ನವದೆಹಲಿ : ಮೊಟ್ಟೆಯ ಹಳದಿ ಭಾಗವನ್ನು ತಿಂದರೆ ಬೊಜ್ಜು ಹೆಚ್ಚಾಗುವುದರಿಂದ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನಬೇಕು ಎನ್ನುವ ಭಾವನೆ ಅನೇಕರಲ್ಲಿದೆ (egg white benefits) . ಆದರೆ, ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುತ್ತದೆ. ತುಕ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನದೇ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತೀರಿ ಎನ್ನುವುದು ಕೂಡಾ  ತಿಳಿದುಕೊಳ್ಳಬೇಕಾದ ಅಂಶ (Side effects of egg white). ಕೇವಲ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿಂದರೆ ಅನೇಕ  ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. 


COMMERCIAL BREAK
SCROLL TO CONTINUE READING

ಅನೇಕ ಪೋಷಕಾಂಶಗಳಿಂದ ವಂಚಿತರಾಗಬೇಕಾಗುತ್ತದೆ : 
ಮೊಟ್ಟೆ ಪ್ರೋಟೀನ್ ಮತ್ತು ಇತರ ಕೆಲವು ಪೌಷ್ಟಿಕಾಂಶಗಳ ಉತ್ತಮ ಮೂಲವಾಗಿದೆ. ಅದಕ್ಕಾಗಿ  ಬೆಳಗಿನ ಉಪಹಾರದಲ್ಲಿ (egg for breakfast) ಅನೇಕರು ಮೊಟ್ಟೆಯನ್ನು ಸೇವಿಸುತ್ತಾರೆ.  ಆದರೆ , ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸಿದರೆ ಅದು ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ನೀಡುತ್ತದೆ (Side effects of egg white). ವರದಿಗಳ ಪ್ರಕಾರ, ಮೊಟ್ಟೆಯ ಹಳದಿ ಭಾಗವನ್ನು ತಿನ್ನದಿದ್ದರೆ, ಮೊಟ್ಟೆಯಲ್ಲಿರುವ ಅನೇಕ ಪೌಷ್ಟಿಕಾಂಶದಿಂದ ವಂಚಿತರಾಗಬೇಕಾಗುತ್ತದೆ. ಮೊಟ್ಟೆಯ ಹಳದಿ ಭಾಗವನ್ನು ತಿನ್ನದೇ ಇರುವುದರಿಂದ  ಮೊಟ್ಟೆಯಿಂದ ದೇಹಕ್ಕೆ ಸಿಗಬಹುದಾದ ಅರ್ಧದಷ್ಟು ಪ್ರಯೋಜನಗಳು ಸಿಗುವುದೇ ಇಲ್ಲ. ಇದರಿಂದಾಗಿ ಸೋಂಕು ಅಥವಾ ಅಲರ್ಜಿಯಂತಹ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 


ಇದನ್ನೂ ಓದಿ : Fenugreek Benefits : ಮೆಂತ್ಯ ಬೀಜದ 6 ಆಯುರ್ವೇದ ಆರೋಗ್ಯ ಪ್ರಯೋಜನಗಳು : ಇಂದೇ ಸೇವಿಸಲು ಆರಂಭಿಸಿ!


ಮೊಟ್ಟೆಯ ಬಿಳಿಭಾಗವನ್ನು ತಿನ್ನುವುದರಿಂದ ಆಗುವ ಅಡ್ಡಪರಿಣಾಮಗಳು :
ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನುವುದರಿಂದ ಫುಡ್ ಪಾಯಿಸನ್ (food poision) ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕೆಲವೊಮ್ಮೆ ಮೊಟ್ಟೆಯ ಬಿಳಿ ಭಾಗವು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗಬಹುದು. ಇದು ಕೋಳಿಯ ಕರುಳಿನಲ್ಲಿ ಕಂಡುಬರುತ್ತದೆ. ಈ ಅಪಾಯವನ್ನು ತಪ್ಪಿಸಬೇಕಾದರೆ, ಪ್ರತಿದಿನ ಮೊಟ್ಟೆಯ ಬಿಳಿಭಾಗವನ್ನು ತಿನ್ನುದಿರುವುದೇ ಒಳ್ಳೆಯದು. 


ವಿಟಮಿನ್ ಬಿ7 ಸ್ನಾಯುಗಳ ಆರೋಗ್ಯಕ್ಕೆ ಅತ್ಯಗತ್ಯ. ನಮ್ಮ ದೇಹವು ಅದನ್ನು ಸರಿಯಾದ ಪ್ರಮಾಣದಲ್ಲಿ ಪಡೆಯದಿದ್ದರೆ, ಕೂದಲು ಉದುರುವಿಕೆ (hair fall), ಸ್ನಾಯು ಸೆಳೆತ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ವಾಸ್ತವವಾಗಿ, ಮೊಟ್ಟೆಯ ಬಿಳಿ ಭಾಗದಲ್ಲಿ ಇರುವ ಅವಿಡಿನ್ ಪ್ರೋಟೀನ್ ಕೂಡ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಈ ಕಾರಣದಿಂದಾಗಿ ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. 


ಇದನ್ನೂ ಓದಿ : ಪುಲಾವ್ ಎಲೆ: ಆರೋಗ್ಯದ ಜೊತೆಗೆ ರುಚಿಗೆ ವರದಾನ, ಹಲವು ರೋಗಗಳಿಗೆ ರಾಮಬಾಣ


ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನುವ ಮೂಲಕ ದೇಹದಲ್ಲಿ ಅಲರ್ಜಿಯ ಸಮಸ್ಯೆ ಎದುರಾಗುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ಅತಿಯಾಗಿ ತಿಂದರೆ ವಾಕರಿಕೆ, ವಾಂತಿ,  ಅಲರ್ಜಿಯ ಸಮಸ್ಯೆ ಹೆಚ್ಚುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.