ತ್ವಚೆಯಲ್ಲಿ ಈ 4 ಲಕ್ಷಣಗಳು ಕಾಣುತ್ತಿದೆಯಾ..? ಅದು ಗಂಭೀರ ಕಾಯಿಲೆಯ ಮೊದಲ ಲಕ್ಷಣ

ಡಯಾಬಿಟಿಸ್  ಗುಣಪಡಿಸಲಾಗದ ಒಂದು ಕಾಯಿಲೆ. ಔಷಧೋಪಚಾರಗಳಿಂದ ಇದನ್ನು  ನಿಯಂತ್ರಿಸಬೇಕೇ ಹೊರತು ಇದರಿಂದ ಸಂಪೂರ್ಣ ಗುಣಹೊಂದಲು ಸಾಧ್ಯವೇ ಇಲ್ಲ. ಡಯಾಬಿಟಿಸ್ ಕಾರಣದಿಂದ ಇನ್ನೂ ಕೆಲವು ರೋಗಗಳನ್ನು ನಮ್ಮನ್ನು ಕಾಡುತ್ತವೆ. 

Written by - Ranjitha R K | Last Updated : Feb 8, 2021, 10:00 AM IST
  • ಗುಣಪಡಿಸಲಾಗದ ಕಾಯಿಲೆಯೊಂದರ ಮೊದಲ ಲಕ್ಷಣ ಚರ್ಮದಲ್ಲಿ ಕಾಣಿಸುತ್ತದೆ
  • ಯಾವುದೇ ಕಾರಣಕ್ಕೂ ಅದನ್ನು ಕಡೆಗಣಿಸಬಾರದು
  • ಚರ್ಮದ ಬದಲಾವಣೆ ಯಾವುದರ ಸಂಕೇತ ಅನ್ನೋ ಮಾಹಿತಿ ಈ ವರದಿಯಲ್ಲಿದೆ.
 ತ್ವಚೆಯಲ್ಲಿ ಈ 4 ಲಕ್ಷಣಗಳು ಕಾಣುತ್ತಿದೆಯಾ..? ಅದು ಗಂಭೀರ ಕಾಯಿಲೆಯ ಮೊದಲ ಲಕ್ಷಣ title=
ತ್ವಚೆಯ ಈ 4 ಲಕ್ಷಣಗಳನ್ನು ಕಡೆಗಣಿಸಬೇಡಿ (file photo)

ಬೆಂಗಳೂರು : ಡಯಾಬಿಟಿಸ್ (Diabetes) ಗುಣಪಡಿಸಲಾಗದ ಒಂದು ಕಾಯಿಲೆ. ಔಷಧೋಪಚಾರಗಳಿಂದ ಇದನ್ನು  ನಿಯಂತ್ರಿಸಬೇಕೇ ಹೊರತು ಇದರಿಂದ ಸಂಪೂರ್ಣ ಗುಣಹೊಂದಲು ಸಾಧ್ಯವೇ ಇಲ್ಲ. ಡಯಾಬಿಟಿಸ್ ಕಾರಣದಿಂದ ಇನ್ನೂ ಕೆಲವು ರೋಗಗಳನ್ನು ನಮ್ಮನ್ನು ಕಾಡುತ್ತವೆ. ಮಧುಮೇಹದ ಕಾರಣದಿಂದ ಕಿಡ್ನಿ ಡ್ಯಾಮೇಜ್ (Kidney Damage) ಆಗಬಹುದು. ಕಣ್ಣು ಕಾಣಿಸದೇ ಹೋಗಬಹುದು. ಹೃದ್ರೋಗ (Heart) ಬಾಧಿಸಬಹುದು.  ದೇಹದ ಹಲವು ಅಂಗಗಳನ್ನು ಡಯಾಬಿಟಿಸ್ ಬಾಧಿಸುತ್ತದೆ. ಡಯಾಬಿಟಿಸ್ ನಿಮ್ಮ ಚರ್ಮವನ್ನೂ (Skin) ಕೂಡಾ ಕಾಡುತ್ತದೆ. ದೇಹದಲ್ಲಿ ಬ್ಲಡ್ ಶುಗರ್ (Blood Sugar) ಮಟ್ಟ ಹೆಚ್ಚಾದಾಗ ಅದರ ಕೆಲವು ಸಂಕೇತ ಚರ್ಮದಲ್ಲೂ ಕಾಣಿಸುತ್ತಿರುತ್ತದೆ. ಅದೇನು ನೋಡೋಣ. 

ಶರೀರದಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದಾಗ ಮೂತ್ರ ಮಾಡುವ ಮೂಲಕ ಅದು ದೇಹದಿಂದ ಹೊರಗೆ ಹೋಗುತ್ತದೆ. ಒಂದು ವೇಳೆ ದೇಹದಲ್ಲಿ ಬ್ಲಡ್ ಶುಗರ್ ಮಟ್ಟ ತುಂಬಾ ಜಾಸ್ತಿಯಾದಾಗ ವ್ಯಕ್ತಿಗೆ ಪದೇ ಪದೇ ಮೂತ್ರ ಬರುತ್ತದೆ.  ಇದರಿಂದ ಡಿಹೈಡ್ರೇಶನ್ (Dehydration)  ಮತ್ತು ಡ್ರೈಸ್ಕಿನ್ (Dry skin) ಸಮಸ್ಯೆ ಎದುರಾಗುತ್ತದೆ. ಡಯಾಬಿಟಿಸ್ ರೋಗ ಡಯಾಗ್ನಸ್ ಆಗುವ ಮುನ್ನವೇ ಅದರ ಕೆಲವು ಸಂಕೇತಗಳು ನಮ್ಮ ತ್ವಚೆಯಲ್ಲಿ ಕಾಣಿಸಲಾರಂಭವಾಗುತ್ತದೆ.
ಚರ್ಮದಲ್ಲಿ ಮೂಡುವ ಸಂಕೇತಗಳು ಯಾವುದು..?

ಇದನ್ನೂ ಓದಿ : Health & Lemon : ಅತಿಯಾದರೆ ಅಮೃತವೂ ವಿಷ.! ಈ ಆರು ಕಾರಣಗಳಿದ್ದರೆ ನೀವು ನಿಂಬೆಯಿಂದ ದೂರವಿರಲೇ ಬೇಕು..!

1. ಚರ್ಮದಲ್ಲಿ ಡಾರ್ಕ್ ಪ್ಯಾಚ್ (Dark Patch) ಮೂಡುತ್ತದೆ.
ಒಂದು ವೇಳೆ ನಿಮ್ಮ ಕತ್ತು, ಅಂಡರ್ ಅರ್ಮ್, ಭುಜದ ಕೆಳಭಾಗ ಅಥವಾ ಶರೀರ ಬೇರೆ ಭಾಗಗಳಲ್ಲಿ ಡಾರ್ಕ್ ಪ್ಯಾಚ್ಗಚಳು (Dark Patch) ಕಾಣುತಿದ್ದರೆ, ಮುಟ್ಟಿದರೆ ಅದು ವೆಲ್ವೆಟ್ ತರಹ ಅನ್ನಿಸಿದರೆ ಇದು ಡಯಾಬಿಟಿಸ್ (Diabetes) ಬರುವ ಸಂಕೇತಗಳು.  ಮೆಡಿಕಲ್ ಟರ್ಮ್ನ)ಲ್ಲಿ ಇದಕ್ಕೆ ಎಕೌಂಥೋಸಿಸ್ ನಿಗ್ರಿಕೆನ್ಸ್  (Acanthosis nigricans) ಎಂದು ಕರೆಯುತ್ತಾರೆ. ರಕ್ತದಲ್ಲಿ (Blood) ಇನ್ಸೂಲಿನ್ ಪ್ರಮಾಣ ಅತ್ಯಂತ ಹೆಚ್ಚಾದಾಗ ಚರ್ಮದಲ್ಲಿ ಈ ಬದಲಾವಣೆಯಾಗುತ್ತದೆ. ಶೇ. 75 ರಷ್ಟು ಡಯಾಬಿಟಿಸ್ ರೋಗಿಗಳಲ್ಲಿ ಈ ಲಕ್ಷಣ ಕಂಡು ಬರುತ್ತದೆ. 

