Sugarcane Juice Side Effects: ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಕುಡಿಯುವುದು ದೇಹವನ್ನು ತಂಪಾಗಿ ಮತ್ತು ತಾಜಾತನದ ಅನುಭೂತಿ ಸಿಗುತ್ತದೆ. ಕಬ್ಬಿನ ರಸವು ಹೇರಳ ಪ್ರಮಾಣದಲ್ಲಿ ಖನಿಜಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ, ಕಬ್ಬಿನ ರಸವನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಆದರೆ ಕಬ್ಬಿನ ರಸವು ಎಲ್ಲರಿಗೂ ಪ್ರಯೋಜನಕಾರಿಯಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಕಬ್ಬಿನ ಜ್ಯೂಸ್ ಸೇವನೆಯಿಂದ ಕೆಲವರಿಗೆ ತೊಂದರೆಯೂ ಉಂಟಾಗುವ ಸಾಧ್ಯತೆ ಇದೆ. ಉದಾಹರಣೆಗೆ ಫುಡ್ ಪಾಯ್ಸನ್, ಬೊಜ್ಜು, ನೆಗಡಿಯಾದ ಸ್ಥಿತಿಯಲ್ಲಿ ಕಬ್ಬಿನ ರಸವನ್ನೇ ಸೇವಿಸಬಾರದು. ಯಾರು ಯಾರು ಕಬ್ಬಿನ ರಸವನ್ನು ಸೇವಿಸಬಾರದು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಜನರು ಕಬ್ಬಿನ ರಸವನ್ನು ಸೇವಿಸಬಾರದು
ಫುಡ್ ಪಾಯ್ಸನಿಂಗ್ ಆದವರು ಕಬ್ಬಿನ ರಸ ಸೇವಿಸಬಾರದು-
ನಿಮಗೆ ಫುಡ್ ಪಾಯ್ಸನಿಂಗ್ ಆಗಿದ್ದಲ್ಲಿ ಕಬ್ಬಿನ ರಸವನ್ನು ಕುಡಿಯಲೇಬಾರದು. ಏಕೆಂದರೆ ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು. ಕೈಗಾಡಿಯಲ್ಲಿ ಕಬ್ಬಿನ ರಸವನ್ನು ತಯಾರಿಸುವ ಸಮಯದಲ್ಲಿ, ನೊಣಗಳು ಕಬ್ಬಿನ ಮೇಲೆ ಕುಳಿತುಕೊಳ್ಳುತ್ತವೆ. ಇದರಿಂದ ಕಬ್ಬಿನ ರಸವು ಅನಾರೋಗ್ಯಕರವಾಗಬಹುದು. ಮತ್ತು ನಿಮಗೆ ಹಾನಿ ಉಂಟು ಮಾಡಬಹುದು.

ತಲೆನೋವಿನ ಸಮಸ್ಯೆ ಇರುವವರು- ಕಬ್ಬಿನ ರಸ ಸೇವನೆಯಿಂದ ತಲೆನೋವು ಟ್ರಿಗರ್ ಆಗುವ ಸಾಧ್ಯತೆ ಇರುತ್ತದೆ.  ನಿಮಗೆ ತಲೆನೋವಿನ ಸಮಸ್ಯೆ ಇದ್ದಲ್ಲಿ ಕಬ್ಬಿನ ರಸವನ್ನು ಕುಡಿಯುವುದನ್ನು ತಪ್ಪಿಸಿ. ಏಕೆಂದರೆ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಬಹುದು.

ಶೀತದ ಸಂದರ್ಭದಲ್ಲಿ- ನೆಗಡಿ ಇರುವಾಗ ಕಬ್ಬಿನ ರಸವನ್ನು ಕುಡಿಯಬಾರದು.ಕಬ್ಬಿನ ಜ್ಯೂಸ್ ತಂಪಾಗಿಸುವ ಗುಣವನ್ನು ಹೊಂದಿರುವುದರಿಂದ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೆಚ್ಚಾಗಬಹುದು.

ಬೊಜ್ಜು ಇರುವುದು- ಒಂದು ವೇಳೆ ನೀವು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಹೆಚ್ಚು ಕಬ್ಬಿನ ರಸವನ್ನು ಕುಡಿಯುವುದನ್ನು ತಪ್ಪಿಸಿ. ಕಬ್ಬಿನ ರಸವನ್ನು ಕುಡಿಯುವುದರಿಂದ ದೇಹದಲ್ಲಿ ಕ್ಯಾಲೊರಿಗಳ ಪ್ರಮಾಣ ಹೆಚ್ಚಾಗಬಹುದು ಮತ್ತು ಇದು ನಿಮ್ಮ ತೂಕವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಬೊಜ್ಜಿನ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಸೇವಿಸಬಾರದು.


ಇದನ್ನೂ ಓದಿ-Men's Health: ಪುರುಷರಲ್ಲಿ ಶಾರೀರಿಕ ದೌರ್ಬಲ್ಯ ದೂರಾಗಿಸುತ್ತದೆ ಬೆಳ್ಳುಳ್ಳಿ, ಈ ರೀತಿ ಬಳಕೆ ಮಾಡಿ


ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚು ಇರುವವರು- ನೀವು ಮಧುಮೇಹಿಗಳಾಗಿದ್ದರೆ, ನೀವು ಕಬ್ಬಿನ ರಸವನ್ನು ಕುಡಿಯಬಾರದು. ಏಕೆಂದರೆ ಕಬ್ಬಿನಲ್ಲಿ ಸಕ್ಕರೆಯ ಅಂಶ ತುಂಬಾ ಹೆಚ್ಚಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕಬ್ಬಿನ ರಸವನ್ನು ಸೇವಿಸಿದರೆ, ಅದು ದೇಹದಲ್ಲಿ ಗ್ಲೈಸೆಮಿಕ್ ಲೋಡ್ ಅನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು. ಆದ್ದರಿಂದ ಮಧುಮೇಹಿಗಳು ಕಬ್ಬಿನ ರಸದಿಂದ ದೂರವಿರಬೇಕು.


ಇದನ್ನೂ ಓದಿ-Diabetes: ಈ ಹಣ್ಣು ಅಲ್ಲ, ಈ ಹಣ್ಣಿನ ಗಿಡದ ಎಲೆಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.