warning signs of testicular cancer : 28 ವರ್ಷ ವಯಸ್ಸಿನ ಯುವಕನೊಬ್ಬ ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ಅಸ್ವಸ್ಥನಾಗಿದ್ದ. ಉತ್ತಮ ಮೈ ಕಟ್ಟು, ಆರೋಗ್ಯವನ್ನು ಹೊಂದಿದ್ದ ಈ ಯುವಕ ತನ್ನ ಅನಾರೋಗ್ಯದ ಬಗ್ಗೆ ಪೋಷಕರಿಗೆ ತಿಳಿಸಿದಾಗ ಆತನನ್ನು ತಪಾಸಣೆಗೆ ಒಳಪಡಿಸಲಾಯಿತು. ಆ ಸಂದರ್ಭದಲ್ಲಿ ಆತ ವೃಷಣದಲ್ಲಿನ ಗಡ್ಡೆಯ ಸಮಸ್ಯೆಗೆ ಒಳಗಾಗಿರುವ ವಿಚಾರ ಬೆಳಕಿಗೆ ಬಂತು. ಆ ಯುವಕ ಒಬ್ಬ ಅಥ್ಲಿಟ್ ಆಗಿದ್ದ. ವೃಷಣದಲ್ಲಿನ ಗೆಡ್ಡೆಯನ್ನು ಪತ್ತೆಹಚ್ಚಿದ ನಂತರ ಹಲವಾರು ವಾರಗಳ ಚಿಕಿತ್ಸೆ ನೀಡಲಾಯಿತು. ಈ ಕಾರಣದಿಂದಾಗಿ ಕೆಲವು ರೋಗಲಕ್ಷಣಗಳ ಸಹಾಯದಿಂದ ಈ ಗೆಡ್ಡೆಗಳನ್ನು ಮೊದಲೇ ಕಂಡುಹಿಡಿಯುವುದು ಮುಖ್ಯವಾಗಿದೆ. 


COMMERCIAL BREAK
SCROLL TO CONTINUE READING

1-ವೃಷಣ ಕ್ಯಾನ್ಸರ್ ಎಂದರೇನು? 
Testicular Cancer ಅಂಡಕೋಶದಲ್ಲಿ ಸಂಭವಿಸುತ್ತದೆ. ಅವು ಪುರುಷ ಲೈಂಗಿಕ ಹಾರ್ಮೋನುಗಳು ಮತ್ತು ವೀರ್ಯ ಉತ್ಪಾದನೆಯಲ್ಲಿ ಸಹಾಯ ಮಾಡುತ್ತವೆ.  ಇದು ಸಂತಾನೋತ್ಪತ್ತಿಗೂ ಸಹಾಯ ಮಾಡುತ್ತದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಜೀವಕೋಶಗಳು ಆರಂಭದಲ್ಲಿ ಅನಿಯಂತ್ರಿತವಾಗಿ ಬೆಳೆದಾಗ ಕ್ಯಾನ್ಸರ್ ಸಂಭವಿಸುತ್ತದೆ. ಇದು ವೃಷಣಗಳು ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು. ವೃಷಣವು ಅನೇಕ ವಿಧದ ಜೀವಕೋಶಗಳಿಂದ ಮಾಡಲ್ಪಟ್ಟಿದೆ . 


ಇದನ್ನೂ ಓದಿ : Weight Loss: ಇದ್ದಕ್ಕಿದ್ದಂತೆ ತೂಕ ನಷ್ಟವಾಗುವುದು ಈ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು


2- ಯಾವ ವಯಸ್ಸಿನಲ್ಲಿ ಈ ಕ್ಯಾನ್ಸರ್ ಸಾಮಾನ್ಯವಾಗಿದೆ? 
ವೃಷಣ ಕ್ಯಾನ್ಸರ್ ಅನ್ನು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ, ಯುವಜನರು ಮತ್ತು ಹದಿಹರೆಯದವರಲ್ಲಿ ಈ ಕ್ಯಾನ್ಸರ್ ಸಾಮಾನ್ಯವಾಗಿ ಕಂಡು ಬರುತ್ತದೆ.  15 ರಿಂದ 35 ವರ್ಷ ವಯಸ್ಸಿನ ಯುವಕರು ಈ ರೀತಿಯ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಸರಾಸರಿ 33 ವರ್ಷಗಳ ವಯಸ್ಸಿನಲ್ಲಿ ಈ ರೀತಿಯ ಕ್ಯಾನ್ಸರ್ ಕಂಡು ಬರುತ್ತದೆ. 


