Tips for phlegm: ಹವಾಮಾನ ಬದಲಾಗುತ್ತಿದ್ದಂತೆ, ತಕ್ಷಣ ಗಂಟಲು ನೋವು ಮತ್ತು ಕಫದ ಸಮಸ್ಯೆಗಳು ಆರಂಭವಾಗುತ್ತವೆ. ಆನೇಕರು ಕೆಮ್ಮು ಮತ್ತು ಕಫಾದ ಸಮಸ್ಯಗಳನ್ನು ನಿವಾರಿಸಿಕೊಳ್ಳು ವೈದ್ಯರ ಬಳಿ ಹೋಗುತ್ತಾರೆ, ಹಲವಾರು ಬಗೆಯ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಯಾವುದು ಕೂಡ ಅಷ್ಟು ಬೇಗ ನಿಮ್ಮ ಕಫಾವನ್ನು ತೆಗೆದು ಹಾಕಲು ಸಹಾಯ ಮಾಡುವುದಿಲ್ಲ. ಆದರೆ ಈ ಒಂದು ಟೀ ಕುಡಿಯುವುದರಿಂದ ನೀವು ನಿಮ್ಮ ಕಫಾ ಹಾಗೂ ಕೆಮ್ಮಿನ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ದೂರ ಮಾಡಬಹುದು. ಅಷ್ಟಕ್ಕೂ ಆ ಟೀ ಯಾವುದು..? ಅದನ್ನು ತಯಾರಿಸುವುದು ಹೇಗೆ..? ಈ ಕುರಿತು ಮಾಹಿತಿ ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

ಹವಾಮಾನ ಬದಲಾದಂತೆ ನೆಗಡಿ, ಕೆಮ್ಮು, ಗಂಟಲಿನಲ್ಲಿ ಕಫ ಮುಂತಾದ ಸಮಸ್ಯೆಗಳು ಬರುತ್ತವೆ. ಪರಿಹಾರ ಪಡೆಯಲು ವೈದ್ಯರನ್ನು ಹೆಚ್ಚಾಗಿ ನೋಡಬೇಕು. ಔಷಧಿ ನೀಡಿದರೂ ಆ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಹವಾಮಾನ ಬದಲಾದ ತಕ್ಷಣ ಗಂಟಲು ನೋವು ಮತ್ತು ಕಫದ ಸಮಸ್ಯೆ ಇದ್ದರೆ ದಾಳಿಂಬೆ ಸಿಪ್ಪೆಯಿಂದ ಟೀ ಮಾಡಿ ಕುಡಿಯಿರಿ. ದಾಳಿಂಬೆ ಸಿಪ್ಪೆಯಲ್ಲಿ ಫೀನಾಲಿಕ್ ಆಮ್ಲಗಳು, ಹೈಡ್ರೊಲೈಜೆಬಲ್ ಟ್ಯಾನಿನ್‌ಗಳು, ಫ್ಲೇವನಾಯ್ಡ್‌ಗಳು, ಪ್ರೋಟೀನ್‌ಗಳು, ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಮೃದ್ಧವಾಗಿವೆ. ಈ ಎಲ್ಲಾ ಪೋಷಕಾಂಶಗಳು ಮೆದುಳನ್ನು ಕ್ರಿಯಾಶೀಲವಾಗಿಸುವ ಮೂಲಕ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ದಾಳಿಂಬೆ ಸಿಪ್ಪೆಯ ಟೀ ತಯಾರಿಸುವುದು ತುಂಬಾ ಸುಲಭ. ಇದನ್ನು ಕುಡಿಯುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. 


ದಾಳಿಂಬೆ ಸಿಪ್ಪೆಯೊಂದಿಗೆ ಚಹಾವನ್ನು ತಯಾರಿಸುವುದು ಹೇಗೆ..?
ಮೊದಲಿಗೆ, ದಾಳಿಂಬೆ ಸಿಪ್ಪೆಯನ್ನು 3-4 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅವುಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿ ಪುಡಿ ಮಾಡಿಕೊಳ್ಳಿ. ಈಗ ಖಾಲಿ ಟೀ ಬ್ಯಾಗ್‌ಗೆ ದಾಳಿಂಬೆ ಹಣ್ಣಿನ ಸಿಪ್ಪೆಗಳನ್ನು ತುಂಬಿಸಿ. ಈಗ ಒಂದು ಕಪ್ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಸಾಮಾನ್ಯ ಟೀ ಬ್ಯಾಗ್‌ನಂತೆ ದಾಳಿಂಬೆ ಸಿಪ್ಪೆಯೊಂದಿಗೆ ಟೀ ಬ್ಯಾಗ್ ಅನ್ನು ಮಿಶ್ರಣ ಮಾಡಿ. ದಾಳಿಂಬೆ ಸಿಪ್ಪೆಯ ಚಹಾ ಸಿದ್ಧವಾಗಿದೆ ಎಂದರ್ಥ. 


