ಈ ಐದು ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ತೂಕ ಹೆಚ್ಚಳವಾಗುವ ಚಿಂತೆಯೇ ಇರುವುದಿಲ್ಲ

ತೂಕವನ್ನು ಕಾಪಾಡಿಕೊಳ್ಳುವುದು ಒಂದು ದಿನದ ಪ್ರಕ್ರಿಯೆಯಲ್ಲ. ಇದೊಂದು  ಸುದೀರ್ಘ ಪ್ರಕ್ರಿಯೆ. ಆದರೆ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ತಲೆನೋವಿನಿಂದ ಮುಕ್ತಿ ಪಡೆಯಬಹುದು.  

Written by - Ranjitha R K | Last Updated : Jun 20, 2022, 09:33 AM IST
  • ಒಮ್ಮೆ ತೂಕ ಹೆಚ್ಚಾದರೆ, ಅದನ್ನು ಕಳೆದುಕೊಳ್ಳುವುದು ತುಂಬಾ ಕಷ್ಟ.
  • ನಾವು ಮಾಡುವ 5 ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ
  • ಐದು ಅಭ್ಯಾಸಗಳನ್ನು ನಿತ್ಯದ ಜೀವನಶೈಲಿಯಲ್ಲಿ ಸೇರಿಸಿದರೆ ಒಳ್ಳೆಯದು
ಈ ಐದು ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ತೂಕ ಹೆಚ್ಚಳವಾಗುವ ಚಿಂತೆಯೇ ಇರುವುದಿಲ್ಲ   title=
Weight loss tips (file photo)

ಬೆಂಗಳೂರು : ಭಾರತದಲ್ಲಿ ಎಣ್ಣೆಯು ಅಂಶವಿರುವ ಆಹಾರ ಪದಾರ್ಥಗಳನ್ನು ತಿನ್ನುವ ಪ್ರವೃತ್ತಿ ಹೆಚ್ಚಾಗಿದೆ. ಹೀಗಾದಾಗ ತೂಕ ಹೆಚ್ಚಾಗುವುದು ಸಾಮಾನ್ಯ. . ಒಮ್ಮೆ ತೂಕ ಹೆಚ್ಚಾದರೆ, ಅದನ್ನು ಕಳೆದುಕೊಳ್ಳುವುದು ತುಂಬಾ ಕಷ್ಟ. ಹೇಗೋ ಕಷ್ಟ ಪಟ್ಟು ಮತ್ತು ಕೆಲವು ರೀತಿಯಲ್ಲಿ ತೂಕ ಕಳೆದುಕೊಂಡರೂ  ಅದನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ತೂಕ ಕಳೆದುಕೊಂಡ ನಂತರ ನಾವು ಮಾಡುವ ತಪ್ಪು ಮತ್ತೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ನಾವು ಮಾಡುವ 5 ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ :
ಹೆಚ್ಚಾದ ತೂಕವನ್ನು ಬಹಳಷ್ಟು ಕಷ್ಟ ಪಟ್ಟು ಇಳಿಸುವುದರಲ್ಲಿ ಯಶಸ್ವಿಯಾಗುತ್ತೇವೆ. ಆದರೆ ತೂಕ ಕಡಿಮೆಯಾದ ನಂತರ ನಾವು ಮಾಡುವ ಕೆಲವು ತಪ್ಪುಗಳನ್ನು ಮತ್ತೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ.  ಇಲ್ಲಿ ಹೇಳುವ ಐದು ಅಭ್ಯಾಸಗಳನ್ನು ದಿನನಿತ್ಯದ ಜೀವನಶೈಲಿಯಲ್ಲಿ ಸೇರಿಸಿದರೆ ತೂಕವನ್ನು ಕಾಪಾಡಿಕೊಳ್ಳಲು ಯಾವುದೇ ತೊಂದರೆಯಾಗುವುದಿಲ್ಲ.

