ಕಿಡ್ನಿ ಆರೋಗ್ಯಕ್ಕೆ ಮಾರಕ ಈ ಐದು ಅಭ್ಯಾಸಗಳು.! ಇಂದೇ ಸರಿಪಡಿಸಿಕೊಳ್ಳಿ
Bad Habits for Kidney:ಒಂದು ವೇಳೆ ಕಿಡ್ನಿ ಆರೋಗ್ಯದಲ್ಲಿ ಏರುಪೇರಾದರೆ, ಹಾನಿಕಾರಕ ಅಂಶಗಳು ದೇಹದಿಂದ ಹೊರಬರುವುದು ಸಾಧ್ಯವಾಗುವುದಿಲ್ಲ. ಅವು ಕ್ರಮೇಣ ದೇಹದ ಇತರ ಭಾಗಗಳಿಗೆ ಹರಡುತ್ತವೆ.
Bad Habits for Kidney : ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದರ ಮೂಲಕ, ದೇಹದ ಹೆಚ್ಚುವರಿ ದ್ರವ ಮತ್ತು ಕಲ್ಮಶಗಳು ದೇಹದಿಂದ ಹೊರ ಬೀಳುತ್ತವೆ. ಒಂದು ವೇಳೆ ಕಿಡ್ನಿ ಆರೋಗ್ಯದಲ್ಲಿ ಏರುಪೇರಾದರೆ, ಹಾನಿಕಾರಕ ಅಂಶಗಳು ದೇಹದಿಂದ ಹೊರಬರುವುದು ಸಾಧ್ಯವಾಗುವುದಿಲ್ಲ. ಅವು ಕ್ರಮೇಣ ದೇಹದ ಇತರ ಭಾಗಗಳಿಗೆ ಹರಡುತ್ತವೆ. ಇದು ವ್ಯಕ್ತಿಯನ್ನು ನಿಧಾನವಾಗಿ ಸಾವಿನ ಸನಿಹಕ್ಕೆ ಕರೆದೊಯ್ಯುತ್ತದೆ. ಆದುದರಿಂದ ಮೂತ್ರಪಿಂಡದ ಆರೈಕೆಯ ಬಗ್ಗೆ ಗಂಭೀರವಾಗಿರಬೇಕಾಗಿರುತ್ತದೆ. ಮೂತ್ರ ಪಿಂಡದ ಆರೋಗ್ಯ ಕಾಪಾಡ ಬೇಕಾದರೆ, ನಾವು ದಿನ ನಿತ್ಯ ಅನುಸರಿಸುವ ಕೆಲವು ಅಭ್ಯಾಸಗಳನ್ನು ದೂರ ಮಾಡಬೇಕಾಗುತ್ತದೆ.
ಮೂತ್ರಪಿಂಡಕ್ಕೆ ಹಾನಿಕಾರಕವಾಗಿರುವ ಅಭ್ಯಾಸಗಳು :
ಕಡಿಮೆ ನೀರು ಕುಡಿಯುವುದು :
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು, ದಿನವಿಡೀ 5-7 ಲೀಟರ್ ನೀರನ್ನು ಕುಡಿಯುವುದು ಅವಶ್ಯಕ. ದಿನವಿಡೀ ಇದಕ್ಕಿಂತ ಕಡಿಮೆ ಕುಡಿಯುತ್ತಿದ್ದರೆ, ಮೂತ್ರಪಿಂಡಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತೀರಿ. ನೀರಿನ ಮೂಲಕವೇ ಮೂತ್ರಪಿಂಡವು ದೇಹದಿಂದ ವಿಷ ಮತ್ತು ದ್ರವಗಳನ್ನು ಹೊರ ಹಾಕುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Soaked Peanuts Benefits : ಟೈಪ್ 2 ಮಧುಮೇಹಕ್ಕೆ ರಾಮಬಾಣ 'ನೆನೆಸಿದ ಶೇಂಗಾ' : ಹೀಗೆ ಸೇವಿಸಿ
ಸಕ್ಕರೆಯ ಅತಿಯಾದ ಸೇವನೆ :
ಸಿಹಿ ಆಹಾರವನ್ನು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಸಕ್ಕರೆ ಹೆಚ್ಚಿರುವ ಸಿಹಿ ಪದಾರ್ಥಗಳನ್ನು ತಿಂದರೆ ಅದು ಕಿಡ್ನಿ ಹಾನಿಗೆ ಕಾರಣವಾಗಬಹುದು. ಅಲ್ಲದೆ, ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದ ಮಧುಮೇಹಕ್ಕೆ ಬಲಿಯಾಗಬಹುದು. ಆದ್ದರಿಂದ ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆಮಾಡಿ.
