Summer Natural Drinks: ಬೇಸಿಗೆಯಲ್ಲಿ ಈ 5 ನೈಸರ್ಗಿಕ ಪಾನೀಯ ಸೇವಿಸಿದ್ರೆ ಆರೋಗ್ಯಕ್ಕೆ ಉತ್ತಮ

Summer Natural Drinks: ಬಿಸಿಲ ಬೇಗೆಯಿಂದ ನೀವು ಬಳಲುತ್ತಿದ್ದರೆ ಇಲ್ಲಿವೆ ನೋಡಿ 5 ನೈಸರ್ಗಿಕ ಪಾನೀಯಗಳು. ಪ್ರತಿದಿನವೂ ಇವುಗಳನ್ನು ಸೇವಿಸುತ್ತಾ ನೀವು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ.

Written by - Puttaraj K Alur | Last Updated : Mar 11, 2023, 07:26 AM IST
  • ವಿಟಮಿನ್ C ಹೊಂದಿರುವ ನಿಂಬೆ ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ
  • ಬೇಸಿಗೆಯಲ್ಲಿ ಮಜ್ಜಿಗೆ ಅಥವಾ ಲಸ್ಸಿಯ ಸೇವನೆಯು ತುಂಬಾ ಪ್ರಯೋಜನಕಾರಿ
  • ಪ್ರತಿದಿನ 1 ಲೋಟ ಕಬ್ಬಿನ ರಸ ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ
Summer Natural Drinks: ಬೇಸಿಗೆಯಲ್ಲಿ ಈ 5 ನೈಸರ್ಗಿಕ ಪಾನೀಯ ಸೇವಿಸಿದ್ರೆ ಆರೋಗ್ಯಕ್ಕೆ ಉತ್ತಮ  title=
ಬೇಸಿಗೆಯ ನೈಸರ್ಗಿಕ ಪಾನೀಯಗಳು

ನವದೆಹಲಿ: ಹೋಳಿ ಹಬ್ಬದೊಂದಿಗೆ ದೇಶದಲ್ಲಿ ಬಿಸಿಲ ಬೇಗೆ ಪ್ರಾರಂಭವಾಗಿದೆ. ದೇಶದ ಹಲವೆಡೆ ತಾಪಮಾನವು 35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಶೀಘ್ರವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ಆರ್ಭಟ ಶುರುವಾಗಲಿದೆ. ಈ ಋತುವಿನಲ್ಲಿ ಶಾಖದಿಂದ ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ, ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಸಹ ನಿಮ್ಮನ್ನು ಕಾಡಲು ಶುರುಮಾಡುತ್ತವೆ. ಈ ಸಮಸ್ಯೆ ತಪ್ಪಿಸಲು ಇಂದು ನಾವು ನಿಮಗೆ 5 ನೈಸರ್ಗಿಕ ಪಾನೀಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವುಗಳನ್ನು ಸೇವಿಸುವ ಮೂಲಕ ನೀವು ಬೇಸಿಗೆಯಲ್ಲೂ ಫಿಟ್ ಆಗಿರಬಹುದು.  

ನಿಂಬೆ ಪಾನಕ: ಬೇಸಿಗೆಯಲ್ಲಿ ದೇಹವನ್ನು ಸದೃಢವಾಗಿಡಲು ನಿಂಬೆ ಪಾನಕ ರಾಮಬಾಣ. ವಿಟಮಿನ್-ಸಿ ನಿಂಬೆಯಲ್ಲಿ ಸಾಕಷ್ಟು ಕಂಡುಬರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಮಲಬದ್ಧತೆ ಮತ್ತು ಹೊಟ್ಟೆಯ ಗ್ಯಾಸ್-ಆಸಿಡಿಟಿ ಸಮಸ್ಯೆ ಸಹ ನಿವಾರಿಸುತ್ತದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ.

