರೈನ್ ಫಾಗ್ : 
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಬ್ರೈನ್ ಫಾಗ್ ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ. ಜನರು ದೀರ್ಘ ಕೋವಿಡ್‌ನ ಲಕ್ಷಣಗಳನ್ನು (COVID Symptoms) ಹೊಂದಿಲ್ಲದಿದ್ದರೂ, ಜನರಲ್ಲಿ ಬ್ರೈನ್ ಫಾಗ್ ಸಮಸ್ಯೆ ಕಂಡುಬರುತ್ತಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಬ್ರೈನ್ ಫಾಗ್ ನಿಂದ ಬಳಲುತ್ತಿರುವ ಜನರು, ಈ ಅವಧಿಯಲ್ಲಿ ತಮ್ಮ ಜೀವನದ  ಹಿಂದಿನ ಘಟನೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ :  Egg Benefits: ಚಳಿಗಾಲದಲ್ಲಿ ಈ ಕಾರಣಕ್ಕಾಗಿ ಮೊಟ್ಟೆಯ ಹಳದಿ ಲೋಳೆಯನ್ನು ತಿನ್ನಲೇಬೇಕು

ಅಧ್ಯಯನದಿಂದ ಹೊರಬಂದ ಸತ್ಯ : 
ಆಶ್ಚರ್ಯಕರ ಸಂಗತಿಯೆಂದರೆ, ತಪಾಸಣೆ ವೇಳೆ ಒಮಿಕ್ರಾನ್ (Omicron) ಸೋಂಕಿತರಲ್ಲಿ ಇಂಥಹ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಆದರೆ, ಸೋಂಕಿತರ ಸ್ಮರಣ ಶಕ್ತಿ (Memoru power) ಕ್ಷೀಣಿಸುವುದು ಅಧ್ಯಯನದಿಂದ ತಿಳಿದು ಬಂದಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಈ ಲಕ್ಷಣಗಳು ಹಲವಾರು ತಿಂಗಳುಗಳವರೆಗೆ ಸೋಂಕಿತರಲ್ಲಿ ಇರಲಿವೆ.  

ಬ್ರೈನ್ ಫಾಗ್ ಲಕ್ಷಣಗಳೇನು?
ಓಮಿಕ್ರಾನ್ ಸ್ಮರಣ ಶಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲವಾದರೂ ಸಂಶೋಧಕರ ಪ್ರಕಾರ, ಬ್ರೈನ್ ಫಾಗ್ ಪರಿಣಾಮದ ನಂತರ, ಸೋಂಕಿತರು ಸುಮಾರು 6 ರಿಂದ 9 ತಿಂಗಳ ನಂತರ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ. ದೀರ್ಘಕಾಲದವರೆಗೆ ಕರೋನಾ (Coronavirus) ಸೋಂಕಿಗೆ ಒಳಗಾದ ರೋಗಿಗಳು ಸ್ನಾಯು ನೋವು, ಅನಿಯಮಿತ ಹೃದಯ ಬಡಿತ, ಕೆಮ್ಮು ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಮತ್ತೊಂದೆಡೆ, ಬ್ರೈನ್ ಫಾಗ್  ಕಾರಣದಿಂದಾಗಿ, ಜನರು ನಿದ್ರಾಹೀನತೆ, ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು ಮುಂತಾದ ಸಮಸ್ಯೆಯನ್ನು ಎದುರಿಸುತ್ತಾರೆ. 

ಇದನ್ನೂ ಓದಿ : 100 ಡಿಗ್ರಿಗಿಂತ ಹೆಚ್ಚು ಜ್ವರವಿದ್ದರೆ ಈ 7 ಪರಿಣಾಮಕಾರಿ ಮಾರ್ಗಗಳನ್ನು ಪ್ರಯತ್ನಿಸಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ, 26 ವರ್ಷ ವಯಸ್ಸಿನ 136 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ 53 ಜನರು ಕರೋನಾವನ್ನು (COVID)  ಸೊಂಕಿತರಾಗಿದ್ದು, ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರು. ಈ ಜನರ ಸ್ಮರಣೆಗೆ ಸಂಬಂಧಿಸಿದಂತೆ ಅನೇಕ ಪರೀಕ್ಷೆಗಳನ್ನು  ನಡೆಸಲಾಗಿದೆ. ಇದರಲ್ಲಿ ಅವರೆಲ್ಲರ Episodic Memory ಕಳಪೆಯಾಗಿರುವುದು ಕಂಡು ಬಂತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News