Survey: ದೊಡ್ಡ ಪಾದಗಳಿರುವ ಪುರುಷರು ಮೋಸಗಾರರು, ಸಂಗಾತಿಯಿಂದ ಮರೆಮಾಚಿ ಈ ಕೆಲಸ ಮಾಡುತ್ತಾರೆ
Survey: ನೀವು ನಿಮ್ಮ ಸಂಗಾತಿಯ ಪಾದಗಳನ್ನು ನೋಡಿ ಅವರು ನಿಮಗೆ ಎಷ್ಟು ಮೋಸ ಮಾಡುತ್ತಿದ್ದಾರೆ ಅಥವಾ ಇಲ್ಲ ಎಂಬುದನ್ನು ತಿಳಿಯಬಹುದು. ಹೀಗಂತ ನಾವು ಹೇಳುತ್ತಿಲ್ಲ. Britain ನಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಮೀಕ್ಷೆಯ ಪ್ರಕಾರ, ಯಾವ ಪುರುಷರ ಪಾದದ ಗಾತ್ರ ದೊಡ್ಡದಾಗಿರುತ್ತದೆಯೋ, ಅವರು ತಮ್ಮ ಸಂಗಾತಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಲಂಡನ್: Survey - ಒಂದು ವೇಳೆ ನಿಮ್ಮ ಪಾದಗಳ ಗಾತ್ರವು ದೊಡ್ಡದಾಗಿದ್ದರೆ (Men With Big Feet), ನಿಮ್ಮ ಸಂಗಾತಿ ನಿಮ್ಮನ್ನು ಅನುಮಾನಿಸುವ ಸಾಧ್ಯತೆ ಇದೆ. ಏಕೆಂದರೆ ಒಂದು ಸಮೀಕ್ಷೆಯಲ್ಲಿ ದೊಡ್ಡ ಪಾದ ಹೊಂದಿರುವ ಪುರುಷರು ಸಣ್ಣ ಪಾದಗಳನ್ನು ಹೊಂದಿದವರಿಗಿಂತ ಹೆಚ್ಚು ಮೋಸ ಮಾಡುತ್ತಾರೆ ಎಂದು ತಿಳಿದುಬಂದಿದೆ. ಸಮೀಕ್ಷೆಯ ಪ್ರಕಾರ, 10 ಅಥವಾ ಅದಕ್ಕಿಂತ ಹೆಚ್ಚಿನ ಅಡಿ ಗಾತ್ರ ಹೊಂದಿರುವ ಪುರುಷರು ತಮ್ಮ ಸಂಗಾತಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು. ಇದಕ್ಕೆ ವಿರುದ್ಧವಾಗಿ, ಏಳು ಅಥವಾ ಅದಕ್ಕಿಂತ ಕಡಿಮೆ ಗಾತ್ರ ಹೊಂದಿರುವವರಲ್ಲಿ ಇದು ಸಾಧ್ಯತೆ ಕಡಿಮೆ ಇರುತ್ತದೆ.
ಸಮೀಕ್ಷೆಯಲ್ಲಿ 2000 ಪುರುಷರು ಭಾಗವಹಿಸಿದ್ದರು
'ದಿ ಸನ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಇತ್ತೀಚೆಗಷ್ಟೇ ನಡೆದ ಸಮೀಕ್ಷೆಯಲ್ಲಿ ಪುರುಷರ ಅಫೈರ್ ಅನ್ನು ಅವರ ಕಾಲಿನ ಗಾತ್ರಕ್ಕೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ದೊಡ್ಡ ಗಾತ್ರದ ಪಾದ ಇರುವ ಪುರುಷರು ತಮ್ಮ ಸಂಗಾತಿಗೆ ಮೋಸ ಮಾಡಿ ಎರಡನೇ ಸಂಬಂಧ (Rleationship) ಬೆಳೆಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಡೇಟಿಂಗ್ ಸೈಟ್ ಆಗಿರುವ ‘Illicit Encounters’ ನಡೆಸಿರುವ ಈ ಸಮೀಕ್ಷೆಯಲ್ಲಿ ಸುಮಾರು 2000 ಪುರುಷರ ಜೊತೆಗೆ ಸಂವಾದ ನಡೆಸಲಾಗಿದೆ. ಇದರಲ್ಲಿ ದೊಡ್ಡ ಗಾತ್ರದ ಪಾದಗಳನ್ನು ಹೊಂದಿರುವ ಬಹುತೇಕ ವೈವಾಹಿಕ ಪುರುಷರು ತಮ್ಮ ಅಫೇರ್ ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಇವರು Biggest Cheater ಗಳು
