Side Effects Of Tea : ಹೆಚ್ಚಿನ ಜನರ ದಿನ ಆರಂಭವಾಗುವುದು ಒಂದು ಲೋಟ ಚಹಾದಿಂದ. ಬೆಳಿಗ್ಗೆ ಎದ್ದ ಕೂಡಲೇ ಚಹಾ ಹೀರುವುದೆಂದರೆ ಅದೇನೋ ಉಲ್ಲಾಸ.  ಬೆಳಗ್ಗೆ ಎದ್ದು ಒಂದು ಕಪ್ ಚಹಾದೊಂದಿಗೆ ಪೇಪರ್ ಓದುವುದು ಹಲವರ ವಾಡಿಕೆ. ಇನ್ನು ಕೆಲವರಿಗೆ ಪದೇ ಪದೇ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ನೆನಪಾದಾಗ ಕೈಯಲ್ಲಿ ಒಂದು ಕಪ್ ಚಹಾ ಹಿಡಿಯುವವರು ಕೂಡಾ ಇದ್ದಾರೆ. ಆದರೆ ಒಂದು ದಿನದಲ್ಲಿ ಇಷ್ಟು ಚಹಾ ಕುಡಿಯುವುದು  ಬಹಳ ಹಾನಿಕಾರಕ. ದಿನವೊಂದಕ್ಕೆ ಇಷ್ಟೇ ಚಹಾ ಕುಡಿಯಬೇಕು ಎಂದು ಹೇಳುತ್ತಾರೆ ಆರೋಗ್ಯ ತಜ್ಞರು. 


COMMERCIAL BREAK
SCROLL TO CONTINUE READING

ನೀರಿನಂತೆ ಚಹಾ ಕುಡಿಯುವ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ದಿನಕ್ಕೆ 5 ರಿಂದ 6 ಕಪ್ ಚಹಾ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದಲ್ಲದೆ, ಹೆಚ್ಚು ಚಹಾವನ್ನು ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಚಹಾದಲ್ಲಿ ಕೆಫೀನ್  ಅಂಶ ಕಂಡುಬರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಕುಡಿಯುವುದರಿಂದ ಒತ್ತಡ ಉಂಟಾಗುತ್ತದೆ. ಚಹಾ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ. 


ಇದನ್ನೂ ಓದಿ : Covid-19 New Variant: ಟೆನ್ಶನ್ ಹೆಚ್ಚಿಸಿದ ಕೊರೊನಾ ಹೊಸ ರೂಪಾಂತರಿ, ವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ?


ವರದಿ ಏನು ಹೇಳುತ್ತದೆ  ? :
ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ ದಿನಕ್ಕೆ ನಾಲ್ಕು ಕಪ್ ಚಹಾವನ್ನು ಕುಡಿಯುವುದರಿಂದ ಅನೇಕ ರೀತಿಯ ಹಾನಿ ಉಂಟಾಗುತ್ತದೆ. ಚಹಾದಲ್ಲಿರುವ ಕೆಫೀನ್ ಎದೆಯುರಿ, ಹೆದರಿಕೆ, ನಿದ್ರಾಹೀನತೆ ಮತ್ತು ತಲೆ ಸುತ್ತುವಂಥಹ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.


ದಿನವಿಡೀ ಎಷ್ಟು ಕಪ್ ಚಹಾ ಕುಡಿಯಬೇಕು ? :
ದಿನವಿಡೀ ಒಂದರಿಂದ ಎರಡು ಕಪ್ ಚಹಾವನ್ನು ಮಾತ್ರ ಕುಡಿಯಬೇಕು. ಇದಕ್ಕಿಂತ ಹೆಚ್ಚು ಚಹಾ ಕುಡಿಯುವುದರಿಂದ  ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದರೆ  ಶೀತ ನೆಗಡಿಯಿಂದ  ಬಳಲುತ್ತಿದ್ದರೆ,  ದಿನಕ್ಕೆ ಎರಡರಿಂದ ಮೂರು ಕಪ್ ಕಷಾಯ ಅಥವಾ ಗಿಡಮೂಲಿಕೆ ಚಹಾವನ್ನು ಕುಡಿಯಬಹುದು. 


ಇದನ್ನೂ ಓದಿ : Menopause : ಋತುಬಂಧದಲ್ಲಿ ಆರೋಗ್ಯವಾಗಿರಲು ಮಹಿಳೆಯರಿಗೆ ಸಲಹೆಗಳು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.