Thyroid Early 8 Symptoms: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ರೋಗಗಳಲ್ಲಿ ಥೈರಾಯ್ಡ್ (Thyroid) ಕೂಡ ಒಂದು. ಈ ರೋಗವು ಆನುವಂಶಿಕವಾಗಿ ಬರುತ್ತದೆ ಎಂದು ಅನೇಕ ಜನರು ಹೇಳುತ್ತಾರೆ. ಆದರೆ ಥೈರಾಯ್ಡ್‌ಗೂ ಅನುವಂಶಿಕತೆಗೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯರು ನಂಬುತ್ತಾರೆ. 


COMMERCIAL BREAK
SCROLL TO CONTINUE READING

ನಮ್ಮ ದೇಹದಲ್ಲಿ ಯಾವುದೇ ರೋಗವು ಹಠಾತ್ ಉಲ್ಬಣಿಸುವುದಿಲ್ಲ. ಆರಂಭಿಕ ದಿನಗಳಲ್ಲಿ ಕೆಲವು ಲಕ್ಷಣಗಳು ಹೊರಹೊಮ್ಮುತ್ತವೆ. ಈ ಲಕ್ಷಣಗಳು ಒಂದು ರೀತಿಯ ಸಂಕೇತವಾಗಿರಬಹುದು. ಆಗಾಗ್ಗೆ ನಮ್ಮ ದೇಹವು ಈ ಬಗ್ಗೆ ನಮಗೆ ಸಂಕೇತವನ್ನು ನೀಡುವುದು ದೇಹದಲ್ಲಿ ಏನಾದರೂ ತೊಂದರೆ ಇದೆ ಎಂಬುದರ ಎಚ್ಚರಿಕೆಯ ಗಂಟೆ ಎಂದು ಭಾವಿಸಬಹುದು.


ಈ ರೋಗಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ, ಸರಿಯಾದ ಕಾಳಜಿವಹಿಸಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ (Health) ಸ್ಥಿತಿಯು ಹದಗೆಡದಂತೆ ಕ್ರಮ ಕೈಗೊಳ್ಳಬಹುದು. ಥೈರಾಯ್ಡ್‌ ಕೂಡ ಇದಕ್ಕೆ ಹೊರತಾಗಿಲ್ಲ.


ಇದನ್ನೂ ಓದಿ-  ಬ್ಲಾಕ್ ಕಾಫಿ ಜೊತೆಗೆ ಇವುಗಳನ್ನು ಮಿಕ್ಸ್ ಮಾಡಿ ಕುಡಿದರೆ ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗುತ್ತೆ


ಥೈರಾಯ್ಡ್‌ನ ಆರಂಭಿಕ ದಿನಗಳಲ್ಲಿ ಜನರು ದಣಿವಿನಂತಹ ಸಣ್ಣ ಲಕ್ಷಣಗಳನ್ನು ಅನುಭವಿಸುತ್ತಾರೆ. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಹೈಪೋಥೈರಾಯ್ಡ್ ಅಥವಾ ಹೈಪರ್ ಥೈರಾಯ್ಡ್ ಸ್ಥಿತಿಗೆ ಕಾರಣವಾಗುತ್ತದೆ  ಎಂದು ವೈದ್ಯರು ಹೇಳುತ್ತಾರೆ.


ಥೈರಾಯ್ಡ್ ಗ್ರಂಥಿ :
ಥೈರಾಯ್ಡ್ (Thyroid) ನಮ್ಮ ದೇಹದಲ್ಲಿ ಇರುವ ಗ್ರಂಥಿಯಾಗಿದೆ. ಇದು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಕಡಿಮೆ ಅಥವಾ ಹೆಚ್ಚಿನ ಮಟ್ಟದ ಹಾರ್ಮೋನುಗಳಾದ ಟಿ 3, ಟಿ 4 ಮತ್ತು ಟಿಎಸ್ಹೆಚ್ ಇರುವುದರಿಂದ ಥೈರಾಯ್ಡ್ ಸಮಸ್ಯೆ ಪ್ರಾರಂಭವಾಗುತ್ತದೆ.


ಇದನ್ನೂ ಓದಿ-  Healthy Diet: ಆಯುರ್ವೇದದ ಪ್ರಕಾರ, ಬೆಳಿಗ್ಗೆ ಉಪಹಾರದಲ್ಲಿ ಏನು ತಿನ್ನಬೇಕು? ಏನನ್ನು ತಿನ್ನಬಾರದು ಎಂದು ತಿಳಿಯಿರಿ


ಥೈರಾಯ್ಡ್‌ನ ಆರಂಭಿಕ ಲಕ್ಷಣಗಳು-
>> ದೇಹದ ಸ್ನಾಯುಗಳು, ಕೀಲುಗಳಲ್ಲಿ ಆಗಾಗ್ಗೆ ನೋವು ಉಂಟಾಗುತ್ತದೆ. ನೋವು ನಿವಾರಕಗಳು ಅಥವಾ ಔಷಧಿಗಳನ್ನು ಅನ್ವಯಿಸಿದ ನಂತರವೂ ನೋವು ಮತ್ತೆ ಮತ್ತೆ ನೋವು ಕಾಣಿಸಿಕೊಳ್ಳುವುದು.
>> ಥೈರಾಯ್ಡ್ ಹೆಚ್ಚಾಗಿದ್ದರೆ, ಕುತ್ತಿಗೆಯಲ್ಲಿ ಊತ ಕಂಡುಬರಬಹುದು. ಈ ಸಂದರ್ಭದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
>> ಚರ್ಮದ ಶುಷ್ಕತೆ ಹೈಪೋಥೈರಾಯ್ಡ್‌ನಲ್ಲಿ ಸಂಭವಿಸಬಹುದು.
>> ತ್ವರಿತ ಕೂದಲು ಉದುರುವುದು, ಹುಬ್ಬುಗಳ ಕೂದಲು ಉದುರುವುದು ಮುಂತಾದ ಸಮಸ್ಯೆಗಳು ಕಂಡು ಬರಬಹುದು.
>> ಮಲಬದ್ಧತೆಯ ಸಮಸ್ಯೆ ಅತಿಯಾಗುವುದು.
>> ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಅಸಹನೀಯ ಹೊಟ್ಟೆ ನೋವು ಬರಬಹುದು. ಇದಲ್ಲದೆ ಋತುಚಕ್ರ ನಿಯಮಿತವಾಗಿ ಇಲ್ಲದಿರುವುದೂ ಕೂಡ ಇದರ ಒಂದು ಲಕ್ಷನವಾಗಿರಬಹುದು. 
>> ತ್ವರಿತ ತೂಕ ಹೆಚ್ಚಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.
>> ಕಷ್ಟಪಟ್ಟು ಕೆಲಸ ಮಾಡದೆ ಇದ್ದರೂ ತುಂಬಾ ದಣಿದ ಅನುಭವವಾಗುವುದು. ಅನೇಕ ಜನರಿಗೆ ಆತಂಕದ ಸಮಸ್ಯೆ ಇರಬಹುದು.


(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.