ನವದೆಹಲಿ: ಯೂರಿಕ್ ಆಮ್ಲವು ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನವಾಗಿದೆ. ದೇಹವು ಪ್ಯೂರಿನ್ ಎಂಬ ರಾಸಾಯನಿಕವನ್ನು ಉತ್ಪತ್ತಿ ಮಾಡಿದಾಗ ಇದು ತಯಾರಾಗುತ್ತದೆ. ಹೆಚ್ಚಿನ ಯೂರಿಕ್ ಆಮ್ಲವು ರಕ್ತದಲ್ಲಿ ಕರಗುತ್ತದೆ. ಇದು ಮೂತ್ರಪಿಂಡಗಳ ಮೂಲಕ ಹಾದುಹೋಗಿ ಮೂತ್ರದ ಮೂಲಕ ದೇಹದಿಂದ ಹೊರಬರುತ್ತದೆ. ಪ್ಯೂರಿನ್ ಭರಿತ ಆಹಾರ ಮತ್ತು ಪಾನೀಯಗಳು ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುತ್ತವೆ. ಈ ಆಹಾರಗಳು ಜೀರ್ಣವಾದಾಗ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ದೇಹದಿಂದ ಸಂಪೂರ್ಣವಾಗಿ ಹೊರಬರುವುದಿಲ್ಲ.


COMMERCIAL BREAK
SCROLL TO CONTINUE READING

ಸಂಶೋಧನೆಯೊಂದರ ಪ್ರಕಾರ, ರಕ್ತದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಎರಡೂ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಈ ಅಪಾಯದಿಂದ ದೂರವಿರಲು ತಕ್ಷಣವೇ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬೇಕು. ನಿಮ್ಮ ಯೂರಿಕ್ ಆಮ್ಲವು ದೀರ್ಘಕಾಲದವರೆಗೆ ಅಧಿಕವಾಗಿದ್ದರೆ ಅದು ತೀವ್ರತರನಾದ ಸಮಸ್ಯೆಗೆ ಕಾರಣವಾಗುತ್ತದೆ. ಇದು ಸಂಧಿವಾತದ ಒಂದು ವಿಧವಾಗಿದೆ, ಇದರಿಂದ ಕೀಲುಗಳಲ್ಲಿ ನಿರಂತರ ನೋವು ಇರುತ್ತದೆ. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುವ ಆ ಆಹಾರಗಳು ಯಾವುವು ಎಂದು ತಿಳಿಯಿರಿ.


1) ಹೆಸರು ಮತ್ತು ತೊಗರಿಬೇಳೆ


ಯೂರಿಕ್ ಆಮ್ಲವು ಹೆಸರು ಮತ್ತು ತೊಗರಿಬೇಳೆ ಸೇವಿಸಿದ ನಂತರವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಏಕೆಂದರೆ ಈ ಕಾಳುಗಳು ಬಹಳಷ್ಟು ಪ್ಯೂರಿನ್ ಹೊಂದಿರುತ್ತವೆ, ಇದು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ.


2) ಆಲ್ಕೋಹಾಲ್ ಮತ್ತು ತಂಪು ಪಾನೀಯಗಳು


ಆಲ್ಕೋಹಾಲ್ ಮತ್ತು ತಂಪು ಪಾನೀಯಗಳ ಸೇವನೆಯು ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸಬಹುದು. ಇದಲ್ಲದೆ ಇದು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.


ಇದನ್ನೂ ಓದಿ: Hair Care Tips: ಕೇಶರಾಶಿ ಸಮೃದ್ಧವಾಗಿ ಬೆಳೆಯಲು ಮನೆಯಂಗಳದಲ್ಲಿರುವ ಈ ಹಸಿರೆಲೆಯ ರಸವನ್ನು ಹಚ್ಚಿ


3) ಕೊಲೊಕಾಸಿಯಾ


ಕೊಲೊಕಾಸಿಯಾ ಆರೋಗ್ಯಕರ ಆಹಾರದ ವರ್ಗದಲ್ಲಿ ಬರುತ್ತದೆ, ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ಮಟ್ಟ ಹೆಚ್ಚಬಹುದು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಅರ್ಬಿ ಎಂತಲೂ ಕೆರೆಯುವ ಇದರಲ್ಲಿ ಪ್ಯೂರಿನ್ ಮತ್ತು ಕ್ಯಾಲ್ಸಿಯಂ ಆಕ್ಸಲೇಟ್ ಅಧಿಕವಾಗಿದ್ದು, ಇದು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗಬಹುದು.


4) ಮೀನು


ಮೀನುಗಳನ್ನು ಅತಿಯಾಗಿ ಸೇವಿಸಬಾರದು. ಏಕೆಂದರೆ ಅದು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು. ಮೀನಿನಲ್ಲಿಯೂ ಯೂರಿಕ್ ಆಮ್ಲವು ಹೇರಳವಾಗಿ ಕಂಡುಬರುತ್ತದೆ, ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ಈ ಅಪಾಯ ತಪ್ಪಿಸಬಹುದು.


ಇದನ್ನೂ ಓದಿ: Summer Natural Drinks: ಬೇಸಿಗೆಯಲ್ಲಿ ಈ 5 ನೈಸರ್ಗಿಕ ಪಾನೀಯ ಸೇವಿಸಿದ್ರೆ ಆರೋಗ್ಯಕ್ಕೆ ಉತ್ತಮ


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನ ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.