ಬೆಂಗಳೂರು : ಮೂತ್ರಪಿಂಡದ ಕಾಯಿಲೆಗಳು ದಿನ ಕಳೆಯುತ್ತಿದ್ದಂತೆಯೇ  ಗಂಭೀರವಾಗಬಹುದು. ಹಾಗಾಗಿ ಈ  ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿರುತ್ತದೆ. ತಜ್ಞರ ಪ್ರಕಾರ, ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ದೈನಂದಿನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದು ದೈಹಿಕ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


COMMERCIAL BREAK
SCROLL TO CONTINUE READING

ಮೂತ್ರಪಿಂಡದ ಕಾರ್ಯವು ನಮ್ಮ ದೇಹದಲ್ಲಿನ ರಕ್ತವನ್ನು ಫಿಲ್ಟರ್ ಮಾಡುತ್ತದೆ. ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅದು ರಕ್ತವನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮೂತ್ರಪಿಂಡದ ಕಾಯಿಲೆಯಲ್ಲಿ ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆಯಬಹುದು. ಇದರಿಂದಾಗಿ ಮೂತ್ರಪಿಂಡ ವೈಫಲ್ಯದ ಅಪಾಯವೂ ಎದುರಾಗುತ್ತದೆ . 


ಇದನ್ನೂ ಓದಿ : ಜ್ವರ ಇದ್ದಾಗ ಮೋಸಂಬಿ ಜ್ಯೂಸ್ ಕುಡಿಯಬೇಕೆ? ತಜ್ಞರು ಏನು ಹೇಳ್ತಾರೆ?


ಕಿಡ್ನಿ ಸಮಸ್ಯೆಗಳಿದ್ದರೆ ಈ ಲಕ್ಷಣಗಳು ಕಾಣಿಸುತ್ತವೆ :
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರೆ, ದೇಹದಲ್ಲಿನ ರಕ್ತವನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಇದು ದೇಹದಲ್ಲಿ ತುರಿಕೆ, ಸ್ನಾಯು ಸೆಳೆತ, ಹಸಿವಿನ ಕೊರತೆ, ವಾಕರಿಕೆ ಮತ್ತು ವಾಂತಿ, ಪಾದಗಳ ಊತ, ಅತಿಯಾದ ಮೂತ್ರ ವಿಸರ್ಜನೆ ಅಥವಾ ಮೂತ್ರ ವಿಸರ್ಜಿಸಲು  ಆಗದೆ ಇರುವುದು ಮುಂತಾದ ಸಮಸ್ಯೆಯನ್ನು ಉಂಟುಮಾಡಬಹುದು. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದಾಗಿ ನಿದ್ರಿಸುವುದು ಕೂಡಾ ಕಷ್ಟವಾಗಬಹುದು. 


ಈ ಕಾರಣಗಳಿಂದಾಗಿ ಈ ಸಮಸ್ಯೆ ಉಂಟಾಗಬಹುದು :
ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ಧೂಮಪಾನ ಕೂಡಾ  ಕಿಡ್ನಿ ಸಮಸ್ಯೆಗೆ ಕಾರಣವಾಗಬಹುದು. ಅಧಿಕ ತೂಕವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ : ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಟಾಪ್ 5 ಮಾರ್ನಿಂಗ್ ಡ್ರಿಂಕ್ಸ್


ಈ ವಿಧಾನಗಳನ್ನು ಅನುಸರಿಸಿ :
ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಹೆಚ್ಚಾಗದಂತೆ ಕಾಪಾಡಬಹುದು. ಅಲ್ಲದೆ ಕಿಡ್ನಿ ಸಮಸ್ಯೆಯಿರುವಾಗ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು .  


1 . ಮದ್ಯಪಾನ ಅಥವಾ ಧೂಮಪಾನದಿಂದ ದೂರವಿರಿ. ಈ ಎರಡೂ ಅಂಶಗಳು ರೋಗವನ್ನು ಉಲ್ಬಣಗೊಳಿಸಬಹುದು.
2 . ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಸಮಸ್ಯೆಯಲ್ಲಿ ತೂಕ ಹೆಚ್ಚಾಗಬಹುದು. ಇದಕ್ಕಾಗಿ, ಆಹಾರ ತಜ್ಞರ ಸಲಹೆಯ ಮೇರೆಗೆ ತೂಕವನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಿ.
3.ದೈಹಿಕ ಚಟುವಟಿಕೆಯು ಈ ರೋಗವು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ. 30 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ  ಮಾಡುವುದರಿಂದ ಪ್ರಯೋಜನವಾಗುತ್ತದೆ. 
4. ಮಧುಮೇಹದ ಸಮಸ್ಯೆ ಇದ್ದರೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ . ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಸಮಯದಲ್ಲಿ ಮಧುಮೇಹದ ಸಮಸ್ಯೆಯು ರೋಗವನ್ನು ಉಲ್ಬಣಗೊಳಿಸಬಹುದು.


ಇದನ್ನೂ ಓದಿ ಕೇವಲ ನೀರು ಕುಡಿಯುವ ಮೂಲಕ ತೂಕ ನಿಯಂತ್ರಣ ಮಾಡಬಹುದೇ? ಏನೆನ್ನುತ್ತಾರೆ ತಜ್ಞರು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