ಬೆಂಗಳೂರು: ಇಂದು ವಿಶ್ವದಲ್ಲಿ ಅತಿ ವೇಗವಾಗಿ ಹರಡುತ್ತಿರುವ ರೋಗಗಳಲ್ಲಿ ಮಧುಮೇಹವೂ ಒಂದು. ಕೆಲವು ವರ್ಷಗಳ ಹಿಂದೆ ಮಧುಮೇಹವನ್ನು ವಯಸ್ಸಾದವರ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂದು ಮಧುಮೇಹವು ಯಾವುದೇ ವಯೋಮಾನದವರನ್ನು ಗುರಿಯಾಗಿಸುತ್ತಿದೆ. ನಮ್ಮ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದನ್ನು ಮಧುಮೇಹ ಎನ್ನುತ್ತಾರೆ. ರಕ್ತದಲ್ಲಿನ ಸಕ್ಕರೆಯನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ, ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಕ್ಕರೆ ರೋಗಿಗಳು ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯಲ್ಲಿನ ಸಮಸ್ಯೆಗಳಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ, ಮಧುಮೇಹ ರೋಗಿಗಳು ತಮ್ಮ ಹೆಚ್ಚಿದ ರಕ್ತದಲ್ಲಿನ ಸಕ್ಕರೆಯನ್ನು ಸುಲಭವಾಗಿ ನಿಯಂತ್ರಿಸಬಹುದು. (Health News In Kannada)


COMMERCIAL BREAK
SCROLL TO CONTINUE READING

ಸ್ಪೋರ್ಟ್ಸ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಮಧುಮೇಹ ರೋಗಿಗಳು ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ 5 ನಿಮಿಷಗಳ ಕಾಲ ವಾಕ್ ಮಾಡಿದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ ಎಂದು ಬಹಿರಂಗಪಡಿಸಿದೆ. ಆಹಾರ ಸೇವಿಸಿದ ನಂತರ ಹೆಚ್ಚು ಹೊತ್ತು ಕುಳಿತುಕೊಳ್ಳುವ ಬದಲು ನಿಂತುಕೊಳುವುದು, ನಡೆದಾಡುವಂತಹ ಹಗುರವಾದ ದೈಹಿಕ ಚಟುವಟಿಕೆಗಳನ್ನು ಮಾಡಿದರೆ, ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳಿದೆ, ಇದರಿಂದಾಗಿ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಯಾವಾಗಲೂ ನಿಯಂತ್ರಣದಲ್ಲಿರುತ್ತದೆ. ಇದರ ಹೊರತಾಗಿ, ಊಟದ ನಂತರ ನಡೆಯುವುದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ ನಮ್ಮ ಹೃದಯವನ್ನು ಸಹ ಆರೋಗ್ಯಕರವಾಗಿರಿಸುತ್ತದೆ.


ಮಧುಮೇಹವನ್ನು ನಿಯಂತ್ರಿಸಲು ಇತರ ಮಾರ್ಗಗಳು
ಪ್ರತಿದಿನ 8 ಗಂಟೆಗಳ ನಿದ್ದೆ ಮಾಡಿ

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡುವ ಜನರಿಗೆ ಮಧುಮೇಹ ಬರುವ ಸಾಧ್ಯತೆಗಳು ಸಾಕಷ್ಟು ಕಡಿಮೆಯಾಗುತ್ತವೆ ಎಂದು ಹೇಳಿದೆ. ಸಾಕಷ್ಟು ನಿದ್ರೆ ಪಡೆಯುವುದರಿಂದ, ನಮ್ಮ ದೇಹದಲ್ಲಿ ಹೆಚ್ಚು ಪ್ಯಾರಸೈಪಥೆಟಿಕ್ ಚಟುವಟಿಕೆ ಇರುತ್ತದೆ, ಇದರಿಂದಾಗಿ ನಮ್ಮ ರಕ್ತದಲ್ಲಿನ ಸಕ್ಕರೆಯು ಸಾಮಾನ್ಯವಾಗಿರುತ್ತದೆ.


30 ನಿಮಿಷಗಳ ವ್ಯಾಯಾಮ
ಮಧುಮೇಹವನ್ನು ತಡೆಗಟ್ಟುವಲ್ಲಿ ವ್ಯಾಯಾಮವು ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಯಮದ ಪ್ರಕಾರ, 30 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವ ಮಾಡುವವರಲ್ಲಿ ಟೈಪ್ -2 ಮಧುಮೇಹ ಅಭಿವುರ್ದ್ಧಿಯಾಗುವ ಅಪಾಯವು 40% ಕಡಿಮೆ ಇರುತ್ತದೆ. ಇದಲ್ಲದೆ, ದೈನಂದಿನ ವ್ಯಾಯಾಮದ ಮೂಲಕ ಟೈಪ್ -1 ಮಧುಮೇಹದ ಅಪಾಯವನ್ನು ಸಹ ಸಾಕಷ್ಟು ಕಡಿಮೆ ಮಾಡಬಹುದು.


ಇದನ್ನೂ ಓದಿ-ಒಂದೇ ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿದೆ ಒಂದು ಅತ್ಯುತ್ತಮ ಡಯಟ್ ಪ್ಲಾನ್!


ನಿಯಮಿತ ಪರೀಕ್ಷೆ ಅಗತ್ಯ
ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸಲು HbA1C ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರಲ್ಲಿ ಕಳೆದ 3 ತಿಂಗಳ ಸಕ್ಕರೆ ಮಟ್ಟವನ್ನು ಪತ್ತೆ ಮಾಡಬಹುದು. ಈ ಪರೀಕ್ಷೆಯ ವರದಿಯ ಆಧಾರದ ಮೇಲೆ ರೋಗಿಯ ಆರೋಗ್ಯ ಎಷ್ಟರ ಮಟ್ಟಿಗೆ ಸುಧಾರಿಸಿದೆ ಎಂಬುದು ತಿಳಿಯುತ್ತದೆ. ಇದರ ಆಧಾರದ ಮೇಲೆ, ರೋಗಿಯು ಇನ್ಸುಲಿನ್ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಾಗುತ್ತದೆ. ಮಧುಮೇಹ ರೋಗಿಯು ಪ್ರತಿ 3 ತಿಂಗಳಿಗೊಮ್ಮೆ HbA1C ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಇದು ಕಾರಣವಾಗಿದೆ.


ಇದನ್ನೂ ಓದಿ-Surya Kumar Yadav ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿದ್ದಾರೆ, ಇದ್ಯಾವ ಕಾಯಿಲೆ? ಯಾರಿಗೆ ಹೆಚ್ಚು ಅಪಾಯ?


ಮಧುಮೇಹ ರೋಗಿಗಳಿಗೆ ಆಹಾರ ಸಲಹೆಗಳು
>> ಶಾಂತ ವಾತಾವರಣದಲ್ಲಿ ಆಹಾರವನ್ನು ಸೇವಿಸಿ.
>> ಒಂದೇ ಬಾರಿಗೆ ಹೆಚ್ಚು ತಿನ್ನಬೇಡಿ.
>> ಎರಡು ಊಟಗಳ ನಡುವೆ 3-4 ಗಂಟೆಗಳ ಅಂತರವನ್ನು ಇರಿಸಿ.
>> ಬಹುಧಾನ್ಯದ ಹಿಟ್ಟಿನ ರೊಟ್ಟಿಯನ್ನು ಸೇವಿಸಿ.
>> ಸಲಾಡ್ನೊಂದಿಗೆ ಊಟವನ್ನು ಪ್ರಾರಂಭಿಸಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