ಬೆಂಗಳೂರು : ಯಕೃತ್ತು ನಮ್ಮ ದೇಹದ ಬಹಳ ಮುಖ್ಯವಾದ ಭಾಗವಾಗಿದೆ. ಇದು ದೇಹದಿಂದ ವಿಷವನ್ನು  ಹೊರ ಹಾಕುವ ಮೂಲಕ ಮತ್ತು ವಿಟಮಿನ್ ಗಳನ್ನು ಸಂಗ್ರಹಿಸುವ ಮೂಲಕ ದೇಹದಲ್ಲಿ ಶಕ್ತಿಯನ್ನು ಉಂಟು ಮಾಡುತ್ತದೆ. ಈ ಕಾರಣಕ್ಕಾಗಿಯೇ ಲಿವರ್ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಈಗಾಗಲೇ ಯಕೃತ್ತಿನ ಅಸಮತೋಲನದಿಂದ ಬಳಲುತ್ತಿದ್ದರೆ, ಕೆಲವು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಕು. 


COMMERCIAL BREAK
SCROLL TO CONTINUE READING

ಯಕೃತ್ತು ಆರೋಗ್ಯಕರವಾಗಿರಲು, ಈ ವಸ್ತುಗಳಿಂದ ದೂರವಿರಿ : 
ಉಪ್ಪು :
ಮಿತಿ ಮೀರಿ ಉಪ್ಪಿನ ಸೇವನೆಯು ಯಕೃತ್ತಿಗೆ ಒಳ್ಳೆಯದಲ್ಲ. ಲಿವರ್ ಸದಾ ಆರೋಗ್ಯವಾಗಿರಬೇಕೆಂದರೆ ಕನಿಷ್ಠ ಉಪ್ಪನ್ನು ಬಳಸಿ. ಅತಿಯಾದ ಉಪ್ಪು ಬಳಸುವುದರಿನದ ದೇಹದಲಿ ನೀರು ಶೇಖರಣೆಯಾಗುತ್ತದೆ.  


ಇದನ್ನೂ ಓದಿ : ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಪ್ರಯೋಜನಕಾರಿ ಅಗಸೆ ಬೀಜಗಳು


ಸಾಕಷ್ಟು ನಿದ್ದೆ ಮಾಡುದಿರುವುದು : 
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ರಾತ್ರಿ ಸಾಕಷ್ಟು ಹೊತ್ತು ನಿದ್ರೆ  ಮಾಡುವುದಿಲ್ಲ. ಆದರೆ ಹೀಗೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಲಿವರ್‌ ಆರೋಗ್ಯಕ್ಕೂ ಒಳ್ಳೆಯದಲ್ಲ. ಸಾಕಷ್ಟು ನಿದ್ರೆ ಮಾಡದೆ ಹೋದರೆ  ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಯಕೃತ್ತಿಗೆ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಬಹುದು. ಯಕೃತ್ತು ಯಾವಾಗಲೂ ಆರೋಗ್ಯಕರವಾಗಿರಬೇಕಾದರೆ ರಾತ್ರಿ ಕನಿಷ್ಠ 8 ಗಂಟೆಗಳ ನಿದ್ದೆಯನ್ನು ಪೂರೈಸುವುದು ಅಗತ್ಯ. 


ಮದ್ಯಪಾನ : 
ಲಿವರ್ ಡ್ಯಾಮೇಜ್ ಆಗಲು ಅತಿ ಮುಖ್ಯವಾದ ಕಾರಣ ಆಲ್ಕೋಹಾಲ್ ಸೇವನೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಅಧಿಕ ಪ್ರಮಾಣದ ಆಲ್ಕೋಹಾಲ್ ದೇಹದಿಂದ ವಿಷವನ್ನು ತೆಗೆದುಹಾಕುವ ಯಕೃತ್ತಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಆಲ್ಕೋಹಾಲ್ ಸೇವನೆಯನ್ನು ಇಂದೇ ಬಿಟ್ಟು ಬಿಡಿ. 


ಇದನ್ನೂ ಓದಿ : ಮಧುಮೇಹಕ್ಕೂ ಮುನ್ನ ದೇಹ ಈ ಸಂಕೇತಗಳನ್ನು ನೀಡುತ್ತದೆ.! ಎಚ್ಚರ ತಪ್ಪಿದರೆ ಅಪಾಯ ಖಂಡಿತಾ.!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.