ಇದನ್ನೂ ಓದಿ : Men's Health: ಪುರುಷರಲ್ಲಿ ಶಾರೀರಿಕ ದೌರ್ಬಲ್ಯ ದೂರಾಗಿಸುತ್ತದೆ ಬೆಳ್ಳುಳ್ಳಿ, ಈ ರೀತಿ ಬಳಕೆ ಮಾಡಿ

1. ಒಮ್ಮೆ ತೂಕ ಕಡಿಮೆಯಾದರೆ, ನಾವೂ ವರ್ಕ್ ಔಟ್ ಮಾಡುವುದನ್ನು ನಿಲ್ಲಿಸುತ್ತೇವೆ, ಅದು ನಾವು ಮಾಡುವ ಬಹಳ ದೊಡ್ಡ ತಪ್ಪು. 
2. ತೂಕವನ್ನು ಕಳೆದುಕೊಂಡ ನಂತರ, ಮತ್ತೆ ಮೊದಲಿನಂತೆ ತಿನ್ನಲು, ಕುಡಿಯಲು ಆರಂಭಿಸುತ್ತೇವೆ. ಹಾಗೆ ಮಾಡಬಾರದು. ತೂಕ ಕಳೆದುಕೊಂಡ ನಂತರ ಅದನ್ನು ಹಾಗೆಯೇ ಕಾಪಾಡಿಕೊಳ್ಳಬೇಕಾದರೆ, ಆಹಾರ ಪಾನೀಯಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ತ
3. ತೂಕ ಕಡಿಮೆಯಾದ ನಂತರ ಮತ್ತೆ ಹೊರಗಿನ ಆಹಾರ, ಜಂಕ್ ಫುಡ್ ಗಳಿಂದ ದೂರವಿರಿ. ವನ
4. ಕಡಿಮೆ ನಿದ್ದೆ ಮಾಡುವುದು ಕೂಡಾ ತೂಕ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ತಜ್ಞರ ಪ್ರಕಾರ, ನಿಮ್ಮ ತುಕ ಹೆಚ್ಚಿರಲಿ, ಅಥವಾ ಕಡಿಮೆಯಿರಲಿ.. ದಿನಕ್ಕೆ ೭ರಿನ್ದ 8 ಗಂಟೆ ನಿದ್ದೆ ಮಾಡಲೇ ಬೇಕು. 
5.ನೀರು ಕುಡಿಯುವುದು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ನಮ್ಮ ದೇಹದಲ್ಲಿ ನೀರಿನ ಕೊರತೆಯಿದ್ದರೆ, ಅದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುವಲ್ಲಿ ಸಮಸ್ಯೆಗಳು ಎದುರಾಗುತ್ತವೆ. 

ಇದನ್ನೂ ಓದಿ : Diabetes: ಈ ಹಣ್ಣು ಅಲ್ಲ, ಈ ಹಣ್ಣಿನ ಗಿಡದ ಎಲೆಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು

ಈ ವಿಷಯಗಳನ್ನು ನೆನಪಿನಲ್ಲಿಡಿ :
1.ಬೆಳಗಿನ ಉಪಾಹಾರವನ್ನು ಯಾವತ್ತೂ ತಪ್ಪಿಸಬೇಡಿ. ಫಿಟ್‌ನೆಸ್ ದಿನಚರಿಯನ್ನು ಎಂದಿಗೂ ಬಿಟ್ಟುಬಿಡಬೇಡಿ
2. ಏಕೆಂದರೆ ಅದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ -
3. ಯಾವಾಗಲೂ ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಎಣ್ಣೆಯುಕ್ತ ಆಹಾರವನ್ನು ಮಾತ್ರ ಸೇವಿಸಿ. 
4.  ಗರಿಷ್ಠ ಪ್ರಮಾಣದ ಸಕ್ಕರೆ ಅಂಶವಿರುವ ಆಹಾರವನ್ನು
 ತಿನ್ನಬೇಡಿ. 
5.  ಮಲಗುವ ಸಮಯವನ್ನು ನಿರ್ಧರಿಸಿಕೊಳ್ಳಿ. ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳಬೇಡಿ.

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News