ಮಜ್ಜಿಗೆ: ಬೇಸಿಗೆಯಲ್ಲಿ ಮಜ್ಜಿಗೆ ಅಥವಾ ಲಸ್ಸಿಯ ಸೇವನೆಯು ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಹೊಟ್ಟೆಯ ಶಾಖ ಶಾಂತಗೊಳ್ಳುತ್ತದೆ ಮತ್ತು ದೀರ್ಘಕಾಲದ ಮಲಬದ್ಧತೆಯಿಂದ ಪರಿಹಾರ ಸಿಗುತ್ತದೆ. ಪ್ರತಿದಿನ ಲಸ್ಸಿ ಕುಡಿಯುವುದರಿಂದ ಕರುಳನ್ನು ಸ್ವಚ್ಛಗೊಳಿಸಲು ಸಹಕಾರಿ. ಜೀರ್ಣಕ್ರಿಯೆ ಸುಧಾರಿಸುವಲ್ಲಿ ಇದು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Cholesterol: ಕಡಲೆ ಹಿಟ್ಟಿನಲ್ಲಿದೆ ಕೊಳೆಸ್ತ್ರಾಲ್ ನಿಯಂತ್ರಿಸುವ, ತೂಕ ಇಳಿಸುವ ತಾಕತ್ತು!

ಕಬ್ಬಿನ ರಸ: ಕಬ್ಬಿನ ರಸವು ಬೇಸಿಗೆಯಲ್ಲಿ ಮಾರಾಟವಾಗುವ ಜನಪ್ರಿಯ ಪಾನೀಯ. ಇದನ್ನು ನೈಸರ್ಗಿಕ ಶಕ್ತಿ ವರ್ಧಕ ಪಾನೀಯವೆಂದು ಪರಿಗಣಿಸಲಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುವುದು ಮಾತ್ರವಲ್ಲದೆ ಶಾಖದ ಹೊಡೆತದಿಂದ ತಪ್ಪಿಸಿಕೊಳ್ಳಲು ಸಹಕಾರಿ. ಪ್ರತಿದಿನ ಒಂದು ಲೋಟ ಕಬ್ಬಿನ ರಸವನ್ನು ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ.

ಬೇಲ್ ಪತ್ತರ್ ಜ್ಯೂಸ್: ಬೇಸಿಗೆಯಲ್ಲಿ ಬೆಲ್ ಪತ್ತರ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಹೊಟ್ಟೆಯ ಶಾಖ ಶಾಂತವಾಗಿ ದೇಹಕ್ಕೆ ತಂಪು ಸಿಗುತ್ತದೆ. ಬೇಲ್ ಪತ್ತರ್ ರಸವು ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಇದನ್ನು ಕುಡಿಯುವುದರಿಂದ ಜೀರ್ಣಾಂಗವ್ಯೂಹ ಆರೋಗ್ಯಪೂರ್ಣವಾಗುತ್ತದೆ ಮತ್ತು ಹಸಿವು ಚೆನ್ನಾಗಿರುತ್ತದೆ.

ಇದನ್ನೂ ಓದಿ: Hair Care Tips: ಕೇಶರಾಶಿ ಸಮೃದ್ಧವಾಗಿ ಬೆಳೆಯಲು ಮನೆಯಂಗಳದಲ್ಲಿರುವ ಈ ಹಸಿರೆಲೆಯ ರಸವನ್ನು ಹಚ್ಚಿ

ತೆಂಗಿನ ನೀರು: ತೆಂಗಿನ ನೀರು ವರ್ಷದ 12 ತಿಂಗಳು ಮಾರಾಟವಾಗುವ ನೈಸರ್ಗಿಕ ಪಾನೀಯವಾಗಿದೆ. ಇದನ್ನು ನೈಸರ್ಗಿಕ ಶಕ್ತಿಯ ಉಗ್ರಾಣವೆಂದೂ ಕರೆಯುತ್ತಾರೆ. ಈ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆಯ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ತೆಂಗಿನ ನೀರು ಅನೇಕ ಪೋಷಕಾಂಶಗಳನ್ನು ಹೊಂದಿದೆ, ಇದು ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News