ಈ ಕುರಿತು ಹೇಳಿಕೆ ನೀಡಿರುವ ವೆಬ್ಸೈಟ್ ವಕ್ತಾರೆ ಜೆಸ್ಸಿಕಾ ಲಿಯೋನಿ, ಪುರುಷರ ಕಾಲುಗಳ ಸೈಜ್ ಆಧಾರವಾಗಿಟ್ಟುಕೊಂಡು ಅವರ ಮೋಸಮಾಡುವ ಪ್ರವೃತ್ತಿಯನ್ನು ಅಂದಾಜಿಸಬಹುದು ಎಂದಿದ್ದಾರೆ. ಉದಾಹರಣೆಗೆ ಪಾದದ ಸೈಜ್ 11 ಹೊಂದಿರುವ ಪುರುಷರು ಮೋಸಮಾಡುವ ಸಾಧ್ಯತೆ ಶೇ.29ರಷ್ಟಿರುತ್ತದೆ. ಇದೆ ರೀತಿ ಸೈಜ್ 10-ಶೇ.25ರಷ್ಟು, ಸೈಜ್ 12 - ಶೇ. 22ರಷ್ಟು, ಸೈಜ್ 13 ಅಥವಾ ಅದಕ್ಕಿಂತ ಹೆಚ್ಚಿನ ಸೈಜ್ ಇರುವವರು ಮೊಸ್ಸಮಾಡುವ ಸಾಧ್ಯತೆ ಶೇ. 21 ರಷ್ಟಿರುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕಾರಣದಿಂದ ಸಾಧ್ಯತೆ ಹೆಚ್ಚಾಗಿದೆ
'ದೊಡ್ಡ ಪಾದಗಳನ್ನು ಹೊಂದಿರುವ ಪುರುಷರು ತುಲನಾತ್ಮಕವಾಗಿ ಎತ್ತರವಾಗಿರುತ್ತಾರೆ, ಆದ್ದರಿಂದ ಅವರು ಇತರ ಮಹಿಳೆಯರನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ, ಅವರ ಸಂಬಂಧವು ಹೆಚ್ಚು ಕಾಲ ಉಳಿಯುತ್ತದೆ. 10 ಮತ್ತು ಅದಕ್ಕಿಂತ ಹೆಚ್ಚಿನ ಗಾತ್ರದ ವಿವಾಹಿತ ಪುರುಷರು ಹೆಚ್ಚಾಗಿ ಸಂಬಂಧ ಹೊಂದಿರುತ್ತಾರೆ ಎಂದು ಅವರು ಹೇಳಿದ್ದಾರೆ. 10 ಅಡಿಗಿಂತ ಕಡಿಮೆ ಇರುವ ಜನರು ತಮ್ಮ ಸಂಗಾತಿಗೆ ಎಂದಿಗೂ ಮೋಸ ಮಾಡಬಾರದು ಎಂದು ಮಾತನಾಡಿದ್ದಾರೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ದೊಡ್ಡ ಗಾತ್ರದವರು ವೈವಾಹಿಕ ಜೀವನದಲ್ಲಿದ್ದರೂ ಸಹ ಅವರು ಸಂಬಂಧ ಹೊಂದಿದ್ದಾರೆಂದು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ-Relationship: ಪುರುಷರಲ್ಲಿ ಮಹಿಳೆಯರು ನೋಡುವುದೇನು? ಇಂಪ್ರೆಷನ್ ಹೊಡೆಯೋ ಮುನ್ನ ಈ ಸುದ್ದಿ ಓದ್ರಿ
Tiger Woods ಕೂಡ ತಮ್ಮ ಸಂಗಾತಿಗೆ ಮೋಸ ಮಾಡಿದ್ದರು
ಟೈಗರ್ ವುಡ್ಸ್, ಹಗ್ ಗ್ರಾಂಟ್, ಲಾಮರ್ ಓಡಮ್ ಮತ್ತು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಮತ್ತು ಅವರ ಪಾದಗಳ ಗಾತ್ರವನ್ನು ಗಮನಿಸಿದರೆ ಸಮೀಕ್ಷೆಯ ಫಲಿತಾಂಶಗಳು ಸರಿ ಎಂದೇ ಹೇಳಬಹುದು. ಏಕೆಂದರೆ ಅವರೆಲ್ಲರೂ 10 ಅಥವಾ ಅದಕ್ಕಿಂತ ಹೆಚ್ಚಿನ ಅಡಿ ಗಾತ್ರವನ್ನು ಹೊಂದಿದ್ದಾರೆ ಮತ್ತು ಎಲ್ಲರೂ ತಮ್ಮ ಸಂಗಾತಿಗೆ ಮೋಸ ಮಾಡಿದ್ದಾರೆ. ಜನರು ಸಮೀಕ್ಷೆಯ ಫಲಿತಾಂಶಗಳನ್ನು ಪ್ರಶ್ನಿಸಬಹುದು, ಆದರೆ ಅಂಕಿಅಂಶಗಳು ಎಂದಿಗೂ ಸುಳ್ಳಾಗುವುದಿಲ್ಲ ಎಂದು ಜೆಸ್ಸಿಕಾ ಲಿಯೋನಿ ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ ಅನೇಕ ಜನರು ಮದುವೆಯಾಗಿದ್ದರೂ, ಅವರು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ-Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.