Raisin Side Effects: ಒಣದ್ರಾಕ್ಷಿಯ ಸಿಹಿ ನಮ್ಮಲ್ಲಿ ಹಲವರನ್ನು ಆಕರ್ಷಿಸುತ್ತದೆ, ಇದನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಕೆಲವರು ಇದನ್ನು ನೇರವಾಗಿ ತಿನ್ನುತ್ತಾರೆ. ಮತ್ತೆ ಕೆಲವರು ಇದನ್ನು ಸಿಹಿ ಭಕ್ಷ್ಯಗಳಲ್ಲಿ ಬಳಸುತ್ತಾರೆ. ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್‌ ತಿನ್ನಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ಚಳಿಗಾಲದ ಋತುವಿನ ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ ದೇಹವು ಸಂಪೂರ್ಣ ಪೋಷಣೆಯನ್ನು ಪಡೆಯುತ್ತದೆ. ಆದಾಗ್ಯೂ, ಒಣದ್ರಾಕ್ಷಿಗಳನ್ನು ಚಳಿಗಾಲದಲ್ಲಿ ಎಚ್ಚರಿಕೆಯಿಂದ ತಿನ್ನಬೇಕು ಏಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಶುಗರ್‌ ಲೆವಲ್‌ ಇದ್ದಕ್ಕಿದ್ದಂತೆ ಹೆಚ್ಚಾದ್ರೆ ಹತೋಟಿಗೆ ತರುತ್ತೆ ಈ ಮನೆಮದ್ದು


1. ಸಕ್ಕರೆಯ ಮಟ್ಟ ಹೆಚ್ಚಾಗಬಹುದು : ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಡ್ರೈ ಫ್ರೂಟ್ಸ್‌  ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ, ಆದರೆ ನೀವು ಒಣದ್ರಾಕ್ಷಿಗಳನ್ನು ಅಧಿಕವಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ವಿಶೇಷವಾಗಿ ಮಧುಮೇಹಿಗಳು ಹೆಚ್ಚು ಜಾಗರೂಕರಾಗಿರಬೇಕು.


2. ಜೀರ್ಣಕ್ರಿಯೆ ಸಮಸ್ಯೆ : ನಿಗದಿತ ಮಿತಿಗಿಂತ ಹೆಚ್ಚು ಒಣದ್ರಾಕ್ಷಿ ಸೇವಿಸುವವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವು ಜನರು ಗ್ಯಾಸ್ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಎದುರಿಸಬಹುದು.


3. ಅಲರ್ಜಿಗಳು : ಚಳಿಗಾಲದಲ್ಲಿ ಹೆಚ್ಚು ಒಣದ್ರಾಕ್ಷಿ ತಿನ್ನುವವರಿಗೆ ಅಲರ್ಜಿಯಂತಹ ಸಮಸ್ಯೆಗಳು ಬರಬಹುದು. ಆದ್ದರಿಂದ ನೀವು ನಿಗದಿತ ಮಿತಿಯನ್ನು ತಿಳಿದುಕೊಳ್ಳಬೇಕು.


ಇದನ್ನೂ ಓದಿ : ಉದ್ದನೆಯ ಕಪ್ಪು ಕೂದಲಿಗಾಗಿ ಈರುಳ್ಳಿ ಜೊತೆ ಇದನ್ನು ಸೇರಿಸಿ ಬಳಸಿ


4. ತೂಕ ಹೆಚ್ಚಾಗುವುದು : ನೈಸರ್ಗಿಕ ಸಕ್ಕರೆ ಒಣದ್ರಾಕ್ಷಿಗಳಲ್ಲಿ ಕಂಡುಬಂದರೂ, ಸಿಹಿಯಾಗಿದ್ದರೂ, ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು, ಇಲ್ಲದಿದ್ದರೆ ಸಕ್ಕರೆ ಕೊಬ್ಬಾಗಿ ಬದಲಾಗುತ್ತದೆ ಮತ್ತು ನಿಮ್ಮ ತೂಕ ಹೆಚ್ಚಾಗಬಹುದು.


5. ಯಕೃತ್ತಿನ ಹಾನಿ : ಯಕೃತ್ತು ನಮ್ಮ ದೇಹದ ಅತ್ಯಂತ ಸೂಕ್ಷ್ಮವಾದ ಅಂಗವಾಗಿದ್ದು, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೋರ ಉಳಿಯಲು ಬಯಸದಿದ್ದರೆ, ಚಳಿಗಾಲದಲ್ಲಿ ಹೆಚ್ಚು ಒಣದ್ರಾಕ್ಷಿಗಳನ್ನು ತಿನ್ನಬೇಡಿ. ಇಲ್ಲದಿದ್ದರೆ ಯಕೃತ್ತು ಹಾನಿಗೊಳಗಾಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.