High-Fiber Foods : ಮಧುಮೇಹ ರೋಗದಲ್ಲಿ ರಕ್ತದಲ್ಲಿನ  ಸಕ್ಕರೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಈ ಕಾರಣಕ್ಕಾಗಿಯೇ ಮಧುಮೇಹಿಗಳಿಗೆ ಆರೋಗ್ಯಕರ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಈ ಆಹಾರದ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮಧುಮೇಹಿಗಳಿಗೆ ಫೈಬರ್ ಭರಿತ ಆಹಾರ ಬಹಳಷ್ಟು ಸಹಾಯ ಮಾಡುತ್ತದೆ. ಫೈಬರ್ ನಲ್ಲಿ ಕೂಡಾ ಎರಡು ರೀತಿಯ ಫೈಬರ್ ಗಳಿವೆ. ಒಂದು ಕರಗುವ ಫೈಬರ್ ಇನ್ನೊಂದು ಕರಗದ ಫೈಬರ್. ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ, ಕರಗುವ ಫೈಬರ್ ಮಧುಮೇಹ ರೋಗಿಗಳಿಗೆ ಹೆಚ್ಚು ಸಹಕಾರಿ. ಏಕೆಂದರೆ ಇದು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಮಧುಮೇಹದಲ್ಲಿ ಈ ಫೈಬರ್ ಭರಿತ ಆಹಾರವನ್ನು ಸೇವಿಸಿ :
1. ಅಗಸೆ ಬೀಜಗಳು : ಅಗಸೆ ಬೀಜಗಳು ಸೂಪರ್‌ಫುಡ್‌  ಇದ್ದಂತೆ.  ಇದು ಕರಗದ ಫೈಬರ್‌ನ ಸಮೃದ್ಧ ಮೂಲವಾಗಿದೆ, ನಿಯಮಿತವಾಗಿ ಸೇವಿಸಿದರೆ, ಮಧುಮೇಹ ರೋಗಿಗಳು ಸಾಕಷ್ಟು ಪರಿಹಾರವನ್ನು ಪಡೆಯಬಹುದು. ಇದರಿಂದ ಅನೇಕ ರೋಗಗಳ ಅಪಾಯವನ್ನು ಸಹ ಕಡಿಮೆ ಮಾಡಬಹುದು.


ಇದನ್ನೂ ಓದಿ : Tea Benefits : ಚಹಾ ಪ್ರಿಯರಿಗೆ ಸಿಹಿ ಸುದ್ದಿ : ಪ್ರತಿದಿನ 2 ಕಪ್‌ ಕುಡಿದ್ರೆ ಆರೋಗ್ಯಕ್ಕಿದೆ ಈ ಲಾಭಗಳು


2. ದ್ವಿದಳ ಧಾನ್ಯ :
ದ್ವಿದಳ ಧಾನ್ಯ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


3. ಹೋಲ್ ಗ್ರೇನ್ :
ಓಟ್ಸ್, ಬ್ರೌನ್ ರೈಸ್, ಹೋಲ್ ಗ್ರೇನ್ ಹಿಟ್ಟು ಮುಂತಾದವುಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಏರುವುದಿಲ್ಲ. ಮಧುಮೇಹಿಗಳು ಪ್ರತಿದಿನ ಇಂತಹ ಆಹಾರವನ್ನು ಸೇವಿಸಬೇಕು.


4. ಪೇರಳೆ ಹಣ್ಣು : 
ಪೇರಳೆ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಹಣ್ಣಾಗಿದೆ. ಇದರಲ್ಲಿಯೂ ಫೈಬರ್‌ ಪ್ರಮಾಣ ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಮಧುಮೇಹ ರೋಗಿಗಳಿಗೆ ಈ ಹಣ್ಣು ಸಂಜೀವಿನಿಯಂತೆ. 


ಇದನ್ನೂ ಓದಿ : Kidney Harmful Foods : ಈ ರೀತಿಯ ಆಹಾರ ಸೇವನೆ ನಿಮ್ಮ ಕಿಡ್ನಿಗೆ ತುಂಬಾ ಅಪಾಯಕಾರಿ!


5. ಮೆಂತ್ಯ ಬೀಜಗಳು: 
ಮೆಂತ್ಯ ಬೀಜಗಳು ಫೈಬರ್ ನಲ್ಲಿ ಸಮೃದ್ಧವಾಗಿವೆ. ಮೆಂತ್ಯ ಬೀಜಗಳಂತೆ ಸೊಪ್ಪಿನಲ್ಲಿ ಕೂಡಾ ಅತಿ ಹೆಚ್ಚು ಫೈಬರ್ ಕಂಡು ಬರುತ್ತದೆ. ಇದು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜವನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಅದನ್ನು ಫಿಲ್ಟರ್ ಮಾಡಿ ಕುಡಿಯುತ್ತಾ ಬಂದರೆ, ಮಧು ಮೆಹ ನಿಯಂತ್ರಣಕ್ಕೆ ಬರುತ್ತದೆ.  


 



( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.