ಬೆಂಗಳೂರು : ನಿಮ್ಮ ಶ್ವಾಸಕೋಶ ದುರ್ಬಲವಾಗಿರಬಹುದು ಅಂತಾ ನಿಮಗನ್ನಿಸ್ತಾ ಇದೆಯಾ..? ಕರೋನಾ (Corona virus) ಮಹಾಮಾರಿ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ಶ್ವಾಸ ಕೋಶ (Lungs) ಬಲಿಷ್ಠವಾಗಿಡಬೇಕು ಅನ್ನೋ ಯೋಚನೆ ನಿಮಗಿದೆಯಾ..? ಕರೋನಾ ಮೊದಲು ನೇರವಾಗಿ ದಾಳಿ ಮಾಡುವುದು ನಮ್ಮ ಶ್ವಾಸಕೋಶದ ಮೇಲೆ. ಹಾಗಾಗಿ, ಎಲ್ಲರಿಗೂ ಶ್ವಾಸಕೋಶವನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂಬ ಯೋಚನೆ ಹೊಳೆದರೆ ತಪ್ಪೇನಲ್ಲ. ಅದರಲ್ಲೂ ವಾಯುಮಾಲಿನ್ಯ(Air Pollution), ವಾಹನಗಳ ಹೊಗೆ, ಧೂಳು (Dust) ಮೊದಲು ಘಾಸಿಗೊಳಿಸುವುದೇ ನಮ್ಮ ಶ್ವಾಸಕೋಶವನ್ನು. ಶ್ವಾಸ ಕೋಶ ಗಟ್ಟಿ ಇದ್ದರೆ ಹೃದ್ರೋಗವನ್ನೂ (Heart)ತಡೆಗಟ್ಟಬಹುದು.


COMMERCIAL BREAK
SCROLL TO CONTINUE READING

ಶ್ವಾಸಕೋಶವನ್ನು ಬಲಿಷ್ಠವಾಗಿಡುವುದು ಹೇಗೆ..?
ನೀವು ಒಂದು ರೂಪಾಯಿ ವೆಚ್ಚ ಮಾಡದೇ ಶ್ವಾಸಕೋಶವನ್ನು (Lungs) ಬಲಿಷ್ಠವಾಗಿಡಬಹುದು. ಇದಕ್ಕೆ ನೀವು ದುಬಾರಿ ವಸ್ತುಗಳನ್ನು ಖರೀದಿಸಬೇಕಾಗಿಲ್ಲ. ಅನಗತ್ಯ ಕಸರತ್ತುಗಳ ಅಗತ್ಯವೂ ಇಲ್ಲ. ಅಡುಗೆ ಮನೆಯಲ್ಲಿ ದಿನವೂ ಅಡುಗೆಗೆ (Kitchen) ಬಳಸುವ ಮೂರು ಮಸಾಲೆ (Spice) ವಸ್ತುಗಳನ್ನು ನೀವು ಸ್ವಲ್ಪ ಸ್ವಲ್ಪ ತಿಂದರೂ ಸಾಕು. ನಿಮ್ಮ ಶ್ವಾಸಕೋಶಕ್ಕೆ ಅಬೇಧ್ಯ ರಕ್ಷಾ ಕವಚ ಹಾಕಿ ಬಿಡಬಹುದು. ಯಾವುದು ಆ ಮೂರು ಮಸಾಲೆ.?



ಇದನ್ನೂ ಓದಿ : Sanitary Napkins ಬಳಸುವುದರಿಂದ Cancer ಬರುತ್ತದೆಯೇ?


