ಅಡುಗೆ ಮನೆಯ ಪುದಿನದ ಆರೋಗ್ಯ ಲಾಭ ಅಷ್ಟಿಷ್ಟಲ್ಲ..! ಖಂಡಿತಾ ತಿಳಿಯಬೇಕು

ಆಯುರ್ವೇದದಲ್ಲಿ ಪುದಿನಾಗೆ  ಅತ್ಯಂತ ಮಹತ್ವದ ಸ್ಥಾನವಿದೆ.  ಸ್ವಾದ, ಸೌಂದರ್ಯ ಮತ್ತು ಸುಗಂಧದ  ಅತ್ಯುತ್ತಮ ಸಂಗಮ ಪುದಿನದಲ್ಲಿದೆ. ತುಂಬಾ ದಿನಗಳ ತನಕ ಪುದಿನ ಗಿಡ ಬದುಕುತ್ತದೆ. 

Written by - Ranjitha R K | Last Updated : May 9, 2021, 01:35 PM IST
  • ಆಯುರ್ವೇದದಲ್ಲಿ ಪುದಿನಾ ಸೊಪ್ಪಿಗೆ ಅತ್ಯಂತ ಮಹತ್ವ ಇದೆ.
  • ಅಪೂರ್ವ ಸ್ವಾದ, ಸೌಂದರ್ಯ ಮತ್ತು ಸುಗಂಧದ ಸಂಗಮ ಇದರಲ್ಲಿದೆ
  • ಅಷ್ಟ ಮಹಾಮಾರಿ ನಿವಾರಕ ಈ ಪುದಿನ ಸೊಪ್ಪು..!
ಅಡುಗೆ ಮನೆಯ ಪುದಿನದ ಆರೋಗ್ಯ ಲಾಭ ಅಷ್ಟಿಷ್ಟಲ್ಲ..! ಖಂಡಿತಾ ತಿಳಿಯಬೇಕು title=
ಆಯುರ್ವೇದದಲ್ಲಿ ಪುದಿನಾ ಸೊಪ್ಪಿಗೆ ಅತ್ಯಂತ ಮಹತ್ವ ಇದೆ. (file photo)

ನವದೆಹಲಿ : ಆಯುರ್ವೇದದಲ್ಲಿ ಪುದಿನಾಗೆ (Pudina) ಅತ್ಯಂತ ಮಹತ್ವದ ಸ್ಥಾನವಿದೆ.  ಸ್ವಾದ, ಸೌಂದರ್ಯ ಮತ್ತು ಸುಗಂಧದ  ಅತ್ಯುತ್ತಮ ಸಂಗಮ ಪುದಿನದಲ್ಲಿದೆ. ತುಂಬಾ ದಿನಗಳ ತನಕ ಪುದಿನ ಗಿಡ ಬದುಕುತ್ತದೆ.  12 ತಿಂಗಳುಗಳ ಕಾಲ ಯಾವತ್ತೂ ಬೇಕಾದರೂ ಪುದಿನಾವನ್ನು (Mint leave) ಬಳಸಬಹುದು ಎಂದು ಆಯುರ್ವೇದ ಹೇಳುತ್ತದೆ. ಯಾಕೆಂದರೆ, ಅಷ್ಟೂ ದಿನ  ಅದರಲ್ಲಿ ಸ್ವಾದ ಮತ್ತು ಸುವಾಸನೆ ಹಾಗೇ ಇರುತ್ತದೆ.  ಪುದಿನ ಮತ್ತು ಪೆಪ್ಪರ್ ಮಿಂಟ್ ಒಂದೇ ರೀತಿಯದ್ದಾಗಿದ್ದರೂ ಬೇರೆ ಬೇರೆ ಪ್ರಬೇಧಗಳಿಗೆ ಸೇರಿದ್ದಾಗಿವೆ.  ಇವತ್ತು ನಾವು ಪುದಿನ ಮತ್ತು ಆದರಿಂದಾಗುವ  ಆರೋಗ್ಯ ಲಾಭದ (Health benefits) ಬಗ್ಗೆ ತಿಳಿಯೋಣ. 

1. ಬಾಯಿವಾಸನೆ ನಿವಾರಿಸುತ್ತದೆ. 
ಒಂದು ಗ್ಲಾಸ್ ನೀರಿಗೆ (water) ನಾಲ್ಕೈದು ಪುದಿನ  ಎಲೆ (Mint leave) ಹಾಕಿ ಕುದಿಸಿ, ಅದನ್ನು ತಣ್ಣಗೆ ಮಾಡಿ ಬಾಯಿ ಮುಕ್ಕಳಿಸಿದರೆ ಬಾಯಿ ವಾಸನೆ ದೂರವಾಗುತ್ತದೆ. 

