Spinach Benefits: ಈ ಅದ್ಬುತ ಪ್ರಯೋಜನಗಳಿಗಾಗಿಯೇ ಊಟದಲ್ಲಿರಬೇಕು ಪಾಲಕ್
ಡಾ. ರಂಜನಾ ಸಿಂಗ್ ಪ್ರಕಾರ, ಪಾಲಕ್ ಫೈಬರ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಷಿಯಂ, ಫೋಲಿಕ್ ಆಮ್ಲ, ವಿಟಮಿನ್ ಕೆ 1, ವಿಟಮಿನ್ ಸಿ, ವಿಟಮಿನ್ ಎ. ಪೊಟ್ಯಾಸಿಯಮ್ ಅನೇಕ ಪೋಷಕಾಂಶಗಳನ್ನು ಒಳಗೊಂಡಿವೆ.
ನವದೆಹಲಿ : Spinach Benefits : ಹಸಿರು ತರಕಾರಿಗಳನ್ನು ಸೇವಿಸಿದರೆ ಅನೇಕ ರೋಗಗಳನ್ನು ದೂರವಿಡಬಹುದು. ರೋಗಗಳನ್ನು ದೂರವಿಡುವುದು ಮಾತ್ರವಲ್ಲದೆ, ಹೊಟ್ಟೆಯ ಕೊಬ್ಬನ್ನು (fat) ಕಡಿಮೆ ಮಾಡಲು ಕೂಡಾ ಇದು ಸಹಕಾರಿ. ಹಸಿರು ಎಲೆ ತರಕಾರಿಗಳ ಸೇವನೆಯಿಂದ ಅಪಾರ ಪ್ರಯೋಜನಗಳನ್ನು ಪಡೆಯಬಹುದು. ಈ ತರಕಾರಿಗಳಲ್ಲಿಯೂ ಪಾಲಕ್ ಸೊಪ್ಪು ಬಹಳ ಆರೋಗ್ಯಕರ (Benefits of Spinach). ಹಾಗಾಗಿ, ಊಟದ ತಟ್ಟೆಯಲ್ಲಿ ಪಾಲಕ್ ಸೊಪ್ಪಿಗೊಂದು ಜಾಗ ಇದ್ದೇ ಇರಲಿ. ಪಾಲಕ್ ಸೊಪ್ಪನ್ನು ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಪಾಲಕ್ ಸೊಪ್ಪು, ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇದು ನಮ್ಮ ದೇಹವನ್ನು ಅನೇಕ ರೋಗಗಳಿಂದ ಕಾಪಾಡುತ್ತದೆ.
ಪಾಲಕ್ ಸೊಪ್ಪಿನ ಪ್ರಯೋಜನಗಳೇನು ?
ಡಾ. ರಂಜನಾ ಸಿಂಗ್ ಪ್ರಕಾರ, ಪಾಲಕ್ (Spinach Benefits) ಫೈಬರ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಷಿಯಂ, ಫೋಲಿಕ್ ಆಮ್ಲ, ವಿಟಮಿನ್ ಕೆ 1, ವಿಟಮಿನ್ ಸಿ, ವಿಟಮಿನ್ ಎ. ಪೊಟ್ಯಾಸಿಯಮ್ ಅನೇಕ ಪೋಷಕಾಂಶಗಳನ್ನು ಒಳಗೊಂಡಿವೆ. ಇದಲ್ಲದೆ, ಮೆಗ್ನೀಸಿಯಮ್ ವಿಟಮಿನ್ ಇ, ವಿಟಮಿನ್ ಬಿ 6, ವಿಟಮಿನ್ ಬಿ 9ಕೂಡಾ ಇದರಲ್ಲಿ ಹೇರಳವಾಗಿ ಕಂಡು ಬರುತ್ತದೆ.
ಇದನ್ನೂ ಓದಿ : Benefits of Fennel with Milk : ಪ್ರತಿದಿನ ಒಂದು ಚಿಟಿಕೆ ಸೊಂಪುನ್ನ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ, ಈ ರೋಗಗಳಿಂದ ದೂರವಿರಿ!
ಪಾಲಕ್ ತಿನ್ನುವುದರಿಂದ ದೇಹಕ್ಕೆ ಈ ಕೆಳಗಿನ ಪ್ರಯೋಜನಗಳು ಸಿಗುತ್ತವೆ.
1- ಮಧುಮೇಹ ರೋಗಿಗಳು (Diabetec) ಪಾಲಕ್ ಸೊಪ್ಪನ್ನು ಸೇವಿಸಬೇಕು. ಏಕೆಂದರೆ, ಇದರಲ್ಲಿರುವ ವಿಟಮಿನ್ ಗಳು, ಖನಿಜಗಳು ಮತ್ತು ಫೈಟೊಕೆಮಿಕಲ್ಸ್ ಅಧಿಕ ಸಕ್ಕರೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
2- ಪಾಲಕದಲ್ಲಿರುವ ಪೊಟ್ಯಾಶಿಯಂ ದೇಹದಲ್ಲಿನ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಪರಿಹಾರ ನೀಡುತ್ತದೆ.
3-ಮಲಬದ್ಧತೆ (Constipation) ಅಥವಾ ಇನ್ನಾವುದೇ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಊಟದಲ್ಲಿ ಪಾಲಕ್ ಖಂಡಿತವಾಗಿ ಇರಲೇಬೇಕು. ಏಕೆಂದರೆ ಇದರಲ್ಲಿರುವ ಫೈಬರ್ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಮತ್ತು ಜೀರ್ಣಕ್ರಿಯೆಯನ್ನು (Palak for digestion) ಸರಿಪಡಿಸಲು ಸಹಾಯ ಮಾಡುತ್ತದೆ.
4- ಪಾಲಕ್ ಐರನ್ ನ ಅತ್ಯುತ್ತಮ ಮೂಲವಾಗಿದೆ. ಇದು ದೇಹದಲ್ಲಿ ರಕ್ತದ ಕೊರತೆಯಾಗಲು ಬಿಡುವುದಿಲ್ಲ.
5- ಪಾಲಕ್ ಸೊಪ್ಪಿನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳು ಚರ್ಮವನ್ನು ಪುನಶ್ಚೇತನಗೊಳಿಸಲು ಮತ್ತು ಚರ್ಮದ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
6-ಇದು ಅಕಾಲಿಕ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ
ಇದನ್ನೂ ಓದಿ : Toothache Relief Tips: ಈ ಸಿಂಪಲ್ ಟಿಪ್ಸ್ ಅನುಸರಿಸಿ ನಿಮಿಷಗಳಲ್ಲಿ ನಿಮ್ಮ ಹಲ್ಲು ನೋವಿಗೆ ಹೇಳಿ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.