ಬೆಂಗಳೂರು : ಕರೋನಾ ಕಾಲಕ್ಕೆ ಬೆಲೆ ಏರಿಕೆ ಬರೆ ಎಳೆದಿದೆ. ಕರೋನಾ  (Coronavirus) ಮಾಹಾಮಾರಿ ವಿರುದ್ಧ ನಮ್ಮನ್ನು ಕಾಪಾಡಿಕೊಳ್ಳಲು ಅಗತ್ಯ ಎಂದು ಹೇಳಲಾಗಿರುವ ಹಣ್ಣು ತರಕಾರಿಗಳು ವಿಪರೀತ ದುಬಾರಿಯಾಗಿವೆ. ಒಂದು ಕಡೆಯಲ್ಲಿ ಜನರ ಆದಾಯ ದಯನೀಯವಾಗಿ ಕುಸಿದೆ. ಲಾಕ್ ಡೌನ್ (Lockdown) ಕಾರಣದಿಂದಾಗಿ ಇದ್ದ ಆದಾಯದ ಮೂಲಗಳೂ ಬಂದ್ ಆಗಿವೆ. ಮತ್ತೊಂದು ಕಡೆ ಖರ್ಚು ವಿಪರೀತವಾಗಿ ಹೆಚ್ಚಾಗಿದೆ. ಇಂಥ ಸನ್ನಿವೇಶದಲ್ಲಿ ನಮ್ಮ ಜೇಬಿಗೆ ಎಟಕುವ, ಮಿಟಮಿನ್ ಗಳಿಂದ ಸಮೃದ್ಧವಾಗಿರುವ ಹಣ್ಣುಗಳ  (Fruits) ಆಯ್ಕೆ ಹೇಗೆ..? ಇಲ್ಲಿದೆ ಕೆಲವು ಟಿಪ್ಸ್.


COMMERCIAL BREAK
SCROLL TO CONTINUE READING

ದುಪ್ಪಟ್ಟು ಬೇಡಿಕೆ, ನಾಲ್ಕು ಪಟ್ಟು ರೇಟ್..!
1. ಎಳನೀರು: ಮೊದಲು 40 -50 ರೂಪಾಯಿಗೆ ಸಿಗುತಿತ್ತು. ಈಗ 80-100 ರೂಪಾಯಿ ಆಗಿದೆ.
2. ಲಿಂಬೆ ಹಣ್ಣು (Lemon) : ಕಿಲೋಗೆ 60-80 ರೂಪಾಯಿ ಇತ್ತು. ಈಗ 150-200 ಆಗಿದೆ
3. ಕಿವಿ ಹಣ್ಣು (Kiwi) : ಒಂದು ಹಣ್ಣಿಗೆ 15-20 ರೂಪಾಯಿ ಇತ್ತು. ಇದೀಗ 60 ರೂಪಾಯಿ
4. ಚಿಕ್ಕು : 40-50/ಕೆಜಿ ಸಿಗುತ್ತಿತ್ತು. ಈಗ 150/ಕೆಜಿ ಆಗಿದೆ
5. ಸೇಬು (Apple) : 150-200/ಕೆಜಿ ಇದ್ದದ್ದು 300/ ಕೆಜಿ ಆಗಿದೆ
6. ಡಜನ್ ಬಾಳೆ ಹಣ್ಣು 40 ರೂಪಾಯಿ ಇತ್ತು. ಇದೀಗ 70 ರೂಪಾಯಿ. 


ಇದನ್ನೂ ಓದಿ Covid Positive Diet: ಕರೋನಾ ರೋಗಿಗಳು ಏನು ತಿನ್ನಬೇಕು? ಇಲ್ಲಿದೆ ಲಿಸ್ಟ್


ಹಾಗಾದರೆ ಪರ್ಯಾಯ ಏನು..?
1. ನಿಮ್ಮ ಡಯಟ್ ನಲ್ಲಿ (Diet) ಸಾಕಷ್ಟು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇರಿಸಿ. ಹಾಲಿನ (Milk) ಬೆಲೆ ಏರಿಕೆ ಆಗಿಲ್ಲ. ಕರೋನಾ ಕಾಲದಲ್ಲಿ ಬೇಕಾಗುವಷ್ಟು ವಿಟಮಿನ್ ಗಳು ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳಲ್ಲಿ ಸಿಗುತ್ತದೆ.
2. ಆಹಾರದಲ್ಲಿ ತುಪ್ಪವನ್ನು (Ghee) ತುಸು ಹೆಚ್ಚು ಬಳಸಿ. ಮನೆ ಸಾಮಾನಿನ ಬಜೆಟಿನಲ್ಲೇ ಇದೂ ನಡೆದು ಹೋಗುತ್ತದೆ
3. ಪಪ್ಪಾಯಿ ಇನ್ನೂ ಕಾಸ್ಟ್ಲಿ ಆಗಿಲ್ಲ. ಪಪ್ಪಾಯಿ (Papaya) ಬಳಸಿ. ಅದರಲ್ಲಿ ಸಾಕಷ್ಟು ವಿಟಮಿನ್ ಎ ಮತ್ತು ಸಿ ಸಿಗುತ್ತದೆ. ಫಾಲಿಕ್ ಆಸಿಡ್ ಕೂಡಾ ಸಮೃದ್ದವಾಗಿರುತ್ತದೆ.
4. ಲಿಂಬೆ  ದುಬಾರಿಯಾಗಿದೆ ನಿಜ. ಅದರ ಬದಲಿಗೆ ಒಣ ನೆಲ್ಲಿ ಬಳಸಿ. ಲಿಂಬೆಗಿಂತಲೂ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಒಣ ನೆಲ್ಲಿಯಲ್ಲಿ ಸಿಗುತ್ತದೆ
5. ಇದು ಮಾವಿನ ಸೀಸನ್. ಸಾಕಷ್ಟು ಪ್ರಮಾಣದಲ್ಲಿ ಮಾವು (Mango) ಮಾರುಕಟ್ಟೆಯಲ್ಲಿ ಸಿಗುತ್ತಿದೆ. ದರವೂ ಪರವಾಗಿಲ್ಲ. ಡಯಟಿನಲ್ಲಿ ಮಾವಿಗೆ ಸ್ವಲ್ಪ ಹೆಚ್ಚಿನ ಪ್ರಾಧಾನ್ಯ ಕೊಡಿ. ಜೇಬಿಗೆ ಖುಷಿಯಾಗುತ್ತದೆ. ಆರೋಗ್ಯಕ್ಕೂ ಹಿತಕಾರಿ.
6. ನೀವು ಊರ ಕಡೆ ಇದ್ದರೆ, ಸಾಧ್ಯವಾದಷ್ಟು ಹಿತ್ತಲ ಹಣ್ಣು, ತರಕಾರಿಗಳನ್ನು ಬಳಸಿ. ಆರೋಗ್ಯಕ್ಕೂ ಒಳ್ಳೆಯದು, ಜೇಬಿಗೂ ಹಿತಕಾರಿ.


ಇದನ್ನೂ ಓದಿ : ಅಡುಗೆ ಮನೆಯ ಪುದಿನದ ಆರೋಗ್ಯ ಲಾಭ ಅಷ್ಟಿಷ್ಟಲ್ಲ..! ಖಂಡಿತಾ ತಿಳಿಯಬೇಕು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.