ನವದೆಹಲಿ : How To Increase Hemoglobin : ದೇಹವನ್ನು ಫಿಟ್ ಮತ್ತು ಆರೋಗ್ಯವಾಗಿಡಲು ಪೌಷ್ಟಿಕ ಆಹಾರ ಅತ್ಯಗತ್ಯ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಲು ಸಿಕ್ಕಿದರೆ, ಆರೋಗ್ಯ ಉತ್ತಮವಾಗಿರುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯಿದ್ದರೆ, ಅದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಹಿಮೋಗ್ಲೋಬಿನ್ (Hemoglobin) ಇರುವುದು ಬಹಳ ಮುಖ್ಯ. ಹಿಮೋಗ್ಲೋಬಿನ್ ದೇಹದ ಎಲ್ಲಾ ಅಂಗಗಳಿಗೆ ಆಮ್ಲಜನಕವನ್ನು ನೀಡುತ್ತದೆ. . ಹಿಮೋಗ್ಲೋಬಿನ್ ಕೊರತೆಯು ಆಯಾಸ ಮತ್ತು ಮೈ ಕೈ ನೋವನ್ನು ಉಂಟುಮಾಡಬಹುದು. 


COMMERCIAL BREAK
SCROLL TO CONTINUE READING

ಈ ಆಹಾರಗಳು ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಸಹಾಯಕವಾಗಿವೆ: 
1. ಪಿಸ್ತಾ: ಪಿಸ್ತಾ ಬಹಳ ರುಚಿಕರವಾದ ಡ್ರೈ ಫ್ರೂಟ್ (dry fruit) ಆಗಿದೆ. ಇದನ್ನು ಯಾವಾಗ ಬೇಕಾದರೂ ತಿನ್ನಬಹುದು. ಒಂದು ಮುಷ್ಠಿ  ಪಿಸ್ತಾದಲ್ಲಿ 1.11 ಮಿಗ್ರಾಂ ಕಬ್ಬಿಣದ ಅಂಶ ದೇಹಕ್ಕೆ ಸಿಗುತ್ತದೆ. ಇದು ಹಿಮೋಗ್ಲೋಬಿನ್ ( Hemoglobin) ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Health Benefits Clay and Copper Water: ನೀರನ್ನು ಈ ರೀತಿ ಸಂಗ್ರಹಿಸಿ ಸೇವಿಸಿದರೆ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ


2. ವಾಲ್ನಟ್ಸ್: ವಾಲ್ನಟ್ಸ್ (Wallnut) ಪ್ರೋಟೀನ್, ಕೊಬ್ಬು, ಫೈಬರ್ ಮತ್ತು ಕಾರ್ಬೋ ಹೈಡ್ರೇಟ್ ಗಳಿಂದ ಸಮೃದ್ಧವಾಗಿದೆ. ಇದು ಮಾತ್ರವಲ್ಲ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ, ಒಮೆಗಾ -3 ಫ್ಯಾಟಿ ಆಸಿಡ್ , ಮೊನೊಸಾಚುರೇಟೆಡ್ ಫ್ಯಾಟಿ ಆಸಿಡ್, ಸೆಲೆನಿಯಮ್ ಮತ್ತು ಸತುವು ಕೂಡ ಇದರಲ್ಲಿ ಕಂಡುಬರುತ್ತವೆ, ಇದು ಉತ್ತಮ ಆರೋಗ್ಯದ (Health) ಜೊತೆಗೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 


3. ಗೋಡಂಬಿ : ಗೋಡಂಬಿಯನ್ನು (Cashew) ಬಹುತೇಕ ಎಲ್ಲಾ ರೀತಿಯ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಇದು ಖಾದ್ಯದ ರುಚಿಯನ್ನು  ಹೆಚ್ಚಿಸುತ್ತದೆ. ಇದನ್ನು ಲಘು ಆಹಾರವಾಗಿಯೂ ಸೇವಿಸಬಹುದು. ಒಂದು ಮುಷ್ಠಿ ಗೋಡಂಬಿಯಲ್ಲಿ 1.89 ಮಿಗ್ರಾಂ ಕಬ್ಬಿಣದ  ಅಂಶವಿರುತ್ತದೆ.  ಇದು ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : Side Effects Of Jaggery: ಲಾಭ ಅಷ್ಟೇ ಅಲ್ಲ ಶರೀರಕ್ಕೆ ಹಾನಿಯೂ ಉಂಟು ಮಾಡುತ್ತದೆ ಬೆಲ್ಲ, ಇಲ್ಲಿದೆ ವಿವರ


4. ಒಣದ್ರಾಕ್ಷಿ: ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಒಣದ್ರಾಕ್ಷಿ ಸೇವನೆಯಿಂದ ಕಬ್ಬಿಣದ (iron) ಕೊರತೆಯನ್ನು ನೀಗಿಸಬಹುದು. ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸುವ ಮೂಲಕ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದು . 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