ಇದನ್ನೂ ಓದಿ : Benefits of Dates : ವಿವಾಹಿತರೇ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ 3 ಆಹಾರ ಸೇವಿಸಿ!

2. ಹಲ್ಲು ನೋವಿಗೆ.
ನಾಲ್ಕೈದು ಪುದಿನ ಎಲೆಗಳನ್ನು ಬಾಯಿಯೊಳಗೆ ಇಟ್ಟು ಚೆನ್ನಾಗಿ ಅಗಿಯಿರಿ. ಹಲ್ಲು ನೋವು, (tooth pain) ಒಸಡು ನೋವು ದೂರವಾಗುತ್ತದೆ. 

3. ಮುಖದಲ್ಲಿನ ಕಲೆಗಳಿಗೆ
ಪುದಿನ ಸೊಪ್ಪನ್ನು ಚೆನ್ನಾಗಿ ಪುಡಿ ಮಾಡಿ ನೀರಿಗೆ ಹಾಗಿ ಅದರ  ಉಗಿ ತೆಗೆದುಕೊಂಡರೆ ಮುಖದಲ್ಲಿ ಕಲೆಗಳು (Spots) ಮಾಯವಾಗುತ್ತವೆ.

4. ಹೊಟ್ಟೆಯಲ್ಲಿ ಗ್ಯಾಸ್
ನಿಮಗೆ ಗ್ಯಾಸ್ (Acidity)  ಅಥವಾ ಹೊಟ್ಟೆ ಉಬ್ಬರಿಸುವ ಸಮಸ್ಯೆ ಇದ್ದರೆ ಪುದಿನ ಹಾಕಿದ ಟೀ ಕುಡಿಯಿರಿ. ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ : Peanuts Benefits : ಶೇಂಗಾದಲ್ಲಿದೆ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಗುಟ್ಟು : ಹೇಗೆ ಇಲ್ಲಿದೆ ನೋಡಿ 

5.  ಸುಸ್ತು ಕಡಿಮೆ ಮಾಡುತ್ತದೆ.
ಸಿಕ್ಕಾಪಟ್ಟೆ ಸುಸ್ತು ಕಾಣಿಸಿಕೊಳ್ಳುತ್ತಿದ್ದರೆ ನೀರಿಗೆ ಪುದಿನದ ಎಣ್ಣೆ (Mint oil) ಹಾಕಿ ಅದರಲ್ಲಿ ಪಾದಗಳನ್ನು ಇಡಿ.  ಸುಸ್ತು ಬಹುಬೇಗ ದೂರವಾಗುತ್ತದೆ.

6. ಬಿಕ್ಕಳಿಕೆಗೆ
ಪುದಿನದ ರಸವನ್ನು ತೆಗೆದು ಜೇನು ತುಪ್ಪದೊಂದಿಗೆ (Honey) ಸೇರಿಸಿ ತಿಂದರೆ ಬಿಕ್ಕಳಿಕೆ ಮಾಯ.

7. ಕೆಮ್ಮು ನಿವಾರಣೆ
ಹವಾಮಾನ ವೈಪರೀತ್ಯದಿಂದಾಗಿ ಕೆಮ್ಮು (Cough) ಕಾಣಿಸಿಕೊಂಡರೆ ಪುದಿನ ಚಹಾಗೆ ಸ್ವಲ್ಪ  ಉಪ್ಪು ಸೇರಿಸಿ ಕುಡಿಯಿರಿ. ಕೆಮ್ಮು ಕಡಿಮೆಯಾಗುತ್ತದೆ

ಇದನ್ನೂ ಓದಿ : Center Releases List Of Immunity Boosters - ಇಮ್ಯೂನಿಟಿ ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಲಿಸ್ಟ್, ಏನೇನು ಶಾಮೀಲಾಗಿವೆ

8. ನೋವು ಉಪಶಮನಕಾರಿ
ನಿಮಗೆ ಹೊಟ್ಟೆ ನೋವು, ಮೈಕೈ ನೋವು ಕಾಣಿಸಿಕೊಂಡರೆ ಪುದಿನ, ಶುಂಠಿ (Ginger) ರಸಕ್ಕೆ ಸ್ವಲ್ಪ  ಉಪ್ಪು ಸೇರಿಸಿ ದಿನಕ್ಕೆ ಹಲವು ಸಲ ಕುಡಿದರೆ  ಶಾರೀರಿಕ ನೋವು ದೂರವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News