1. ಹಳದಿ, ಇದು ಸಂಜೀವಿನಿಗೆ ಕಡಿಮೆ ಇಲ್ಲ!
ಆಯುರ್ವೇದದಲ್ಲಿ ಹಳದಿಗೆ (Turmeric) ಸಂಜೀವಿನಿ ಎಂದೂ ಕರೆಯಲಾಗುತ್ತದೆ. ಯಾಕೆಂದರೆ, ಹಳದಿಯಲ್ಲಿ ಸಾಕಷ್ಟು ಔಷದೀಯ ಗುಣಗಳಿವೆ. ಇದರಲ್ಲಿ ಆಂಟಿಸೆಪ್ಟಿಕ್ (antiseptic) ಮತ್ತು ಆಂಟಿಇನ್ಫ್ಲಮೇಟರಿ (anti-inflammatory) ಗುಣಗಳಿವೆ. ಹಾಗಾಗಿ ಇದು ಶ್ವಾಸಕೋಶವನ್ನು ಮಾಲಿನ್ಯದಿಂದ ರಕ್ಷಿಸುತ್ತದೆ. ಹಳದಿಯಲ್ಲಿ ಆಂಟಿವೈರಲ್ (anti-viral) ಗುಣ ಕೂಡಾ ಇದೆ. ಹಾಗಾಗಿ ಶ್ವಾಸಕೋಶಕ್ಕೆ ವೈರಸ್ ಸೋಂಕು ತಗಲದಂತೆ ಹಳದಿ ರಕ್ಷಣೆ ನೀಡುತ್ತದೆ. ಹಾಗಾಗಿ ದಿನಕ್ಕೆ ಅಗತ್ಯ ಪ್ರಮಾಣದ ಹಳದಿ ನಮ್ಮ ದೇಹಕ್ಕೆ ಬೇಕು. ಹಳದಿ ಹಾಲಿನ ಜೊತೆಯೂ ಸೇರಿಸಿ ಕುಡಿಯಬಹುದು. ನಿತ್ಯದ ಪ್ರಮಾಣದಲ್ಲಿ ಕನಿಷ್ಠ ಒಂದೆರಡು ಚಮಚ ಹಳದಿ ನಮ್ಮ ಆಹಾರದಲ್ಲಿರಬೇಕು


2. ಅಮೃತಬಳ್ಳಿಯ ಎದುರು ವೈರಸ್ ಉಳಿಯಲ್ಲ! : 
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು (Immunity) ಬಲಿಷ್ಠಗೊಳಿಸುವ ಇನ್ನೊಂದು ವಸ್ತು ಅಮೃತಬಳ್ಳಿ(Giloy). ಇದರಲ್ಲಿ ಆಂಟಿಮೈಕ್ರೋಬಿಯಲ್ (Anti-microbial)  ಗುಣವಿದೆ. ಇದು ವೈರಸ್ಗ್ಳಿಂದ ತಗಲಬಹುದಾದ ಎಲ್ಲಾ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.  ಅಮೃತಬಳ್ಳಿ ಶ್ವಾಸಕೋಶಕ್ಕೆ ರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಅಮೃತಬಳ್ಳಿಯ ಕಷಾಯ ಮಾಡಿ ಕುಡಿಯಬಹುದು. ಅಮೃತ ಬಳ್ಳಿ ಕಾಂಡ, ಬೇರನ್ನು ಪುಡಿಮಾಡಿ ಚಿಟಿಕೆಯಷ್ಟು ಸೇವನೆ ಮಾಡಬಹುದು. ಅಮೃತಬಳ್ಳಿಯ ಎಲೆಯನ್ನು ಹಾಗೇ ಮುರಿದು ಕಚ್ಚಾ ತಿನ್ನಬಹುದು. 



ಇದನ್ನೂ ಓದಿ : ತ್ವಚೆಯಲ್ಲಿ ಈ 4 ಲಕ್ಷಣಗಳು ಕಾಣುತ್ತಿದೆಯಾ..? ಅದು ಗಂಭೀರ ಕಾಯಿಲೆಯ ಮೊದಲ ಲಕ್ಷಣ


3. ಉತ್ತಮ ಆಂಟಾಕ್ಸಿಡೆಂಟ್ ಓಮ ಕಾಳು ಅಥವಾ ಅಜವಾಯಿನ್  
ಓಮ ಕಾಳು ಅಜವಾಯಿನ್ ಪ್ರತಿಯೊಂದು ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿ ಇದ್ದೇ ಇರುತ್ತದೆ. ಇದರಲ್ಲಿ Antioxidant  ಅಂಶ ಸಮೃದ್ಧವಾಗಿರುತ್ತದೆ. ಇದು ಶ್ವಾಸಕೋಶವನ್ನು ಬಲಿಷ್ಠಗೊಳಿಸುತ್ತದೆ. ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡುತ್ತದೆ. ಶ್ವಾಸ ನಾಳಕ್ಕೆ ಆರಾಮ ನೀಡುತ್ತದೆ. ಶ್ವಾಸಕೋಶಕ್ಕೊಂದು ರಕ್ಷೆ ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.