High BP: ನಿಮ್ಮ ಈ ಅಭ್ಯಾಸಗಳೇ ಅಧಿಕ ರಕ್ತದೊತ್ತಡ ಸಮಸ್ಯೆಗೆ ಪ್ರಮುಖ ಕಾರಣಗಳು!
High BP: ಈ ವೇಗದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡ ಸಮಸ್ಯೆ ಹಲವರನ್ನು ಬಾಧಿಸುತ್ತಿದೆ. ಇದಕ್ಕೆ ನಿಮ್ಮ ಜೀವನ ಶೈಲಿಯೂ ಪ್ರಮುಖ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
High Blood Pressure: ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಿನ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆ. ರಕ್ತದೊತ್ತಡ ಹೆಚ್ಚಾಗಲು ನಾನಾ ಕಾರಣಗಳಿವೆ. ಆದರೆ, ಈ ಬಗ್ಗೆ ನಿಗಾವಹಿಸದಿದ್ದರೆ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು.
ವಾಸ್ತವವಾಗಿ, ರಕ್ತದೊತ್ತಡ (Blood Pressure) ಸಮಸ್ಯೆಗೆ ವೇಗದ ಜೀವನಶೈಲಿ ಒಂದು ಕಾರಣವಾದರೆ, ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಮತ್ತೊಂದು ಪ್ರಮುಖ ಕಾರಣವಾಗಿದೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನ ಯುವಕ-ಯುವತಿಯರಲ್ಲೂ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಹೈ ಬಿಪಿ ಲಕ್ಷಣಗಳು (High BP Symptoms):
ಅಧಿಕ ರಕ್ತದೊತ್ತಡವನ್ನು (High Blood Pressure) ಗುರುತಿಸಲು ಯಾವುದೇ ನಿರ್ದಿಷ್ಟ ಲಕ್ಷಣಗಳು ಇರುವುದಿಲ್ಲವಾದರೂ, ತಲೆನೋವು, ಅತಿಯಾದ ಉದ್ವೇಗ, ಎದೆನೋವು ಅಥವಾ ಎದೆ ಭಾರ, ಉಸಿರಾಟದ ತೊಂದರೆ, ಹೆಚ್ಚು ಗಾಬರಿಗೊಳಗಾಗುವುದು, ಕೈ-ಕಾಲುಗಳಲ್ಲಿ ದೌರ್ಬಲ್ಯ ಇವೆಲ್ಲವೂ ಕೂಡ ಅದರ ಪ್ರಾರಂಭಿಕ ಲಕ್ಷಣಗಳು ಎಂತಲೇ ಹೇಳಲಾಗುತ್ತದೆ.
ಇದನ್ನೂ ಓದಿ- ದೇಸಿ ತುಪ್ಪದ ಸೇವನೆಯು ಈ ಜನರಿಗೆ ಅಪಾಯಕಾರಿ..!
ಹೈ ಬಿಪಿ ಸಮಸ್ಯೆಗೆ ಕಾರಣಗಳು (Causes Of High BP Problem):
ಮೊದಲೇ ಉಲ್ಲೇಖಿಸಿದಂತೆ ಅಧಿಕ ರಕ್ತದೊತ್ತಡ ಸಮಸ್ಯೆಗೆ (High Blood Pressure Problems) ಬದಲಾದ ವೇಗದ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಇದಲ್ಲದೆ, ಅನುವಂಶೀಯವಾಗಿಯೂ ಕೂಡ ಈ ಸಮಸ್ಯೆ ಉಂಟಾಗಬಹುದು. ಇದರ ಹೊರತಾಗಿ, ನಮ್ಮ ಕೆಲವು ಕೆಟ್ಟ ಅಭ್ಯಾಸಗಳಿಂದಲೂ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಅಂತಹ ಕೆಲ ಕಾರಣಗಳೆಂದರೆ...
* ತೂಕ ಹೆಚ್ಚಳ:
ಬೊಜ್ಜು ಅಥವಾ ಅತಿಯಾದ ತೂಕ ಹೆಚ್ಚಳವಿರುವ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಗಮನಾರ್ಹವಾಗಿ ಹೆಚ್ಚು ಎಂದು ಹಲವು ಸಂಶೋಧನೆಗಳಲ್ಲಿ ತಿಳಿದುಬಂದಿದೆ.
* ದೈಹಿಕ ಚಟುವಟಿಕೆ ಇಲ್ಲದಿರುವುದು:
ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ವಾಕ್, ವ್ಯಾಯಾಮ, ಯೋಗಾಭ್ಯಾಸಗಳಂತಹ ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದಿರುವುದು ಕೊಡೋಯ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು.
* ಅತಿಯಾದ ಉಪ್ಪು ಬಳಕೆ:
ನಾವು ನಿತ್ಯ ಸೇವಿಸುವ ಆಹಾರದಲ್ಲಿ ಅತಿಯಾದ ಉಪ್ಪು ಬಳಕೆಯಿಂದಲೂ ಹೈಬಿಪಿ ಸಮಸ್ಯೆ ಉಲ್ಬಣಿಸಬಹುದು.
ಇದನ್ನೂ ಓದಿ- ನಿದ್ರಾ ಪಾರ್ಶ್ವವಾಯು ಎಂದರೇನು? ಮತ್ತು ಅದನ್ನು ತೊಡೆದುಹಾಕುವುದು ಹೇಗೆ ಗೊತ್ತೇ ?
* ಕಾಫಿ/ಟೀ ಸೇವನೆ:
ನಿತ್ಯ ಒಂದೆರಡು ಕಪ್ ಗಿಂತ ಹೆಚ್ಚಿನ ಕಾಫಿ ಅಥವಾ ಟೀ ಸವಿಯುವ ಚಟ ಇರುವವರಲ್ಲಿಯೂ ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳಬಹುದು.
* ಧೂಮಪಾನ, ಮದ್ಯಪಾನ:
ಕೆಲವು ಸಂಶೋಧನೆಗಳ ಪ್ರಕಾರ, ಧೂಮಪಾನ, ಮದ್ಯಪಾನ ಮಾಡುವವರಲ್ಲಿಯೂ ಸಹ ಅಧಿಕ ರಕ್ತದೊತ್ತಡ ಸಮಸ್ಯೆಯ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.