ಬೆಂಗಳೂರು: ನಮ್ಮ ದೇಹಕ್ಕೆ ತುಂಬಾ ಅತ್ಯಾವಶ್ಯಕ ಪೋಷಕಾಂಶವೆಂದರೆ ವಿಟಮಿನ್ ಬಿ-12. ನಮ್ಮ ಮನಸ್ಸು, ನರ ಕೋಶಗಳು, ಕೆಂಪು ರಕ್ತ ಕಣಗಳು ಮತ್ತು ಹೃದಯದ ಆರೋಗ್ಯಕ್ಕೆ ವಿಟಮಿನ್ ಬಿ-12 ತುಂಬಾ ಅಗತ್ಯ. ವಿಟಮಿನ್ ಬಿ-12 ಕೊರತೆಯು ಮೆದುಳಿನ ದೌರ್ಬಲ್ಯಕ್ಕೂ ಕಾರಣವಾಗಬಹುದು. ಇದನ್ನು ತಪ್ಪಿಸಲು ವಿಟಮಿನ್ ಬಿ-12 ಆಹಾರಗಳ ಸೇವನೆ ಬಹಳ ಮುಖ್ಯ.  ವಿಟಮಿನ್ ಬಿ-12 ಕೊರತೆಯನ್ನು ನಿವಾರಿಸಲು ಮಾಂಸಾಹಾರಗಳು ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಕೇವಲ ಮಾಂಸಾಹಾರಗಳಲ್ಲಿ ಮಾತ್ರವಲ್ಲ ಕೆಲವು ಸಸ್ಯಾಹಾರಗಳಲ್ಲೂ ಕೂಡ ವಿಟಮಿನ್  ಬಿ-12 ಸಮೃದ್ಧವಾಗಿದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ವಿಟಮಿನ್ ಬಿ 12 ಕೊರತೆಯನ್ನು ಪೂರೈಸಲು ಸಹಾಯಕವಾಗಬಲ್ಲ ಸಸ್ಯಾಹಾರಗಳಿವು:-
* ಡೈರಿ ಉತ್ಪನ್ನಗಳು:

ಡೈರಿ ಉತ್ಪನ್ನ ಎಂದೊಡನೆ ಮೊದಲಿಗೆ ನೆನಪಾಗುವುದು ಹಾಲು. ಹಾಲು ಮತ್ತು ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ, ಪನೀರ್  ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಇವು ವಿಟಮಿನ್ ಬಿ 12 ಕೊರತೆಯನ್ನು ನಿವಾರಿಸಬಲ್ಲ ಅತ್ಯುತ್ತಮ ಆಹಾರಗಳಾಗಿವೆ.


ಇದನ್ನೂ ಓದಿ- Health Tips: ಈ ಆರೋಗ್ಯ ಸಮಸ್ಯೆ ಇದ್ದವರ ಮೇಲೆ ಬೀಟ್ರೂಟ್ ನೆರಳು ಸಹ ಬೀಳಬಾರದು: ಎಚ್ಚರ!!


* ತರಕಾರಿಗಳು:
ಬ್ರೊಕೊಲಿಯಲ್ಲಿ, ಅಣಬೆಯಂತಹ ತರಕಾರಿಗಳಲ್ಲೂ ಕೂಡ ವಿಟಮಿನ್ ಬಿ-12 ಹೇರಳವಾಗಿ ಕಂಡು ಬರುತ್ತದೆ.


* ಓಟ್ಸ್:
ಕೆಲವರು ತೂಕ ಇಳಿಕೆಗಾಗಿ ಓಟ್ಸ್ ಸೇವಿಸಲು ಇಚ್ಚಿಸುತ್ತಾರೆ. ಆದರೆ, ಇದರಲ್ಲಿ ವಿಟಮಿನ್ ಬಿ-12 ಸೇರಿದಂತೆ ಹಲವು ಪೋಷಕಾಂಶಗಳು ಕೂಡ ಕಂಡು ಬರುತ್ತದೆ.


ಇದನ್ನೂ ಓದಿ- Premature White Hair : ನಿಮ್ಮ ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸುತ್ತೆ ಮೆಂತೆ ಕಾಳು!


* ಸೋಯಾಬೀನ್:
ವಿಟಮಿನ್ ಬಿ 12 ಕೊರತೆಯನ್ನು ನಿವಾರಿಸಬಲ್ಲ ಸಸ್ಯಾಹಾರಗಳಲ್ಲಿ ಸೋಯಾಬೀನ್ ಕೂಡ ಒಂದು. ಇದನ್ನು ಮೊಳಕೆ ಕಟ್ಟಿ ಸೇವಿಸುವುದು ಇನ್ನೂ ಆರೋಗ್ಯಕರ ಎಂದು ಹೇಳಲಾಗುತ್ತದ.e 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.