Tips For Mens Stamina: ನಿತ್ಯ ಖಾಲಿ ಹೊಟ್ಟೆ 2 ಬೆಳ್ಳುಳ್ಳಿ ಸೇವಿಸಿದರೆ ಪುರುಷರಿಗೆ ಸಿಗುತ್ತೆ ಈ ಲಾಭ, ಸೇವಿಸುವ ವಿಧಾನ ಇಲ್ಲಿದೆ!
Garlic Benefits For Men: ಪ್ರತಿಯೊಂದು ಭಾರತೀಯ ಮನೆಯಲ್ಲಿ ಸಿಗುವ ಒಂದು ಸಾಮಾನ್ಯ ಗೆಡ್ಡೆ ಎಂದರೆ ಅದು ಬೆಳ್ಳುಳ್ಳಿ, ಬೆಳ್ಳುಳ್ಳಿ ಪುರುಷರ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುತ್ತದೆ. ಆದರೆ ಅದನ್ನು ಸೇವಿಸುವ ವಿಧಾನ ಸರಿಯಾಗಿರಬೇಕು. ಬನ್ನಿ ತಿಳಿದುಕೊಳ್ಳೋಣ (Lifestyle News In Kannada)
Garlic Health Benefits For Men: ಪ್ರತಿಯೊಂದು ಭಾರತೀಯ ಮನೆಯಲ್ಲಿ ಸಿಗುವ ಒಂದು ಸಾಮಾನ್ಯ ಮಸಾಲೆ ಎಂದರೆ ಅದು ಬೆಳ್ಳುಳ್ಳಿ. ಇದರ ಬಳಕೆ ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ, ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ. ಏಕೆಂದರೆ ಬೆಳ್ಳುಳ್ಳಿ ಹಲವಾರು ಔಷಧೀಯ ಗುಣಗಳ ಆಗರವಾಗಿದೆ. ಬೆಳ್ಳುಳ್ಳಿ ಸೇವನೆಯಿಂದ ಉಸಿರಾಟದ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ಮುಖ್ಯವಾಗಿ ಬೆಳ್ಳುಳ್ಳಿಯ ಬಳಕೆಯು ಪುರುಷರ ಸಮಸ್ಯೆಗಳನ್ನು (Mens Health Problem) ತೊಡೆದುಹಾಕಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯಕಾರಿಯಾಗಿದೆ. ಪುರುಷರಲ್ಲಿ ಈರೆಕ್ಟೈಲ್ ಡೀಸ್ಫಂಕ್ಷನ್ (Erectile Disfunction Problem In Men) ಸಮಸ್ಯೆಯನ್ನು ನಿವಾರಿಸುವಲ್ಲಿ ಇದು ಸಾಕಷ್ಟು ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಪುರುಷರಲ್ಲಿ ಸ್ಟೇಮೀನಾ ಹೆಚ್ಚಾಗುತ್ತದೆ. ಬೆಳ್ಳುಳ್ಳಿಯನ್ನು ಸರಿಯಾದ ವಿಧಾನದಲ್ಲಿ ಸೇವಿಸಿದರೆ, ಅದು ಹಲವು ಆರೋಗ್ಯ ಪ್ರಯೋಜಂಗಳನ್ನು ನೀಡುತ್ತದೆ. (Lifestyle News In Kannada)
ಬೆಳ್ಳುಳ್ಳಿ ಸೇವನೆಯಿಂದ ಪುರುಷರಿಗಾಗುವ ಪ್ರಯೋಜನಗಳು (raw garlic benefits for male)
ಬೆಳ್ಳುಳ್ಳಿ ಅಲಿಸಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ರಕ್ತನಾಳಗಳನ್ನು ವಿಸ್ತರಿಸುವ ಮೂಲಕ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಪುರುಷರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ವಯಸ್ಸಾದ ಪುರುಷರ ನಿಮಿರುವಿಕೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದೆ. .
