Cholestrol Lowering Super Healthy Seeds : ರಕ್ತದಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಾಗುವುದು ಎಂದರೆ ಅನೇಕ ರೋಗಗಳಿಗೆ ಆಮಂತ್ರಣ ನೀಡಿದಂತೆಯೇ. ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಅಪಾಯಕಾರಿ ರೋಗಗಳು ಕೂಡಾ ಬೆನ್ನು ಬೀಳುತ್ತವೆ. ಆದರೆ ಇದರ ನಿಯಂತ್ರಣಕ್ಕೆ  ಕೆಲವು ಬೀಜಗಳನ್ನು ಬಳಸಬಹುದು. ಬೀಜಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತವೆ. ಈ ಕಾರಣದಿಂದಾಗಿ ಅವು ಅತ್ಯಂತ ಪೌಷ್ಟಿಕವಾಗಿದೆ. ಬೀಜಗಳು ಫೈಬರ್‌ನ ಸಮೃದ್ಧ ಮೂಲವಾಗಿದೆ. ಅವು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳು, ಬಹುಅಪರ್ಯಾಪ್ತ ಕೊಬ್ಬುಗಳು ಮತ್ತು ಅನೇಕ ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಆರೋಗ್ಯಕರ ಆಹಾರವಾಗಿ ಸೇವಿಸಿದಾಗ, ಬೀಜಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈ ಬೀಜಗಳನ್ನು  ಸೇವಿಸಿ : 
1. ಅಗಸೆ ಬೀಜಗಳು : 
ಫೈಬರ್ ಮತ್ತು ಒಮೆಗಾ-3 ಕೊಬ್ಬಿನಾಮ್ಲ, ಆಲ್ಫಾ-ಲಿನೋಲೆನಿಕ್ ಆಮ್ಲಗಳ ಉತ್ತಮ ಮೂಲವಾಗಿದೆ. ಈ ಬೀಜಗಳ ಮೂಲಕ ಕೊಲೆಸ್ಟ್ರಾಲ್ ಅನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಬಹುದು. ಇದಕ್ಕಾಗಿ ಈ ಬೀಜವನ್ನು ಪುಡಿ ಮಾಡಿ ಬಳಸಬೇಕು. 


ಇದನ್ನೂ ಓದಿ : Purple Tomato: ಮಾರುಕಟ್ಟೆಗೆ ಕಾಲಿಡುತ್ತಿವೆ ನೇರಳೆ ಟೊಮ್ಯಾಟೋ ! ಕ್ಯಾನ್ಸರ್, ಮಧುಮೇಹದಿಂದ ನೀಡುವುದು ಸಂಪೂರ್ಣ ರಕ್ಷೆ


2. ಚಿಯಾ ಬೀಜಗಳು :
ಚಿಯಾ ಬೀಜಗಳು ಅಗಸೆಬೀಜಗಳನ್ನು ಹೋಲುತ್ತವೆ. ಏಕೆಂದರೆ ಅವುಗಳು ಫೈಬರ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಇತರ ಅನೇಕ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಇದನ್ನು ಸಬ್ಜಾ ಬೀಜಗಳು ಎಂಡು ಕೂಡಾ ಕರೆಯುತ್ತಾರೆ. ಇದು ಪ್ರೋಟೀನ್, ಒಮೆಗಾ -6 ಕೊಬ್ಬಿನಾಮ್ಲಗಳು, ಥಯಾಮಿನ್,  ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್‌ನಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಅವರು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


3. ಎಳ್ಳು :
ಭಾರತವಲ್ಲದೆ ಏಷ್ಯಾದ ಅನೇಕ ದೇಶಗಳಲ್ಲಿ ಎಳ್ಳು ಬೀಜಗಳನ್ನು ಬಳಸಲಾಗುತ್ತದೆ. ಇತರ ಬೀಜಗಳಂತೆ, ಇದು ಫೈಬರ್, ಪ್ರೊಟೀನ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿದೆ. ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಒಮೆಗಾ -6 ಕೊಬ್ಬಿನಾಮ್ಲಗಳು, ತಾಮ್ರ, ಮ್ಯಾಂಗನೀಸ್, ಮೆಗ್ನೀಸಿಯಮ್. ಇವೆಲ್ಲವೂ ಸೇರಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ : ಮಯೆಲಾಯ್ಡ್ ಲುಕೇಮಿಯಾ ಚಿಕಿತ್ಸೆಯ ಸೂಕ್ತವಾದ ನಿರ್ವಹಣೆ ಹೀಗೆ ಮಾಡಿ.!


4. ಕುಂಬಳಕಾಯಿ ಬೀಜಗಳು :
ಅಡುಗೆ ಮಾಡುವಾಗ, ನಾವು ಆಗಾಗ ಅದರ ಬೀಜಗಳನ್ನು ಕಸದ ಡಬ್ಬಕ್ಕೆ  ಎಸೆಯುತ್ತೇವೆ. ಆದರೆ  ಈ ಬೀಜಗಳನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು. ಇದು ಫೈಬರ್, ಪ್ರೊಟೀನ್, ಮೊನೊಸಾಚುರೇಟೆಡ್ ಕೊಬ್ಬು, ಒಮೆಗಾ -6 ಕೊಬ್ಬಿನಾಮ್ಲಗಳು, ಮ್ಯಾಂಗನೀಸ್, ಮೆಗ್ನೀಸಿಯಮ್, ರಂಜಕವನ್ನು ಹೊಂದಿರುತ್ತದೆ. ಕುಂಬಳಕಾಯಿ ಬೀಜಗಳು ಫೈಟೊಸ್ಟೆರಾಲ್‌ಗಳ ಉತ್ತಮ ಮೂಲಗಳಾಗಿವೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.