Benefits Of Sitting On Floor: ಕಾಲ ಬದಲಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿ ಹಾಗೂ ಬದಲಾಗುತ್ತಿರುವ ಕಾಲದ ಮಧ್ಯೆ ಹಲವು ಹಳೆ ಸಂಪ್ರದಾಯಗಳು ಹಿಂದಕ್ಕೆ ಬೀಳಲಾರಂಭಿಸಿವೆ. ನೆಲದ ಮೇಲೆ ಕುಳಿತುಕೊಂಡು ಆಹಾರ ಸೇವಿಸುವ ಅಭ್ಯಾಸ ಕೂಡ ಅವುಗಳಲ್ಲಿ ಒಂದು. ನೆಲದ ಮೇಲೆ ಕುಳಿತು ಕೆಲಸ ಮಾಡುವುದರ ಹಿಂದೆ ಏನು ಸುಖ ಇದೆ ಎಂಬುದು ನೆಲದ ಮೇಲೆ ಕುಳಿತು ಕೆಲಸ ಮಾಡುವವರಿಗೆ ಮಾತ್ರ ತಿಳಿದಿದೆ. ಹಿಂದಿನ ಕಾಲದಲ್ಲಿ ನಮ್ಮ ಮನೆಯಲ್ಲಿನ ಗುರು ಹಿರಿಯರು ನೆಲದ ಮೇಲೆ ಕುಳಿತುಕೊಂಡೆ ಊಟ ಮಾಡುತಿದ್ದರು. ನೆಲದ ಮೇಲೆ ಕುಳಿತುಕೊಳ್ಳುವುದು ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತದೆ. ಹೀಗಂತ ನಾವು ಹೇಳುತ್ತಿಲ್ಲ. ಹಲವಾರು ಅಧ್ಯಯನಗಳು ಹಾಗೂ ಸಂಶೋಧನೆಯಿಂದ ಅದು ಸಾಬೀತಾಗಿದೆ. ಆಯುರ್ವೇದ ಕೂಡ ನೆಲದ ಮೇಲೆ ಕುಳಿತು ಕೆಲಸ ಮಾಡುವುದನ್ನು ಶಿಫಾರಸ್ಸು ಮಾಡುತ್ತದೆ. ನೆಲದ ಮೇಲೆ ಕುಳಿತು ಕೆಲಸ ಮಾಡುವುದರ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ, 

COMMERCIAL BREAK
SCROLL TO CONTINUE READING

ನೆಲದ ಮೇಲೆ ಕುಳಿತುಕೊಳ್ಳುವುದರಿನ್ದಾಗುವ ಲಾಭಗಳೇನು?
ಜೀರ್ಣಕ್ರಿಯೆಯಲ್ಲಿ ಸುಧಾರಣೆ

ಸುಖಾಸನ ಯೋಗಾಸನದ ಮೂಲಕ ನೆಲದ ಮೇಲೆ ಕಾಲು ಚಾಚಿ ಕುಳಿತುಕೊಳ್ಳುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಾವು ತಿನ್ನಲು ನಮ್ಮ ತಟ್ಟೆಯನ್ನು ನೆಲದ ಮೇಲೆ ಇರಿಸಿದಾಗ, ನಾವು ತಿನ್ನಲು ನಮ್ಮ ದೇಹವನ್ನು ಸ್ವಲ್ಪ ಮುಂದೆ ಬಾಗಿಸಬೇಕಾಗುತ್ತದೆ ಮತ್ತು ನಂತರ ನಾವು ನಮ್ಮ ಮೂಲ ಸ್ಥಾನಕ್ಕೆ ಬರುತ್ತೇವೆ. ದೇಹವನ್ನು ಪದೇ ಪದೇ ಹಿಂದೆ-ಮುಂದೆ ಮಾಡುವುದರಿಂದ, ಹೊಟ್ಟೆಯ ಸ್ನಾಯುಗಳಲ್ಲಿ  ಪ್ರಚೋದನೆ ಉಂಟಾಗುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯು ಹೆಚ್ಚಾಗುತ್ತದೆ ಮತ್ತು ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗಲು ಪ್ರಾರಂಭಿಸುತ್ತದೆ.
 
ಬೆನ್ನುಮೂಳೆ ಬಲಿಷ್ಠವಾಗುತ್ತದೆ
ಆರೋಗ್ಯ ತಜ್ಞರ ಪ್ರಕಾರ, ಬೆನ್ನುಮೂಳೆಯು ಆರೋಗ್ಯಕರವಾಗಿರಬೇಕಾದರೆ, ನೆಲದ ಮೇಲೆ ಕುಳಿತುಕೊಳ್ಳಬೇಕು. ಇದನ್ನು ಮಾಡುವುದರಿಂದ ನೀವು ಸ್ಥಿರವಾಗಿ ಕುಳಿತುಕೊಳ್ಳುತ್ತೀರಿ ಮತ್ತು ನಿಮ್ಮ ಬೆನ್ನುಮೂಳೆಯ ಮೇಲೆ ಯಾವುದೇ ಹೆಚ್ಚಿನ ಒತ್ತಡ ಬೀಳುವುದಿಲ್ಲ.  ನೆಲದ ಮೇಲೆ ಕುಳಿತುಕೊಳ್ಳುವುದು ನಮ್ಮ ಬೆನ್ನುಮೂಳೆಯ ಸಂರಚನೆಯನ್ನು ಸುಧಾರಿಸುತ್ತದೆ.
 