2. ತ್ವಚೆಯಲ್ಲಿ ಕೆಂಪು, ಹಳದಿ ಮತ್ತು ಕಂದು ಬಣ್ಣದ ಕಲೆ :
ಚರ್ಮದಲ್ಲಿ ತುರಿಕೆ ಹೆಚ್ಚಾಗುತ್ತಿದ್ದರೆ, ಚರ್ಮ ನೋಯುತ್ತಿದ್ದರೆ,  ತ್ವಚೆಯಲ್ಲಿ ಪಿಂಪಲ್ ರೀತಿಯ ಗುಳ್ಳೆಗಳು ಕಾಣಿಸುತ್ತಿದ್ದರೆ, ಇದರ ಜೊತೆ ಕೆಂಪು (Red), ಹಳದಿ (Yellow) ಮತ್ತು ಕಂದು (Brown) ಬಣ್ಣದ ಕಲೆಗಳು ಮೂಡುತ್ತಿದ್ದರೆ ಇದು ಮಧುಮೇಹ ಆವರಿಸುತ್ತಿರುವ ಲಕ್ಷಣ.  ಮೆಡಿಕಲ್ ಟರ್ಮಿನಲ್ಲಿ ಇದಕ್ಕೆ ನೆಕ್ರೋಬಯೋಸಿಸ್ ಲಿಪೋಡಿಕ್ Necrobiosis Lipoidica) ಎಂದು ಕರೆಯುತ್ತಾರೆ

ಇದನ್ನೂ ಓದಿ : ಭಾರತದಲ್ಲಿ ಸಿದ್ಧವಾಗುತ್ತಿವೆ ಇನ್ನೂ ಏಳು ಕೊರೊನಾ ಲಸಿಕೆ...!

3. ಸ್ಕಿನ್ ಟ್ಯಾಗ್ಸ್ :
ಕೆಲವೊಮ್ಮೆ ಚರ್ಮದ (Skin) ಕೆಲವುಕಡೆ ಬಣ್ಣದಲ್ಲಿ ಬೆಳವಣಿಗೆ ಕಾಣಿಸುತ್ತದೆ. ಈ ಬಣ್ಣಗಳು ಚರ್ಮಕ್ಕೆ ಅಂಟಿಕೊಂಡಂತಿರುತ್ತವೆ. ಇದನ್ನು ಸ್ಕಿನ್ ಟ್ಯಾಗ್ಸ್ (Skin Tags) ಎಂದು ಕರೆಯಲಾಗುತ್ತದೆ. ಶರೀರದಲ್ಲಿ ಬ್ಲಡ್ ಶುಗರ್ (Blood Sugar) ಲೆವೆಲ್ ಜಾಸ್ತಿಯಾದಾಗ ಸ್ಕಿನ್ ಟ್ಯಾಗ್ಸ್ ಹೆಚ್ಚಾಗುತ್ತದೆ.  ಇದು ಕೂಡಾ ಡಯಾಬಿಟಿಸ್ ಬರುವ ಸಂಕೇತ. ಶೇ. 25 ಡಯಾಬಿಟಿಸ್ ರೋಗಿಗಳಲ್ಲಿ ಮೊದಲು ಈ ಲಕ್ಷಣ ಕಂಡು ಬರುತ್ತದೆ. ಕಣ್ಣಿನ ರೆಪ್ಪೆಗಳಲ್ಲಿ, ಅಂಡರ್ ಅರ್ಮ್ಗೊಳಲ್ಲಿ, ಕುತ್ತಿಗೆಯಲ್ಲಿ ಕಂಡು ಬರುತ್ತದೆ. 

4. ಚರ್ಮದ ಗಾಯ ಗುಣವಾಗದೇ ಇರುವುದು.:
ಶರೀರದಲ್ಲಿ ಬ್ಲಡ್ ಶುಗರ್ ಅಂಶ ಅಧಿಕವಾದಾಗ  ಅದು ನರಗಳ ಮೇಲೆ ಪರಿಣಾಮ ಬೀರುತ್ತದೆ.  ಇದರಿಂದ ರಕ್ತ ಪರಿಚಲನೆ ಸಮಸ್ಯೆಯಾಗುತ್ತದೆ. ಇದರಿಂದ ನರ ಡ್ಯಾಮೇಜ್ ಆಗುತ್ತದೆ. ನರ ಡ್ಯಾಮೇಜ್ (Nerve  Damage)  ಆದಾಗ ಶರೀರದ ಯಾವುದೇ ಭಾಗದಲ್ಲಿ ಗಾಯ ಆದರೆ ಬೇಗ ಗುಣವಾಗುವುದಿಲ್ಲ. ಅದರಲ್ಲೂ ಕಾಲಿನಲ್ಲಿ ಯಾವುದೇ ಗಾಯಗಳು ಉಂಟಾದರೆ ಅದು ಬೇಗ ಗುಣವಾಗುವುದಿಲ್ಲ.  ಇದನ್ನು ಡಯಾಬಿಟಿಕ್ ಅಲ್ಸರ್ (Diabetic Ulcer) ಎಂದು ಕರೆಯಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News