3-ವೃಷಣ ಕ್ಯಾನ್ಸರ್ ಗೆ ಕಾರಣಗಳು : 
ವೃಷಣ ಕ್ಯಾನ್ಸರ್‌ಗೆ ನಿಜವಾದ ಕಾರಣ ಏನೆಂದು ವಿಜ್ಞಾನಿಗಳಿಗೆ ಇನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಯುಕೆ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಪುರುಷರಲ್ಲಿ ಈ ರೋಗದ ಅಪಾಯವನ್ನು ಹೆಚ್ಚಿಸಬಹುದಾದ ಅನೇಕ ಅಂಶಗಳಿವೆ. ಇದಕ್ಕೆ ಮುಖ್ಯ ಕಾರಣ  ಅಂಡ ಕೋಶಗಳು ಅವುಗಳ ಜಾಗದಲ್ಲಿ ಇಲ್ಲದಿರುವುದು. ಈ ಸಮಸ್ಯೆಯು ಮಕ್ಕಳಲ್ಲಿ ಸಾಮಾನ್ಯವಾಗಿರುತ್ತದೆ. ಇದರಲ್ಲಿ ಹುಡುಗರ ಅಂಡ ಕೋಶಗಳು ಅವುಗಳ ಸ್ಥಳದಲ್ಲಿ ಇರುವುದಿಲ್ಲ.  


ಇದನ್ನೂ ಓದಿ : ಮಂಗನ ಕಾಯಿಲೆ ಭೀತಿಯ ನಡುವೆಯೇ ಹೊಸ ವೈರಸ್‌ ಪತ್ತೆ: ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ


 4-ವೃಷಣದಲ್ಲಿ ಕ್ಯಾನ್ಸರ್ ಅನ್ನು ಗುರುತಿಸುವುದು  ಹೇಗೆ ? :
1- ವೃಷಣದಲ್ಲಿ ನೋವು 
2- ವೃಷಣ  ಮರಗಟ್ಟುವಿಕೆ 
3-ವೃಷಣದಲ್ಲಿ ಊತ 
4- ವೃಷಣಗಳ ಮೇಲೆ  ಗಂಟುಗಳು.  ಇವು ಅದರ ಗಾತ್ರದಲ್ಲಿನ ಹೆಚ್ಚಳಕ್ಕೆ ಕಾರಣವಾಗುತ್ತದೆ 
5- ವೃಷಣಗಳಲ್ಲಿ ಭಾರ 
6 - ಕೆಳ ಹೊಟ್ಟೆ ನೋವು 
7- ಬೆನ್ನು ನೋವು


ವೃಷಣ ಕ್ಯಾನ್ಸರ್ ನ  ಅಸಾಮಾನ್ಯ ಕಾರಣಗಳು :
NHS ಪ್ರಕಾರ, ವ್ಯಕ್ತಿಯು ವೃಷಣ ಕ್ಯಾನ್ಸರ್ ನ ಫ್ಯಾಮಿಲಿ ಹಿಸ್ಟರಿ ಇದ್ದರೆ,  ರೋಗದ ಅಪಾಯ ಹೆಚ್ಚಿರುತ್ತದೆ.  ಇದಲ್ಲದೆ, ಈ ಹಿಂದೆ ಈ ಕ್ಯಾನ್ಸರ್ ಅನ್ನು ಹೊಂದಿದ್ದ ಪುರುಷರಿಗೆ  ಇನ್ನೊಂದು  ಅಂಡ  ಕೋಶದಲ್ಲಿಯೂ ಈ ಕ್ಯಾನ್ಸರ್ ಬರುವ ಸಾಧ್ಯತೆ 12 ರಿಂದ 18 ಶೇ ದಷ್ಟು ಇರುತ್ತದೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.