ನೆಲದ ಮೇಲೆ ಕುಳಿತರೆ ಮನಸ್ಸು ನಿರಾಳವಾಗುತ್ತದೆ
ಪದ್ಮಾಸನ ಮತ್ತು ಸುಖಾಸನಗಳು ಧ್ಯಾನಕ್ಕೆ ಸೂಕ್ತವಾದ ಭಂಗಿಗಳಾಗಿವೆ. ಈ ಆಸನಗಳು ಮನಸ್ಸಿನ ಒತ್ತಡವನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ. ಈ ಭಂಗಿಗಳಲ್ಲಿ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಆಮ್ಲಜನಕದ ಹರಿವು ಹೆಚ್ಚಾಗುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ.
 
ನೆಲದ ಮೇಲೆ ಕುಳಿತುಕೊಳ್ಳುವುದು ಶರೀರದ ಫ್ಲೆಕ್ಸಿಬಿಲಿಟಿ ಅಥವಾ ಲೌಚಿಕತೆ ಹೆಚ್ಚಿಸುತ್ತದೆ
ನೀವು ನೆಲದ ಮೇಲೆ ಕುಳಿತಾಗ, ನಿಮ್ಮ ದೇಹದ ಕೆಳಗಿನ ಅರ್ಧದಷ್ಟು ಭಾಗದ ಸ್ನಾಯುಗಳು ವಿಸ್ತರಿಸಲ್ಪಡುತ್ತವೆ, ಅದು ನಮ್ಮ ದೇಹಕ್ಕೆ ಸಾಕಷ್ಟು ಲೌಚಿಕತೆ ಅಥವಾ ಫ್ಲೆಕ್ಸಿಬಿಲಿಟಿ ನೀಡುತ್ತದೆ ಮತ್ತು ನಿಮ್ಮ ಕಾಲುಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ಕುಳಿತುಕೊಳ್ಳುವುದು ಸೊಂಟ, ಕಾಲುಗಳು ಮತ್ತು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ, ಇದು ದೇಹದಲ್ಲಿ ನೈಸರ್ಗಿಕ ಫ್ಲೆಕ್ಸಿಬಿಲಿಟಿಯನ್ನು ಉತ್ತೇಜಿಸುತ್ತದೆ.
 
ಪೃಷ್ಠ ಭಾಗದ ಸ್ನಾಯುಗಳು ಬಲಿಷ್ಠವಾಗುತ್ತವೆ
ದುರ್ಬಲ ಪೃಷ್ಠ ಭಾಗ ನಮ್ಮ  ಸ್ಥಿರತೆ ಮತ್ತು ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸೊಂಟ ಮತ್ತು ಪೃಷ್ಠಭಾಗ ದುರ್ಬಲವಾಗಿದ್ದರೆ, ನೆಲದ ಮೇಲೆ ಹೆಚ್ಚು ಕುಳಿತುಕೊಳ್ಳಿ. ನೆಲದ ಮೇಲೆ ಕುಳಿತುಕೊಳ್ಳುವುದರಿಂದ, ಸೊಂಟದ ಸ್ನಾಯುಗಳು ಗಟ್ಟಿಗೊಳ್ಳುತ್ತವೆ ಮತ್ತು ಇದರಿಂದ ನಿಮ್ಮ ಪೃಷ್ಠಭಾಗವೂ ಕೂಡ ಬಲವಾಗುತ್ತದೆ.


ಇದನ್ನೂ ಓದಿ-Healthy Eating Habits: ಚಮಚ ಬಿಟ್ಟು ನಿಮ್ಮ ಕೈಯಾರೆ ಊಟ ಮಾಡುವುದರಿಂದಾಗುವ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?
 
ಲಾಂಗೆಟಿವಿಟಿ ಉತ್ತಮವಾಗಿರುತ್ತದೆ
ನೆಲದ ಮೇಲೆ 'ಎದ್ದು ಕುಳಿತುಕೊಳ್ಳುವ' ಸಾಮರ್ಥ್ಯವು ದೀರ್ಘಾಯುಷ್ಯವನ್ನು ಸುಧಾರಿಸುತ್ತದೆ.ಇದು ನಮ್ಮ ಒಟ್ಟಾರೆ ಚಲನೆಯನ್ನು ಸ್ಥಿರಗೊಳಿಸುತ್ತದೆ.


ಇದನ್ನೂ ಓದಿ-Boiled Lemon Water: ಕುದಿಸಿದ ನಿಂಬೆ ನೀರಿನ ಲಾಭಗಳು ನಿಮಗೆಷ್ಟು ಗೊತ್ತು? ಈ ಸಮಯ ಸೇವಿಸಿದರೆ ಉತ್ತಮ

(ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.