ದಿನಕ್ಕೆ ಮೂರು ಕಪ್ ಗಿಂತ ಹೆಚ್ಚು ಚಹಾ ಕುಡಿದರೆ ಎದುರಾಗುವುದು ಈ ಸಮಸ್ಯೆ

ಕೆಲವರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನೀರಿನಂತೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಚಹಾದ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.  

Written by - Ranjitha R K | Last Updated : Sep 8, 2022, 10:19 AM IST
  • ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ.
  • ಕೆಲವರಿಗೆ ಚಹಾ ಕುಡಿಯುವ ವಿಚಿತ್ರ ಅಭ್ಯಾಸವಿರುತ್ತದೆ.
  • ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯಬೇಕು?
ದಿನಕ್ಕೆ  ಮೂರು ಕಪ್ ಗಿಂತ ಹೆಚ್ಚು ಚಹಾ ಕುಡಿದರೆ ಎದುರಾಗುವುದು ಈ ಸಮಸ್ಯೆ title=
Tea Side Effects (file photo)

ಬೆಂಗಳೂರು : ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಎಷ್ಟೋ ಜನರಿಗೆ ಎದ್ದ ತಕ್ಷಣ ಚಹಾ ಕುಡಿಯದೆ ಹೋದರೆ, ದಿನ ಮುಂದೆ ಸಾಗುವುದೇ ಇಲ್ಲ. ಇನ್ನು ಕೆಲವರಿಗೆ ಚಹಾ ಕುಡಿದಿಲ್ಲ ಎಂದಾದರೆ ತಲೆನೋವು, ಆಯಾಸ ಮುಂತಾದ ಸಮಸ್ಯೆಗಳು ಕೂಡಾ ಕಾಡುತ್ತವೆ.  ಆದರೆ  ಮತ್ತೆ ಕೆಲವರಿಗೆ ಚಹಾ ಕುಡಿಯುವ ವಿಚಿತ್ರ ಅಭ್ಯಾಸವಿರುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ನೀರಿನಂತೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಚಹಾದ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯಬೇಕು?
ಚಹಾದಲ್ಲಿ ಕೆಫೀನ್ ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ. ಈ ಕಾರಣಕ್ಕಾಗಿಯೇ ಹೆಚ್ಚು ಚಹಾ ಕುಡಿಯಬಾರದು ಎಂದು ಹೇಳಲಾಗುತ್ತದೆ. ಇದು ಚಹಾ ಎಲೆಗಳ ಗುಣಮಟ್ಟವನ್ನು ಕೂಡಾ ಅವಲಂಬಿಸಿರುತ್ತದೆ. ಯಾವ ಬ್ರ್ಯಾಂಡ್ ಎಷ್ಟು ಕೆಫೀನ್ ಅನ್ನು ಹೊಂದಿರುತ್ತದೆ ಎನ್ನುವುದರ ಮೇಲೆ ಇದು ನಿರ್ಧರಿತವಾಗಿರುತ್ತದೆ. ಸಾಮಾನ್ಯವಾಗಿ ಒಂದು ಕಪ್ ಚಹಾವು ಸುಮಾರು 60 ಮಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಇದರ ಪ್ರಕಾರ, ದಿನಕ್ಕೆ 3 ಕಪ್‌ಗಳಿಗಿಂತ ಹೆಚ್ಚು ಚಹಾವನ್ನು ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ.  

ಇದನ್ನೂ ಓದಿ : ಈ ಆಹಾರಗಳನ್ನು ಸೇವಿಸಿದರೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುವುದೇ ಇಲ್ಲ

ಹೆಚ್ಚು ಟೀ ಕುಡಿಯುವುದರಿಂದ ಆಗುವ ಅನಾನುಕೂಲಗಳು: 
 ಐರನ್ ಕೊರತೆ :
ದಿನಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಕಪ್ ಚಹಾವನ್ನು ಸೇವಿಸಿದರೆ, ಈ ಪಾನೀಯದಲ್ಲಿರುವ ಟ್ಯಾನಿನ್ ದೇಹದಲ್ಲಿ ಕಬ್ಬಿಣ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಚಹಾದ ಅತಿಯಾದ ಸೇವನೆಯು ಸಸ್ಯಾಹಾರಿಗಳ, ಆರೋಗ್ಯದ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಬೀರುತ್ತದೆ. 

ಚಹಾದಲ್ಲಿ ಕೆಫೀನ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇದು ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಅದು ತಲೆಸುತ್ತುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಹೆಚ್ಚಿನ ಆರೋಗ್ಯ ತಜ್ಞರು ಹೆಚ್ಚು ಚಹಾ ಸೇವನೆಯನ್ನು ಕಡಿಮೆ ಮಾಡುವಂತೆ ಹೇಳುತ್ತಾರೆ. 

ಇದನ್ನೂ ಓದಿ : ಈ ಸಮಸ್ಯೆ ಇದ್ದವರು ಡಾನ್ಸ್ ಮಾಡುವ ಯೋಚನೆಯೂ ಮಾಡಬಾರದು

ಎದೆಯುರಿ :
 ಹೆಚ್ಚು ಚಹಾವನ್ನು ಸೇವಿಸಿದರೆ, ಆಸಿಡ್ ರಿಫ್ಲಕ್ಸ್ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದಾಗಿ  ಎದೆಯುರಿ ಸಮಸ್ಯೆ ಕಾಡುತ್ತದೆ. ಆದ್ದರಿಂದ ನಿಮ್ಮ ಹವ್ಯಾಸವನ್ನು ನಿಯಂತ್ರಿಸಲು ಪ್ರಯತ್ನಿಸಿ.

ನಿದ್ರೆಯ ಕೊರತೆ : 
ಟೀ ನಿಮಗೆ ತಾಜಾತನವನ್ನು ನೀಡುತ್ತದೆ ಅನ್ನುವುದು ನಿಜ. ಆದರೆ, ನಿರಂತರವಾಗಿ ಚಹಾವನ್ನು ಕುಡಿಯುತ್ತಿದ್ದರೆ, ನಿದ್ರಾಹೀನತೆಯ ಸಮಸ್ಯೆ ಎದುರಾಗಬಹುದು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News