Almonds During Pregnancy: ಗರ್ಭಿಣಿಯರು ಬಾದಾಮಿ ತಿನ್ನಬೇಕೇ? ಬೇಡವೇ? ಈ ವಿಷಯಗಳನ್ನು ತಪ್ಪದೇ ತಿಳಿಯಿರಿ

Almonds During Pregnancy: ಗರ್ಭಾವಸ್ಥೆಯಲ್ಲಿ ಬಾದಾಮಿಯನ್ನು ತಿನ್ನಬೇಕೋ? ಬೇಡವೋ ಮತ್ತು ಅದನ್ನು ತಿನ್ನಲು ಸರಿಯಾದ ಮಾರ್ಗ ಯಾವುದು ಎಂದು ನಮಗೆ ತಿಳಿಯಿರಿ.  

Written by - Yashaswini V | Last Updated : Aug 4, 2021, 02:25 PM IST
  • ಬಾದಾಮಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
  • ಗರ್ಭಿಣಿ ಮಹಿಳೆಯರಿಗೂ ಬಾದಾಮಿ ಅಷ್ಟೇ ಪ್ರಯೋಜನಕಾರಿಯಾಗಿದೆಯೇ?
  • ಗರ್ಭಾವಸ್ಥೆಯಲ್ಲಿ ಮಹಿಳೆಯರು ಬಾದಾಮಿಯನ್ನು ತಿನ್ನಬೇಕೇ ಅಥವಾ ಬೇಡವೇ?
Almonds During Pregnancy: ಗರ್ಭಿಣಿಯರು ಬಾದಾಮಿ ತಿನ್ನಬೇಕೇ? ಬೇಡವೇ? ಈ ವಿಷಯಗಳನ್ನು ತಪ್ಪದೇ ತಿಳಿಯಿರಿ title=
Almonds During Pregnancy

Almonds During Pregnancy: ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ, ಮಹಿಳೆಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಗಮನವಹಿಸುವುದು ಅತ್ಯಗತ್ಯವಾಗಿದೆ. ಅದೇ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. 

ಬಾದಾಮಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಗರ್ಭಿಣಿ ಮಹಿಳೆಯರಿಗೂ ಅಷ್ಟೇ ಪ್ರಯೋಜನಕಾರಿ ಎಂದು ಸಾಬೀತಾಗಿದೆಯೇ?  ಗರ್ಭಾವಸ್ಥೆಯಲ್ಲಿ ಮಹಿಳೆಯರು ಬಾದಾಮಿ (Almonds During Pregnancy) ತಿನ್ನಬೇಕೋ ಅಥವಾ ಬೇಡವೋ ಮತ್ತು ಅದನ್ನು ತಿನ್ನಲು ಸರಿಯಾದ ಮಾರ್ಗ ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ- Healthy Lifestyle Habits: ನಿತ್ಯ ಈ 5 ಕೆಲಸಗಳನ್ನು ಮಾಡುವುದು ತುಂಬಾ ಸುಲಭ, ಆದರೂ ಬಹುತೇಕ ಜನರು ಮಾಡಲ್ಲ!

ಗರ್ಭಾವಸ್ಥೆಯಲ್ಲಿ ಮಹಿಳೆಯರು ಬಾದಾಮಿಯನ್ನು ತಿನ್ನಬೇಕೇ ಅಥವಾ ಬೇಡವೇ?
ಗರ್ಭಾವಸ್ಥೆಯಲ್ಲಿ ಹಸಿ ಬಾದಾಮಿಯನ್ನು ತಿನ್ನುವುದು ಮಹಿಳೆಯರಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫೋಲಿಕ್ ಆಸಿಡ್ ಮತ್ತು ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದಲ್ಲದೇ, ಮಹಿಳೆಯರಿಗೆ ಬಾದಾಮಿ ಅಥವಾ ಇತರ ಯಾವುದೇ ಒಣ ಹಣ್ಣುಗಳ (Dry Fruits) ಸಮಸ್ಯೆ ಇದ್ದರೆ, ಅವರು ಅದನ್ನು ತಿನ್ನುವುದನ್ನು ತಪ್ಪಿಸಬೇಕು.

ಇದನ್ನೂ ಓದಿ- How To Remove Blackness Of Underarms: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಕಂಕುಳಿನ ಕೆಳಗಿನ ಕಪ್ಪು ಬಣ್ಣ ನಿವಾರಿಸಿ

ಗರ್ಭಾವಸ್ಥೆಯಲ್ಲಿ ಬಾದಾಮಿ ತಿನ್ನುವುದರ ಪರಿಣಾಮಗಳೇನು?
ಸಸ್ಯಗಳಲ್ಲಿರುವ ಫೈಟಿಕ್ ಆಮ್ಲವು ಒಣ ಹಣ್ಣುಗಳ ಅಂದರೆ ಡ್ರೈ ಫ್ರೂಟ್ಸ್ ಜೀವನವಾಗಿದೆ. ಆದರೆ ಇದು ದೇಹದಲ್ಲಿ ಅಗತ್ಯವಾದ ಖನಿಜಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಹೆಚ್ಚುವರಿ ಫೈಟಿಕ್ ಆಮ್ಲವು ಖನಿಜ ಕೊರತೆಯನ್ನು ಉಂಟುಮಾಡಬಹುದು. ಬಾದಾಮಿಯನ್ನು ರಾತ್ರಿಯಿಡೀ ನೆನೆಸುವುದರಿಂದ ಫೈಟಿಕ್ ಆಸಿಡ್ ಅನ್ನು ತೆಗೆದುಹಾಕಲು ಮತ್ತು ರಂಜಕವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಮೂಳೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಗರ್ಭಾವಸ್ಥೆಯಲ್ಲಿ ಬಾದಾಮಿಯನ್ನು ಯಾವಾಗ ತಿನ್ನಬೇಕು?
ಬಾದಾಮಿಯನ್ನು ಗರ್ಭಧಾರಣೆಯ ಮೊದಲ ತಿಂಗಳಿನಿಂದ ಕೊನೆಯ ತಿಂಗಳವರೆಗೆ ತಿನ್ನಬಹುದು. ನೀವು ಇದನ್ನು ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ  ತಿನ್ನಬಹುದು. ಆದರೆ ನೀವು ಅದನ್ನು ಹೆಚ್ಚು ಸೇವಿಸದಿರುವುದು ಒಳ್ಳೆಯದು.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News