Sprouts Side Effects: ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಮೊಳಕೆ ಕಾಳುಗಳನ್ನು ತಿನ್ನಲೇಬಾರದು
Sprouts Side Effects: ಮೂಳಕೆ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹಾಗಾಗಿಯೇ, ಅನೇಕ ಜನರು ಪ್ರತಿದಿನ ಬೆಳಿಗ್ಗೆ ಮೊಳಕೆ ಕಾಳುಗಳನ್ನು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಕೆಲವೊಮ್ಮೆ ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಮೊಳಕೆ ಕಾಳಿನ ಸೇವನೆಯಿಂದ ಆರೋಗ್ಯ ಹದಗೆಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಲೇಖನದಲ್ಲಿ ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಮೊಳಕೆ ಕಾಳು ಒಳ್ಳೆಯದಲ್ಲ ಎಂದು ತಿಳಿಯೋಣ...
ಆರೋಗ್ಯ ಸಲಹೆಗಳು: ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಮೊಳಕೆ ಕಾಳುಗಳಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿವೆ. ಹಾಗಾಗಿಯೇ, ಹೆಚ್ಚಿನ ಜನರು ಬೆಳಿಗ್ಗೆ ಉಪಾಹಾರಕ್ಕಾಗಿ ಇದನ್ನು ತಿನ್ನುತ್ತಾರೆ. ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದನ್ನು ತಳ್ಳಿಹಾಕುವಂತಿಲ್ಲ. ಆದರೆ, ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಮೊಳಕೆ ಕಾಳುಗಳ ಅತಿಯಾದ ಸೇವನೆಯು ಅಸಿಡಿಟಿ, ಹೊಟ್ಟೆ ಉಬ್ಬರ, ಮಲಬದ್ಧತೆ, ಪೈಲ್ಸ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಇಷ್ಟು ಮಾತ್ರವಲ್ಲ, ಪೌಷ್ಟಿಕ ತಜ್ಞರ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆ ಇರುವವರೂ ಸಹ ಮೊಳಕೆ ಕಾಳುಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಮೊಳಕೆ ಕಾಳು ಒಳ್ಳೆಯದಲ್ಲ ಎಂದು ತಿಳಿಯೋಣ...
ಈ ಆರೋಗ್ಯ ಸಮಸ್ಯೆ ಇರುವವರು ಎಂದಿಗೂ ಮೊಳಕೆ ಕಾಳುಗಳನ್ನು ತಿನ್ನಲೇಬಾರದು:-
* ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು:
ಮೊಳಕೆ ಕಾಳುಗಳು ಸಸ್ಯ ಮತ್ತು ಬೀಜದ ಹಂತದಲ್ಲಿವೆ. ಬದಲಾವಣೆಗಳು ಪೂರ್ಣಗೊಳ್ಳದ ಯಾವುದೇ ಆಹಾರವನ್ನು ದೇಹವು ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಗ್ಯಾಸ್ಟ್ರಿಕ್ ಮತ್ತು ಆಮ್ಲೀಯತೆ ಉಂಟಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಜನರಿಗೆ ಮೊಳಕೆ ಕಾಳುಗಳನ್ನು ತಿನ್ನುವುದು ಅತ್ಯಂತ ಹಾನಿಕಾರಕವಾಗಿದೆ. ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದ ಅಥವಾ ದುರ್ಬಲವಾಗಿರುವ ಜನರು ಮೊಳಕೆ ಕಾಳುಗಳನ್ನು ತಿನ್ನದಿರುವುದು ಉತ್ತಮ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- High Cholesterol: ಕೆಟ್ಟ ಕೊಲೆಸ್ಟ್ರಾಲ್‌ನಿಂದ ಮುಕ್ತಿ ಪಡೆಯಲು ಈ ಆಹಾರಗಳನ್ನು ತಪ್ಪದೇ ಸೇವಿಸಿ
ಜೀರ್ಣ ಸಮಸ್ಯೆ ಇರುವವರು:
ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಅಥವಾ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುವ ಜನರು ಮೊಳಕೆಕಾಳುಗಳನ್ನು ಹಸಿಯಾಗಿ ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ, ನಿಮಗೆ ಮೊಳಕೆ ಕಾಳು ತಿನ್ನಲೇಬೇಕು ಎಂದೆನಿಸಿದಲ್ಲಿ ಸ್ವಲ್ಪ ಎಣ್ಣೆ ಮತ್ತು ಶುಂಠಿ ಪುಡಿ ಜೊತೆಗೆ ಕಾಳುಗಳನ್ನು ಬಿಸಿ ಮಾಡಿ ಸೇವಿಸಬಹುದು.
ಇದನ್ನೂ ಓದಿ- Flax Seeds Benefits : ಅಗಸೆ ಬೀಜದ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!
ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನುವುದರ ಪ್ರಯೋಜನಗಳು:
ಮೊಳಕೆ ಕಾಳುಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ಅನೇಕ ಬಾರಿ ದೇಹವು ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ, ಈ ಕಾರಣದಿಂದಾಗಿ ಮೊಳಕೆಗಳನ್ನು ಹಸಿಯಾಗಿ ತಿನ್ನುವ ಬದಲಿಗೆ ಸ್ವಲ್ಪ ಬೇಯಿಸಿ ನಂತರ ಸೇವಿಸುವುದು ಉತ್ತಮ. ಹೀಗೆ ಮಾಡುವುದರಿಂದ ದೇಹವು ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.