Vitamin B12 Deficiency : ವಿಟಮಿನ್ ಬಿ 12 ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ವಿಟಮಿನ್. ಹಾಗಾಗಿ ದೇಹದಲ್ಲಿ ಈ ವಿಟಮಿನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದೇಹದಲ್ಲಿ ವಿಟಮಿನ್ ಬಿ 12 ದೇಹದಲ್ಲಿ ಹಾಗೆಯೇ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ಬಿ 12 ಉತ್ಪತ್ತಿಯಾಗಬೇಕಾದರೆ ಕೆಲವೊಂದು ವಸ್ತುಗಳನ್ನು ಸೇವಿಸಬೇಕು.ಒಂದು ವೇಳೆ ನಿಮ್ಮ ದೇಹದಲ್ಲಿಯೂ ವಿಟಮಿನ್  ಬಿ 12 ಕೊರತೆಯಿದ್ದರೆ ಈ ಆಹಾರಗಳನ್ನು ಸೇವಿಸುವ ಮೂಲಕ ವಿಟಮಿನ್  ಬಿ 12  ಕೊರತೆಯನ್ನು ಸರಿದೂಗಿಸಬಹುದು.


COMMERCIAL BREAK
SCROLL TO CONTINUE READING

ವಿಟಮಿನ್ ಬಿ 12 ಕೊರತೆಯನ್ನು ನೀಗಿಸಲು, ಈ ಆಹಾರ ವಸ್ತುಗಳನ್ನು ಸೇವಿಸಿ :
ಮಾಂಸ :

ಮಾಂಸವು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ.ಪ್ರತಿದಿನ ಮಾಂಸವನ್ನು ಸೇವಿಸಿದರೆ, ದೇಹಕ್ಕೆ ವಿಟಮಿನ್ ಬಿ 12 ಹೇರಳವಾಗಿ ಸಿಗುತ್ತದೆ. ಇದರೊಂದಿಗೆ ನಿಮ್ಮ ದೇಹದಲ್ಲಿನ ಅನೇಕ ವಸ್ತುಗಳ ಕೊರತೆಯೂ ದೂರವಾಗುತ್ತದೆ. 


ಇದನ್ನೂ ಓದಿ : ಮೈ ಮೇಲೆ ಈ ಲಕ್ಷಣಗಳು ಕಾಣಿಸಿಕೊಂಡಿದೆಯಾ ? ಹಾಗಿದ್ದರೆ ಖಂಡಿತವಾಗಿಯೂ ಶುಗರ್ ಹೆಚ್ಚಾಗಿದೆ ಎಂದರ್ಥ


ಟ್ಯೂನ ಮೀನು :
ಟ್ಯೂನ ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ.ಈ ಮೀನಿನಲ್ಲಿ ವಿಟಮಿನ್ ಬಿ 12 ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ.ಆದ್ದರಿಂದ ಇದನ್ನು ಸೇವಿಸುವುದರಿಂದ ದೇಹದಲ್ಲಿನ ವಿಟಮಿನ್ ಬಿ12 ಕೊರತೆ ನಿವಾರಣೆಯಾಗುತ್ತದೆ. 


ಹಾಲು ಮತ್ತು ಡೈರಿ ಉತ್ಪನ್ನಗಳು :
ಹಾಲು ಮತ್ತು ಡೈರಿ ಉತ್ಪನ್ನಗಳಾದ ಮೊಸರು, ಚೀಸ್, ಬೆಣ್ಣೆ, ಪನೀರ್ ಇವುಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸೇರಿದಂತೆ ಅನೇಕ ಜೀವಸತ್ವಗಳಿರುತ್ತವೆ.ಆದ್ದರಿಂದ  ಮೀನು ಮಾಂಸ ತಿನ್ನದೇ ಇರುವವರು ಪ್ರತಿದಿನ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು.


ಇದನ್ನೂ ಓದಿ :  Health Tips: ಫಾಸ್ಟ್‌ಫುಡ್‌ನಲ್ಲಿ ಬಳಸುವ ಸೈಲೆಂಟ್‌ ಕಿಲ್ಲರ್‌ ʼಅಜಿನೊಮೊಟೊʼ ಬಗ್ಗೆ ಎಚ್ಚರ!


ಮೊಟ್ಟೆ :
ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕಾಡುತ್ತಿದ್ದರೆ ಪ್ರತಿದಿನ ಮೊಟ್ಟೆ ಸೇವಿಸಬೇಕು. ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.