Tamarind Leaves For Premature White Hair : ಚಿಕ್ಕ ವಯಸ್ಸಿನಲ್ಲಿ ತಲೆಯಲ್ಲಿ ಬಿಳಿ ಕೂದಲು ಬರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.  ಆದರೆ ಇದು ಯುವಕರ  ಚಿಂತೆಗೆ ಕಾರಣವಾಗುತ್ತದೆ. ಬೆಳ್ಳಗಾದ ಕೂದಲು ಮುಜುಗರ ಉಂಟು ಮಾಡುವುದಲ್ಲದೆ, ಆತ್ಮವಿಶ್ವಾಸವನ್ನು ಕೂಡಾ ಕುಗ್ಗಿಸುತ್ತದೆ. ಇನ್ನು ಈ ಸಮಸ್ಯೆಯ ನಿವಾರಣೆಗೆ ರಾಸಾಯನಿಕಯುಕ್ತ ಹೇರ್ ಡೈ ಅನ್ನು ಬಳಸಿದರೆ, ಅದು ಕೂದಲಿನ ಶುಷ್ಕತೆಗೆ ಕಾರಣವಾಗಬಹುದು. ಹೀಗಿರುವಾಗ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುವ ಮಾರ್ಗದ ಬಗ್ಗೆ ಯೋಚಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ಹುಣಸೆ ಎಲೆಗಳು : 
25 ರಿಂದ 30 ವರ್ಷ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಆರಂಭಿಸಿದರೆ  ಹುಣಸೆ ಎಲೆಗಳನ್ನು ಬಳಸಬಹುದು. ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.  ಹಾಗಾಗಿ ಹುಣಸೆ ಎಲೆಗಳು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದರ ಆಂಟಿ-ಡ್ಯಾಂಡ್ರಫ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕೂದಲಿಗೆ ಸಂಬಂಧಿಸಿದಂತೆ ಸಾಕಷ್ಟು ಉಪಯುಕ್ತವಾಗಿವೆ.
 
ಇದನ್ನೂ ಓದಿ : Hing Health Benefits: ಚಿಟಿಕೆ ಇಂಗಿನಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನ


ಹುಣಸೆ ಎಲೆಗಳನ್ನು ಹೇಗೆ ಬಳಸುವುದು ? :
ಉತ್ತಮ ಕೂದಲಿನ ಆರೋಗ್ಯಕ್ಕಾಗಿ,  ಹುಣಸೆ ಎಲೆಗಳ ಹೇರ್ ಪ್ಯಾಕ್ ಅನ್ನು ತಯಾರಿಸಬಹುದು ಅಥವಾ ಅದರ ಸಹಾಯದಿಂದ ಹೇರ್ ಸ್ಪ್ರೇ ಅನ್ನು ಸಹ ತಯಾರಿಸಬಹುದು. 


1. ಸ್ಪ್ರೇ ತಯಾರಿಸಲು, ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ 5 ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ಹುಣಸೆ ಎಲೆಗಳನ್ನು ಮಿಶ್ರಣ ಮಾಡಿ. ಈಗ ಅದನ್ನು ಕುದಿಸಿ ನಂತರ ಅದು ತಣ್ಣಗಾಗುವವರೆಗೆ  ಬಿಡಿ. ಹೀಗೆ ತಣ್ಣಗಾದ ದ್ರಾವಣವನ್ನು ಕೂದಲಿಗೆ ಸಿಂಪಡಿಸಿದ ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ಕೂದಲನ್ನು ತೊಳೆಯಿರಿ.


2. ಹುಣಸೆ ಎಲೆಗಳ ಹೇರ್ ಪ್ಯಾಕ್ ತಯಾರಿಸಲು, ಮಿಕ್ಸರ್ ಗ್ರೈಂಡರ್‌ನಲ್ಲಿ ಮೊಸರಿನೊಂದಿಗೆ ಕೆಲವು ಎಲೆಗಳನ್ನು ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಅದು ಒಣಗಿದ ನಂತರ, ತಲೆಯನ್ನು ಶುದ್ಧ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ : Health Tips: ಸೇಬು ಹಣ್ಣು ತಿಂದ ನಂತರ ಏಕೆ ನೀರು ಕುಡಿಯಬಾರದು ಗೊತ್ತಾ?


ಹುಣಸೆ ಎಲೆಗಳು ಏಕೆ ಪ್ರಯೋಜನಕಾರಿ? :
ನೈಸರ್ಗಿಕ ಹೇರ್ ಕಲರಿಂಗ್ ಏಜೆಂಟ್‌ಗಳು ಹುಣಸೆ ಎಲೆಗಳಲ್ಲಿ ಕಂಡುಬರುತ್ತವೆ. ಇದನ್ನು ಕೆಲವು ವಾರಗಳವರೆಗೆ ಬಳಸುವುದರಿಂದ ಬಿಳಿ ಕೂದಲು ಮತ್ತೆ ಕಪ್ಪಾಗುವುದು ಮಾತ್ರವಲ್ಲದೆ ಕೂದಲು ಉದುರುವಿಕೆ, ಕೂದಲು ಶುಷ್ಕತೆ, ದುರ್ಬಲ ಕೂದಲು ಮುಂತಾದ ಸಮಸ್ಯೆಗಳು ಕೂಡಾ  ದೂರವಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.