Health Tips: ವೇಗವಾಗಿ ಬದಲಾಗುತ್ತಿರುವ ಸಂಸ್ಕೃತಿ ಮತ್ತು ಜೀವನಶೈಲಿಯ ನಡುವೆ, ಆಹಾರ ಸೇವನೆಯ ವಿಧಾನದಲ್ಲಿಯೂ ಪ್ರಮುಖ ಬದಲಾವಣೆಗಳನ್ನು ಗಮನಿಸಲಾಗಿದೆ. ಅದರಲ್ಲೂ ಚಮಚದ ಬಳಕೆ ತುಂಬಾ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ, ಕೈಯಿಂದ ತಿನ್ನುವ ಬದಲು, ಚಮಚದಿಂದ ಆಹಾರ ಸೇವಿಸುವ ಪ್ರವೃತ್ತಿ ವೇಗವಾಗಿ ಹೆಚ್ಚಾಗತೊಡಗಿದೆ. ಅದರಲ್ಲಿಯೂ ಯುವಕರು ಇದನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಪೌಷ್ಟಿಕತಜ್ಞರ ಪ್ರಕಾರ, ಕೈಗಳಿಂದ ತಿನ್ನುವ ಪ್ರಕ್ರಿಯೆಯು ಚಮಚಕ್ಕಿಂತ ಉತ್ತಮವಾಗಿದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಆಹಾರವನ್ನು ಚಮಚದ ಬದಲು ಕೈಯಿಂದ ಏಕೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಚಮಚದಿಂದ ಆಹಾರ ಸೇವಿಸುವುದು ಏಕೆ ಹಾನಿಕಾರಕ
ಇತ್ತೀಚೆಗೆ ಪ್ರಕಟವಾದ ಒಂದು ಆರೋಗ್ಯ ವರದಿಯ ಪ್ರಕಾರ, ಚಮಚ ಅಥವಾ ಫೋರ್ಕ್ ಸಹಾಯದಿಂದ ದೀರ್ಘಕಾಲದವರೆಗೆ ಆಹಾರವನ್ನು ಸೇವಿಸುವ ಜನರು ರಕ್ತದಲ್ಲಿನ ಸಕ್ಕರೆಯ ಸಮತೋಲನ ಹದಗೆಡುವ ಅಪಾಯ ಇರುತ್ತದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆಯೂ ಹೆಚ್ಚು. ಆದ್ದರಿಂದ, ಚಮಚದ ಬದಲಿಗೆ ಕೈಗಳಿಂದ ಆಹಾರವನ್ನು ತಿನ್ನಲು ಪ್ರಯತ್ನಿಸಬೇಕು ಎನ್ನಲಾಗಿದೆ.
ಕೈಯಿಂದ ಆಹಾರ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಉತ್ತಮ ರುಚಿ
ಆಯುರ್ವೇದದ ಪ್ರಕಾರ ಕೈಯಿಂದ ಆಹಾರವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಕೈಯಿಂದ ಆಹಾರವನ್ನು ತಿನ್ನುವುದರಿಂದ ರುಚಿಯ ಭಾವನೆ ಉತ್ತಮವಾಗಿರುತ್ತದೆ, ಆಗ ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ.
ಸ್ನಾಯುಗಳಿಗೆ ವ್ಯಾಯಾಮ
ಕೈಗಳಿಂದ ಆಹಾರವನ್ನು ಸೇವಿಸುವಾಗ, ಕೈಗಳ ಸ್ನಾಯುಗಳ ವ್ಯಾಯಾಮವು ಉತ್ತಮ ರೀತಿಯಲ್ಲಿ ಪೂರ್ಣಗೊಳ್ಳುತ್ತದೆ. ಅಲ್ಲದೆ, ಕೈಗಳಿಂದ ಆಹಾರವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಎನ್ನಲಾಗಿದೆ. ಆಹಾರವನ್ನು ತಿನ್ನುವಾಗ, ಮಿಶ್ರಣ ಮಾಡುವಾಗ ಅಥವಾ ತಯಾರಿಸುವಾಗ, ನಮ್ಮ ಕೈಯ ಎಲ್ಲಾ ಕೀಲುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ, ಇದರಿಂದಾಗಿ ಅವುಗಳ ಫ್ಲೆಕ್ಸಿಬಿಲಿಟಿ ಅಂದರೆ ಲೌಚಿಕತೆ ಕೂಡ ಉತ್ತಮವಾಗಿರುತ್ತದೆ.
ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ
ಆಯುರ್ವೇದದ ಪ್ರಕಾರ, ನಮ್ಮ ಬೆರಳುಗಳ ಮೇಲಿನ ಭಾಗದಲ್ಲಿರುವ ನರಗಳ ಪುನರಾವರ್ತಿತ ಸ್ಪರ್ಶದಿಂದಾಗಿ ನಮ್ಮ ನಮ್ಮ ಜೀರ್ಣಕ್ರಿಯೆಯ ಶಕ್ತಿ ಉತ್ತಮವಾಗುತ್ತದೆ. ಅಲ್ಲದೆ, ಕೈಗಳಿಂದ ವಸ್ತುಗಳನ್ನು ತಿನ್ನುವಾಗ, ಅದರ ಪರಿಮಳ ಮತ್ತು ರುಚಿಯನ್ನು ಸಹ ಉತ್ತಮ ರೀತಿಯಲ್ಲಿ ಅನುಭವಿಸಬಹುದು.
ಇದನ್ನೂ ಓದಿ-Eating Banana: ಮಾರುಕಟ್ಟೆಯಲ್ಲಿ ಸಿಗುವ ಈ ರೀತಿಯ ಬಾಳಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಹಾನಿಯೇ ಜಾಸ್ತಿ
ತಿನ್ನುವ ಮೊದಲು ಕೈ ತೊಳೆಯಿರಿ
ಆರೋಗ್ಯ ತಜ್ಞರ ಪ್ರಕಾರ, ನೀವು ಆಹಾರ ಸೇವಿಸುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಕೆಲವು ಕೆಲಸಗಳನ್ನು ಮಾಡುವಾಗ, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ನಮ್ಮ ಕೈಯಲ್ಲಿ ಅಂಟಿಕೊಂಡಿರಬಹುದು, ಅವು ಆಹಾರದ ಜೊತೆಗೆ ಹೊಟ್ಟೆ, ಗಂಟಲು, ಬಾಯಿ ಮತ್ತು ಕರುಳನ್ನು ತಲುಪಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಏನನ್ನಾದರೂ ತಿನ್ನುವ ಮೊದಲು ಕೈ ತೊಳೆಯುವುದು ಉತ್ತಮ.
ಇದನ್ನೂ ಓದಿ-Boiled Lemon Water: ಕುದಿಸಿದ ನಿಂಬೆ ನೀರಿನ ಲಾಭಗಳು ನಿಮಗೆಷ್ಟು ಗೊತ್ತು? ಈ ಸಮಯ ಸೇವಿಸಿದರೆ ಉತ್ತಮ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.