Covid-19 New Variant: ಟೆನ್ಶನ್ ಹೆಚ್ಚಿಸಿದ ಕೊರೊನಾ ಹೊಸ ರೂಪಾಂತರಿ, ವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ?

Omicron New Variant: ಅಮೇರಿಕಾದಲ್ಲಿ ಕಂಡು ಬಂದಿರುವ ಇತ್ತೀಚಿನ ಕೊರೊನಾ ಪ್ರಕರಣಗಳಲ್ಲಿ ಒಮಿಕ್ರಾನ್ ನ ಹೊಸ ರೂಪಾಂತರಿಯಾಗಿರುವ BA.4.6 ಪ್ರಕರಣಗಳು ಶೇ.9 ಕ್ಕಿಂತ ಹೆಚ್ಚಾಗಿವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಾಹಿತಿ ನೀಡಿದೆ.  

Written by - Nitin Tabib | Last Updated : Sep 14, 2022, 07:11 PM IST
  • ಮಾರುಕಟ್ಟೆಗೆ ವ್ಯಾಕ್ಸಿನ್ ಲಗ್ಗೆ ಇಟ್ಟ ಬಳಿಕ ಕೊರೊನಾ ಮಹಾಮಾರಿಯಿಂದ ಸಾಕಷ್ಟು ನೆಮ್ಮದಿ ಸಿಕ್ಕಿದೆ,
  • ಆದರೆ ಇದುವರೆಗೆ ಅದರ ಅಂತ್ಯದ ಬಗ್ಗೆ ಯಾವುದೇ ನಿಶ್ಚಿತ ಅಧ್ಯಯನ ಹೊರಬಂದಿಲ್ಲ.
  • ಏತನ್ಮಧ್ಯೆ, ಕೋವಿಡ್‌ನ ಓಮಿಕ್ರಾನ್ ರೂಪಾಂತರದ ಹೊಸ ಉಪ-ರೂಪಾಂತರ ಇದೀಗ ಮತ್ತಷ್ಟು ಕಳವಳ ಉಂಟುಮಾಡಲು ಪ್ರಾರಂಭಿಸಿದೆ.
Covid-19 New Variant: ಟೆನ್ಶನ್ ಹೆಚ್ಚಿಸಿದ ಕೊರೊನಾ ಹೊಸ ರೂಪಾಂತರಿ, ವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ? title=
Covid-19 New Variant

Omicron New Variant BA.4.6: ಮಾರುಕಟ್ಟೆಗೆ ವ್ಯಾಕ್ಸಿನ್ ಲಗ್ಗೆ ಇಟ್ಟ ಬಳಿಕ ಕೊರೊನಾ ಮಹಾಮಾರಿಯಿಂದ ಸಾಕಷ್ಟು ನೆಮ್ಮದಿ ಸಿಕ್ಕಿದೆ, ಆದರೆ ಇದುವರೆಗೆ ಅದರ ಅಂತ್ಯದ ಬಗ್ಗೆ ಯಾವುದೇ ನಿಶ್ಚಿತ ಅಧ್ಯಯನ ಹೊರಬಂದಿಲ್ಲ. ಏತನ್ಮಧ್ಯೆ, ಕೋವಿಡ್‌ನ ಓಮಿಕ್ರಾನ್ ರೂಪಾಂತರದ ಹೊಸ ಉಪ-ರೂಪಾಂತರ ಇದೀಗ ಮತ್ತಷ್ಟು ಕಳವಳ ಉಂಟುಮಾಡಲು ಪ್ರಾರಂಭಿಸಿದೆ. Omicron ನ ಉಪ-ರೂಪಾಂತರಿಯಾಗಿರುವ BA.4.6 US ನಲ್ಲಿ ವೇಗವಾಗಿ ಹರಡುತ್ತಿದೆ. ಇದು ಯುಕೆಯಲ್ಲಿಯೂ ಹರಡಿರುವುದು ಈಗಾಗಲೇ ದೃಢಪಟ್ಟಿದೆ. ಯುಕೆ ಹೆಲ್ತ್ ಪ್ರೊಟೆಕ್ಷನ್ ಏಜೆನ್ಸಿ (ಯುಕೆಎಚ್‌ಎಸ್‌ಎ) ಈ ಕೋವಿಡ್ ರೂಪಾಂತರಿಯ ಕುರಿತು ನೀಡಿರುವ ಇತ್ತೀಚಿನ ಬ್ರೀಫಿಂಗ್ ಪ್ರಕಾರ, ಆಗಸ್ಟ್ 14 ರಿಂದ ಪ್ರಾರಂಭವಾಗುವ ವಾರದಲ್ಲಿ ಯುಕೆಯಲ್ಲಿ ಪಡೆಯಲಾಗಿರುವ ಶೇ.3.3 ಮಾದರಿಗಳಲ್ಲಿ BA.4.6 ಕಂಡುಬಂದಿದೆ ಎನ್ನಲಾಗಿದೆ.