ಜೇನುತುಪ್ಪದಲ್ಲಿ ಬೆಳ್ಳುಳ್ಳಿ ಸೇವಿಸಿ
ಪುರುಷರ ಸ್ಟೇಮೀನಾ ಹೆಚ್ಚಿಸಲು ಮತ್ತು ನಿಮಿರುವಿಕೆಯಲ್ಲಿನ ಅಪಸಾಮಾನ್ಯ ಕ್ರಿಯೆ ನಿವಾರಿಸಲು ಬೆಳ್ಳುಳ್ಳಿಯನ್ನು (garlic benefits for men's sexually) ನಿಯಮಿತವಾಗಿ ಸೇವಿಸಬೇಕು. ಜೇನುತುಪ್ಪದೊಂದಿಗೆ ಬೆಳ್ಳುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭ ಸಿಗುತ್ತದೆ. ಇದಕ್ಕಾಗಿ, ಸುಮಾರು 2 ಕುಡಿ ಬೆಳ್ಳುಳ್ಳಿಯನ್ನು ಜಜ್ಜಿ, ಅದರಲ್ಲಿ 1 ಚಮಚ ಜೇನುತುಪ್ಪವನ್ನು ಬೇರೆಸಬೇಕು. ಇದನ್ನು ಖಾಲಿ ಹೊಟ್ಟೆಯಲ್ಲಿ 2 ರಿಂದ 3 ತಿಂಗಳ ಕಾಲ ನಿರಂತರವಾಗಿ ಸೇವಿಸುವುದರಿಂದ ಸ್ಟೇಮೀನಾ ಹೆಚ್ಚಾಗುತ್ತದೆ. ಇದರೊಂದಿಗೆ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಮಿಶ್ರಣವು ಹಲವು ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ.
ಬೆಳ್ಳುಳ್ಳಿ ಮಾತ್ರೆಗಳು
ಹಸಿ ಬೆಳ್ಳುಳ್ಳಿ ತಿನ್ನಲು ಇಷ್ಟವಿಲ್ಲದಿದ್ದರೆ ಅದರ ಮಾತ್ರೆಗಳನ್ನು ಸೇವಿಸಬಹುದು. ಸಪ್ಲಿಮೆಂಟ್‌ಗಳಂತಹ ಬೆಳ್ಳುಳ್ಳಿ ಮಾತ್ರೆಗಳನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ಇದು ಮುಖ್ಯವಾಗಿ ಪುರುಷರ ಸ್ಟೇಮೀನಾ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ-Weight Loss Remedy: ತೂಕ ಇಳಿಕೆಗೂ ಕೂಡ ತುಂಬಾ ಪರಿಣಾಮಕಾಗಿಯಾಗಿದೆ ಈ ಕ್ಯಾಕ್ಟಸ್ ಪ್ರಜಾತಿಯ ಗಿಡ!
ಹಸಿ ಬೆಳ್ಳುಳ್ಳಿಯನ್ನು ಅಗಿಯಿರಿ
ಪುರುಷರ ಸಮಸ್ಯೆಗಳನ್ನು ನಿವಾರಿಸಲು, ನೀವು ಅದನ್ನು ಕಚ್ಚಾ ಸೇವಿಸಬಹುದು. ಹಸಿ ಬೆಳ್ಳುಳ್ಳಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರ ಮೇಲೆ ನೀವು 1 ಗ್ಲಾಸ್ ಬಿಸಿ ನೀರನ್ನು ಕುಡಿಯಬಹುದು. ಇದು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ-Diabetes Control Spice: ಕೆಲವೇ ನಿಮಿಷಗಳಲ್ಲಿ ಮಧುಮೇಹವನ್ನು ನಿಯಂತ್ರಣಕ್ಕೆ ತರುತ್ತದೆ ಈ ಸಾಂಭಾರ ಪದಾರ್ಥ!
(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