ಬೆಂಗಳೂರು: ಕೊರೋನಾ  ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು  ಕೊರೋನಾ ಸೈನಿಕರಾದ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರಿಗೆ ಸ್ಪೂರ್ತಿ ತುಂಬುವ ಕಾರ್ಯ  ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು (B Sriramulu) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕೊರೋನಾ (coronavirus) ವಿರುದ್ಧ ಹೋರಾಡುತ್ತಿರುವವರಿಗೆ  ಸ್ಪೂರ್ತಿ ತುಂಬಲು ಸ್ವತಃ ಆಸ್ಪತ್ರೆಗೆ ಭೇಟಿ‌ ನೀಡಿದ ಶ್ರೀರಾಮುಲು ಬಳಿಕ ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 (Covid-19) ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿನ 21 ಜಿಲ್ಲೆಗಳಲ್ಲಿನ ಸತತವಾಗಿ ಪ್ರವಾಸ ಮಾಡಿ  ಕೊರೋನಾ ನಿಯಂತ್ರಣದ  ಸ್ಥಿತಿಗತಿ ಕುರಿತು ಪರಿಶೀಲನೆ ನಡೆಯುತ್ತಿದೆ. ಅಲ್ಲಿನ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ವೈದ್ಯರುಗಳು, ಸಂಸದರುಗಳಿಂದ ಮಾಹಿತಿ ಸಂಗ್ರಹಣೆ ಮಾಡಿ ಕೋವಿಡ್-19 ನಿಯಂತ್ರಣಕ್ಕಾಗಿ  ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.


ದ್ರಾಕ್ಷಿ ಬೆಳೆಗಾರರಿಗೆ ನ್ಯಾಯಕೊಡಿಸುವತ್ತ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ


ಜಿಲ್ಲೆಯಲ್ಲಿ ಐಸೋಲೆಟೆಡ್ ವಾರ್ಡ ವ್ಯವಸ್ಥೆ ಮಾಡಲಾಗಿದೆ. ಗದಗ ಜಿಲ್ಲೆಯಲ್ಲಿ (ದಿ.14 ರವರೆಗೆ )   ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 451 ಇದ್ದು 28 ದಿನಗಳ ನಿಗಾ ಅವಧಿ ಪೂರೈಸಿದವರು 132 ಜನ. ಮನೆಯಲ್ಲಿಯೇ  ಪ್ರತ್ಯೇಕ ನಿಗಾದಲ್ಲಿರುವವರ  ಸಂಖ್ಯೆ 303.  202ಮಾದರಿಗಳು ನಕಾರಾತ್ಮಕವಾಗಿವೆ ಎಂದು ತಿಳಿಸಿದರು.


ವೈದ್ಯಕೀಯ ಪಾಸ್ ಪಡೆದು ಮದುವೆಗೆ ತೆರಳಿದವರಿಗೆ ಆಗಿದ್ದೇನು?
      
ರಾಜ್ಯದಲ್ಲಿ ( ದಿ.15ರ ಮಧ್ಯಾಹ್ನದವರೆಗೆ ) 277 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ರಾಜ್ಯದಲ್ಲಿ  ಕೊರೋನಾದಿಂದ  ಒಟ್ಟಾರೆ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ. 75 ಜನ ಗುಣಮುಖರಾಗುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ  ಶೀಘ್ರವೇ ಕೊರೋನಾ ವೈರಸ್ ಟೆಸ್ಟಿಂಗ್ ಲ್ಯಾಬ್  ತೆರೆಯಲು ಕ್ರಮ ಜರುಗಿಸಲಾಗುತ್ತಿದೆ . ರಾಜ್ಯದಲ್ಲಿರುವ  ಖಾಸಗಿ  ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್‌ಗಳ ವೈದ್ಯರು  ಕ್ಲಿನಿಕ್ ಬಂದ್ ಮಾಡದೇ ವೈದ್ಯಕೀಯ ಸೇವೆ ಸಲ್ಲಿಸಿ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ತಿಳಿಸಿದರು.


ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉಪಸ್ಥಿತರಿದ್ದರು.