ದಾಳಿಂಬೆ ಸಿಪ್ಪೆಯಲ್ಲಿ ಫೈಬರ್, ವಿಟಮಿನ್ ಕೆ, ಸಿ, ಬಿ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿವೆ . ದಾಳಿಂಬೆ ಸಿಪ್ಪೆಗಳು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ದಾಳಿಂಬೆ ಸಿಪ್ಪೆಯಲ್ಲಿರುವ ಪಾಲಿಫಿನಾಲ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.


ದಾಳಿಂಬೆ ಸಿಪ್ಪೆಯಲ್ಲಿ ಇರುವ ಎಲಾಜಿಕ್ ಆಸಿಡ್ ಮತ್ತು ಪಿಕ್ಲುಜಿನ್ ಗುಣಲಕ್ಷಣಗಳು ಆಹಾರವನ್ನು ಸೇವಿಸಿದ ನಂತರ ದೇಹದಲ್ಲಿ ಉಂಟಾಗುವ ಗ್ಲೂಕೋಸ್ ಸ್ಪೈಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತವೆ. ಅದಕ್ಕಾಗಿಯೇ ಮಧುಮೇಹಿಗಳು ದಾಳಿಂಬೆ ಚಹಾವನ್ನು ಯಾವಾಗ ಬೇಕಾದರೂ ಕುಡಿಯಬಹುದು.


ನಿಮಗೆ ಹಂಟಲು ನೋವು, ಕಫಾದ ಸಮಸ್ಯೆ ಹಾಗೂ ಕೆಮ್ಮು ಕಾಡುತ್ತಿದ್ದರೆ, ದಾಳಿಂಬೆ ಸಿಪ್ಪೆಯಿಂದ ಟೀ ಮಾಡಿ ಕುಡಿಯುವುದು ತುಂಬಾ ಉಪಯುಕ್ತವಾಗಿದೆ. ದಾಳಿಂಬೆ ಸಿಪ್ಪೆಯಲ್ಲಿರುವ ಆಂಟಿಮೈಕ್ರೊಬಿಯಲ್ ಅಂಶಗಳು ಬ್ಯಾಕ್ಟೀರಿಯಾ ಮತ್ತು ಸೋಂಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಆಕ್ಸಿಡೇಟಿವ್ ಒತ್ತಡದಿಂದಾಗಿ, ಮೆದುಳು ತನ್ನ ಕಾರ್ಯ ಸಾಮರ್ಥ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ಮರೆವಿನ ಕಾಯಿಲೆಗಳಾದ ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆ ಉಂಟಾಗುತ್ತದೆ. ಆದರೆ ಅಧ್ಯಯನದ ಪ್ರಕಾರ, ದಾಳಿಂಬೆ ಸಿಪ್ಪೆಯ ಸಾರವನ್ನು ಕುಡಿಯುವುದರಿಂದ ಅವರ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ದಾಳಿಂಬೆ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡದ ಹಾನಿಯನ್ನು ಸಹ ಕಡಿಮೆ ಮಾಡುತ್ತದೆ.


ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರೂ ದಾಳಿಂಬೆ ಸಿಪ್ಪೆಯ ಟೀಯನ್ನು ಪ್ರತಿನಿತ್ಯ ಕುಡಿಯುವುದು ತುಂಬಾ ಆರೋಗ್ಯಕರ. ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವವರು ದಿನಕ್ಕೆ ಎರಡು ಬಾರಿ ಈ ಪಾನೀಯವನ್ನು ಕುಡಿಯಲು ಅಭ್ಯಾಸ ಮಾಡಿಕೊಳ್ಳಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.