ನಿದ್ರೆಯ ಕೊರತೆ :
ಪ್ರತಿದಿನ 7-8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯುವುದು ದೇಹದ ಫಿಟ್‌ನೆಸ್‌ಗೆ ಬಹಳ ಮುಖ್ಯ. ಇದು ದೇಹದ ಎಲ್ಲಾ ಪ್ರಮುಖ ಭಾಗಗಳಿಗೆ ವಿಶ್ರಾಂತಿ ನೀಡುತ್ತದೆ. ಇದಕ್ಕಿಂತ ಕಡಿಮೆ ನಿದ್ರೆ ಮಾಡಿದರೆ, ಮೂತ್ರಪಿಂಡಗಳು ಸೇರಿದಂತೆ ಎಲ್ಲಾ ಪ್ರಮುಖ ಅಂಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : Lady Finger Benefits : ಬೆಂಡೆಕಾಯಿಯಲ್ಲಿದೆ ಈ ರೋಗಗಳಿಗೆ ಪರಿಹಾರ.!
ನೋವು ನಿವಾರಕಗಳ ಅತಿಯಾದ ಬಳಕೆ :
ಸಾಂದರ್ಭಿಕವಾಗಿ ಅನಾರೋಗ್ಯಕ್ಕೆ ಒಳಗಾದಾಗ ನೋವು ನಿವಾರಕಗಳು ಅಥವಾ ಇತರ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ದಿನನಿತ್ಯ ಈ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ವಾಸ್ತವವಾಗಿ, ಔಷಧಿಗಳಲ್ಲಿ ಹೆಚ್ಚ್ಜಿನ ಉಪ್ಪಿನ ಅಂಶ ಇರುತ್ತದೆ. ಅದನ್ನು ಸ್ವಚ್ಛಗೊಳಿಸಲು ಮೂತ್ರಪಿಂಡವು ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಹೆಚ್ಚು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಮೂತ್ರಪಿಂಡಗಳು ಲವಣಗಳನ್ನು ತೆರವುಗೊಳಿಸುವಲ್ಲಿ ವಿಫಲವಾಗಬಹುದು. ಇದು ಪ್ರಾಣಕ್ಕೆ ಅಪಾಯವನ್ನುಂಟುಮಾಡಬಹುದು.
ಅತಿಯಾದ ಉಪ್ಪು ಸೇವನೆ :
ಆಹಾರದ ರುಚಿಯನ್ನು ಹೆಚ್ಚಿಸಲು ಉಪ್ಪು ಬಳಸುವುದು ಅನಿವಾರ್ಯ. ಆದರೆ ಇದು ಸೀಮಿತ ಪ್ರಮಾಣದಲ್ಲಿರಬೇಕು. ಸಿಹಿ ಪದಾರ್ಥಗಳಂತೆ, ಹೆಚ್ಚಿನ ಪ್ರಮಾಣದಲ್ಲಿ ಉಪ್ಪು, ಖಾರ ಸೇವಿಸಿದರೆ, ಅಡ್ಡಪರಿಣಾಮಗಳು ಗೋಚರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಹೆಚ್ಚು ಉಪ್ಪು ಪದಾರ್ಥಗಳಿಂದ ಸ್ವಲ್ಪ ದೂರವಿರಲು ಪ್ರಯತ್ನಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.