Diabetes Control Tips: ಹಾಳಾದ ಜೀವನಶೈಲಿ ನಮ್ಮಲ್ಲಿ ಅನೇಕ ರೂಗಗಳ ಅಪಾಯ ಹೆಚ್ಚಿಸುತ್ತಿದೆ. ಮಧುಮೇಹ ಮತ್ತು ಪಿಸಿಓಎಸ್ ಈ ಎರಡು ಗಂಭೀರ ಕಾಯಿಲೆಗಳಾಗಿವೆ, ಇವು ಜನರಿಗೆ ಭಾರಿ ತೊಂದರೆಯನ್ನು ನೀಡುವ ಕಾಯಿಲೆಗಳು ಎಂದು ಪರಿಗಣಿಸಲಾಗುತ್ತದೆ.  ಈ ಎರಡೂ ಕಾಯಿಲೆಗಳು ನಿಮ್ಮನ್ನು ಒಳಗಿನಿಂದ ದುರ್ಬಲಗೊಳಿಸುತ್ತವೆ, ನಿಮ್ಮ ದೇಹದ ಇತರ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇಂದು ಇವೆರಡೂ ಯುವಕರ ಮೇಲೂ ಪರಿಣಾಮ ಬೀರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇವುಗಳನ್ನು ಹೋಗಲಾಡಿಸಲು ಸುಲಭ ಮತ್ತು ಪರಿಣಾಮಕಾರಿ ಪರಿಹಾರ ಆಯುರ್ವೇದದಲ್ಲಿ ಲಭ್ಯವಿದೆ. ಹೌದು, ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಈ ಕಾಯಿಲೆಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ದಾಲ್ಚಿನ್ನಿ ಭಾರತೀಯ ಮಸಾಲೆ, ಇದು ಸಾಮಾನ್ಯವಾಗಿ ಎಲ್ಲಾ ಭಾರತೀಯ ಅಡುಗೆಮನೆಗಳಲ್ಲಿ ಕಂಡುಬರುತ್ತದೆ. ಬಲವಾದ ಸುವಾಸನೆಯನ್ನು ಹೊಂದಿರುವ ದಾಲ್ಚಿನ್ನಿ ಚಕ್ಕೆ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ. ಮಧುಮೇಹ ಮತ್ತು ಪಿಸಿಓಎಸ್ ಜೊತೆಗೆ, ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. (Health News In Kannada)


COMMERCIAL BREAK
SCROLL TO CONTINUE READING

ದಾಲ್ಚಿನ್ನಿ ಮಧುಮೇಹವನ್ನು ಈ ರೀತಿ ನಿಯಂತ್ರಿಸುತ್ತದೆ
ದಾಲ್ಚಿನ್ನಿ ಚಕ್ಕೆಗಳ ಜೊತೆಗೆ, ನೀವು ಅದರ ಪುಡಿಯನ್ನು ಸಹ ಸುಲಭವಾಗಿ ಸೇವಿಸಬಹುದು. ದಾಲ್ಚಿನ್ನಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿರುತ್ತದೆ. ಮಧುಮೇಹದಿಂದಾಗಿ, ನಿಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಮತ್ತು ಪ್ರಕ್ರಿಯೆ ಎರಡೂ ಪರಿಣಾಮ ಬೀರುತ್ತವೆ. ದಾಲ್ಚಿನ್ನಿ ದೇಹದ ಜೀವಕೋಶಗಳನ್ನು ಇನ್ಸುಲಿನ್‌ಗೆ ಹೆಚ್ಚು ಸಂವೇದನಾಶೀಲವಾಗಿಸುತ್ತದೆ, ಗ್ಲೂಕೋಸ್ ರಕ್ತದಿಂದ ಜೀವಕೋಶಗಳನ್ನು ಸುಲಭವಾಗಿ ತಲುಪಲು ಅನುವು ಮಾಡಿಕೊಡುತ್ತದೆ. ಈ ಶಕ್ತಿಯುತ ಮಸಾಲೆ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಒಡೆಯುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ನಿಧಾನವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ನಿಮ್ಮ ಉಪವಾಸದ ಸಕ್ಕರೆಯು ಅಸ್ಥಿರವಾಗಿದ್ದರೆ ದಾಲ್ಚಿನ್ನಿ ಈ ಸಮಸ್ಯೆಯಿಂದ ನಿಮ್ಮನ್ನು ಪರಿಹಾರ ನೀಡುತ್ತದೆ. ಆದಾಗ್ಯೂ, ಈ ಪ್ರಯೋಜನಕಾರಿ ಮಸಾಲೆಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.


ಪಿಸಿಓಎಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ
ಪಿಸಿಓಎಸ್ ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಗಂಭೀರ ಮತ್ತು ಸಾಮಾನ್ಯ ಸಮಸ್ಯೆಯಾಗಿದೆ. ಇದು ಯುವತಿಯರ ಮೇಲೂ ಪರಿಣಾಮ ಬೀರುತ್ತಿದೆ. ಪಿಸಿಓಎಸ್ ಮತ್ತು ಮಧುಮೇಹದ ನಡುವೆ ಬಲವಾದ ಸಂಪರ್ಕವಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಪಿಸಿಓಎಸ್‌ನಿಂದ ಬಳಲುತ್ತಿರುವ 40 ವರ್ಷಕ್ಕಿಂತ ಮೇಲ್ಪಟ್ಟ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮಧುಮೇಹಕ್ಕೆ ಬಲಿಯಾಗುತ್ತಾರೆ. ವಾಸ್ತವದಲ್ಲಿ, PCOS ನಿಂದಾಗಿ, ನಿಮ್ಮ ಹಾರ್ಮೋನ್ ಸಮತೋಲನವು ತೊಂದರೆಗೊಳಗಾಗುತ್ತದೆ, ಆದರೆ ಇದು ನಿಮ್ಮ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವು ಸಹ ಪ್ದ್ರಭಾವಕ್ಕೆ ಒಳಗಾಗುತ್ತದೆ. ಈ ಎಲ್ಲಾ ಅಂಶಗಳು ಮಧುಮೇಹವನ್ನು ಹೆಚ್ಚಿಸುತ್ತವೆ. ದಾಲ್ಚಿನ್ನಿ ಈ ಸಮಸ್ಯೆಗಳಿಂದ ನಿಮಗೆ ಪರಿಹಾರ ನೀಡುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ನಿಮ್ಮ ಋತುಚಕ್ರ ಕೂಡ  ನಿಯಮಿತವಾಗಿರುತ್ತವೆ. ಇದು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.


ಇದನ್ನೂ ಓದಿ-Weight Loss Home Remedies: ಈ ಆಯುರ್ವೇದ ಕಷಾಯ ಸೇವಿಸಿ ತಿಂಗಳಲ್ಲಿ 7-8 ಕೆಜಿ ತೂಕ ಇಳಿಕೆ ಮಾಡಿಕೊಳ್ಳಿ!


ದಾಲ್ಚಿನ್ನಿಯನ್ನು ಹೀಗೆ ಸೇವಿಸಿ
ನಿಮ್ಮ ಆಹಾರದಲ್ಲಿ ನೀವು ದಾಲ್ಚಿನ್ನಿಯನ್ನು ನಿಯಮಿತವಾಗಿ ಸೇರಿಸಿಕೊಳ್ಳಬಹುದು. ನೀವು ಚಹಾ, ಕಾಫಿ ಅಥವಾ ಕಾಳುಗಳು, ಗಂಜಿ, ಕಿಡ್ನಿ ಬೀನ್ಸ್, ಕಡಲೆ, ಅಕ್ಕಿಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಬಹುದು. ದಾಲ್ಚಿನ್ನಿ ಚಕ್ಕೆಯನ್ನು ನೀರಿನಲ್ಲಿ ಕುದಿಸಿ ಸೇವಿಸಬಹುದು. ನೀರಿನ ಬಾಟಲಿಯಲ್ಲಿ ದಾಲ್ಚಿನ್ನಿ ಚಕ್ಕೆಯನ್ನು  ಹಾಕಿ ಮತ್ತು ದಿನವಿಡೀ ಈ ನೀರನ್ನು ಕುಡಿಯಿರಿ. ಇದರೊಂದಿಗೆ ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ, ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ, ನಿಮಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.


ಇದನ್ನೂ ಓದಿ-Hair Fall Chutney: ಕೂದಲುದುರುವಿಕೆಯಿಂದ ಹಿಡಿದು ತಲೆಹೊಟ್ಟಿನವರೆಗೆ ಎಲ್ಲವನ್ನೂ ತಡೆಗಟ್ಟುತ್ತೆ ಈ ಚಟ್ನಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.