ಹಲವು ದೇಶಗಳಿಗೆ ಹರಡಿದೆ ಕೊರೊನಾ ಹೊಸ ರೂಪಾಂತರಿ
ಇನ್ನೊಂದೆಡೆ, ಅಮೇರಿಕಾದಲ್ಲಿ ಕಂಡು ಬಂದಿರುವ ಇತ್ತೀಚಿನ ಕೊರೊನಾ ಪ್ರಕರಣಗಳಲ್ಲಿ ಒಮಿಕ್ರಾನ್ ನ ಹೊಸ ರೂಪಾಂತರಿಯಾಗಿರುವ BA.4.6 ಪ್ರಕರಣಗಳು ಶೇ.9 ಕ್ಕಿಂತ ಹೆಚ್ಚಾಗಿವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಾಹಿತಿ ನೀಡಿದೆ. ಒಮಿಕ್ರಾನ್ ನ ಈ ಉಪರೂಪಾಂತರಿಯನ್ನು ವಿಶ್ವಾದ್ಯಂತದ ಹಲವು ದೇಶಗಳಲ್ಲಿ ಗುರುತಿಸಲಾಗಿದೆ. ಹೀಗಿರುವಾಗ ಓಮಿಕ್ರಾನ್ ನ ಈ ಉಪರೂಪಾಂತರಿಯ ಕುರಿತು ಒಬ್ಬರು ಎಷ್ಟು ಆತಂಕಪಡಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ, 

BA.4.6 ಓಮಿಕ್ರಾನ್‌ನ ಉಪ ರೂಪಾಂತರಿ BA.4 ರೂಪಾಂತರಿಯ ಕುಟುಂಬಕ್ಕೆ ಸೇರಿದೆ. BA.4 ಅನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಜನವರಿ 2022 ರಲ್ಲಿ ಪತ್ತೆಹಚ್ಚಲಾಗಿತ್ತು ಮತ್ತು ಅಂದಿನಿಂದ BA.5 ರೂಪಾಂತರಿ ವಿಶ್ವಾದ್ಯಂತ ಹರಡಿತ್ತು.

ಇದನ್ನೂ ಓದಿ-ಶರೀರದಲ್ಲಿ ಈ ನಾಲ್ಕು ವಿಟಮಿನ್ ಗಳ ಕೊರತೆಯೇ ದೃಷ್ಟಿ ಮಂಜಾಗುವುದಕ್ಕೆ ಕಾರಣ

ಈ ಉಪ ರೂಪಾಂತರಿ ಎಷ್ಟು ಅಪಾಯಕಾರಿಯಗಿದೆ?
BA.4.6 ರೂಪಾಂತರಿ ಹೇಗೆ ಹೊರಹೊಮ್ಮಿದೆ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಇದು ಮರುಸಂಯೋಜಕ ಆವೃತ್ತಿಯಾಗಿರಬಹುದು ಎನ್ನಲಾಗುತಿದೆ. ಎರಡು ವಿಭಿನ್ನ ರೀತಿಯ SARS-CoV-2 (COVID-19 ಗೆ ಕಾರಣವಾಗುವ ವೈರಸ್) ಒಂದೇ ಸಮಯದಲ್ಲಿ ಒಂದೇ ವ್ಯಕ್ತಿಗೆ ಸೋಂಕು ತಗುಲಿದಾಗ ಮರುಸಂಯೋಜನೆ ಸಂಭವಿಸುತ್ತದೆ. ಆದರೆ BA.4.6 ಅನೇಕ ರೀತಿಯಲ್ಲಿ BA.4 ಅನ್ನು ಹೋಲುತ್ತದೆ. ಇದು ಸ್ಪೈಕ್ ಪ್ರೋಟೀನ್‌ನಲ್ಲಿ ರೂಪಾಂತರಗಳನ್ನು ಉಂಟುಮಾಡುತ್ತದೆ ಮತ್ತು ವೈರಸ್‌ನ ಮೇಲ್ಮೈಯಲ್ಲಿರುವ ಪ್ರೋಟೀನ್ ಅನ್ನು ನಮ್ಮ ಜೀವಕೋಶಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ವಾಸ್ತವದಲ್ಲಿ, ಈ ರೂಪಾಂತರವು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂಬ ಯಾವುದೇ ವರದಿಗಳು ಇದುವರೆಗೆ ಪ್ರಕಟಗೊಂಡಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Motion Sickness: ನೀವು ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಇಲ್ಲಿದೆ ಪರಿಹಾರ

ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವುದು ತುಂಬಾ ಮುಖ್ಯ
ಇಂತಹ ಪರಿಸ್ಥಿತಿಯಲ್ಲಿ, ನಾವು ಲಸಿಕೆಯನ್ನು ಗಂಭೀರವಾಗಿ ಪರಿಗಣಿಸುವುದು ತುಂಬಾ ಮುಖ್ಯವಾಗಿದೆ. ವ್ಯಾಕ್ಸಿನೇಷನ್ ಗಂಭೀರ ಅನಾರೋಗ್ಯದ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ ಎಂದು ಹಲವಾರು ವರದಿಗಳು ಹೇಳಿವೆ. ಅಷ್ಟೇ ಅಲ್ಲ, ಲಸಿಕೆಯು ಸಾಂಕ್ರಾಮಿಕ ರೋಗದ ವಿರುದ್ಧ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. BA.4.6 ಸೇರಿದಂತೆ ಹೊಸ ರೂಪಾಂತರಗಳನ್ನು ತುಂಬಾ ಹತ್ತಿರದಿಂದ ಅಧ್ಯಯನ ನಡೆಸಲಾಗುತ್ತಿದೆ, ಏಕೆಂದರೆ ಅವುಗಳು COVID ಮಹಾಮಾರಿಯ ಮುಂದಿನ ಅಲೆ ಉಂಟುಮಾಡುವ ಸಾಧ್ಯತೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News