Home Remedies For Glowing Skin: ನಿಮ್ಮ ಫ್ರಿಡ್ಜ್ ನಲ್ಲೇ ಇರುವ ವಸ್ತುಗಳಿಂದ ಪಡೆಯಬಹುದು ಹೊಳೆಯುವ ತ್ವಚೆ
ಟೊಮ್ಯಾಟೋ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ. ಟೊಮೆಟೊಗಳನ್ನು ನೈಸರ್ಗಿಕ ಎಫ್ಫೋಲಿಯೇಟರ್ ಎಂದು ಪರಿಗಣಿಸಲಾಗುತ್ತದೆ.
ನವದೆಹಲಿ : ಮಹಿಳೆಯರು ಮತ್ತು ಹುಡುಗಿಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಮೇಕ್ಅಪ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಮೇಕ್ಅಪ್ ಅನ್ನು ಅತಿಯಾಗಿ ಬಳಸುವುದು ಚರ್ಮಕ್ಕೂ ಹಾನಿಕಾರಕವಾಗಿ ಪರಿಣಮಿಸಲಿದೆ. ನಿಮ್ಮ ಮನೆಯ ಅಡುಗೆ ಮನೆಯಲ್ಲೇ ಇರುವ ಕೆಲವೊಂದು ವಸ್ತುಗಳನ್ನು ಬಳಸಿ ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು. ಆಯುರ್ವೇದದ ಪ್ರಕಾರ, ಮನೆಮದ್ದುಗಳಿಂದ ನಿಮ್ಮ ಚರ್ಮದ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಬಹುದು. ಇನ್ನು ಮುಖ್ಯ ವಿಷಯವೆಂದರೆ ನಿಮ್ಮ ಫ್ರಿಡ್ಜ್ ನಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ, ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು.
1. ಟೊಮ್ಯಾಟೊ :
ಟೊಮ್ಯಾಟೋ (Tomato) ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ. ಟೊಮೆಟೊಗಳನ್ನು ನೈಸರ್ಗಿಕ ಎಫ್ಫೋಲಿಯೇಟರ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್ಗಳು ಡೆಡ್ ಸೆಲ್ಸ್ ಮತ್ತು ಕಪ್ಪು ಕಲೆಗಳನ್ನು ತೆಗೆದುಹಾಕಿ, ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ನೀವು ಟೊಮೆಟೊವನ್ನು ಮಧ್ಯದಲ್ಲಿ ಕತ್ತರಿಸಿ ಅದನ್ನು ತೆಗೆದುಕೊಂಡು ಮುಖದ ಮೇಲೆ ಉಜ್ಜಿ. ನಂತರ 10 ನಿಮಿಷಗಳ ಕಾಲ ಬಿಡಿ. ನಂತರ ಮುಖವನ್ನು ನೀರಿನಿಂದ (water)ತೊಳೆಯಿರಿ.. ಹೀಗೆ ಮಾಡುತ್ತಾ ಬಂದರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಇದನ್ನೂ ಓದಿ : Melon Fruit Benefits : 'ಕರಬೂಜ ಹಣ್ಣಿ'ನಲ್ಲಿದೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು!
2. ನಿಂಬೆ ಬಳಸಿ
ಹೊಳೆಯುವ ಚರ್ಮವನ್ನು ಪಡೆಯಲು ನಿಮ್ಮ ಫ್ರಿಜ್ ನಲ್ಲಿ ಇಟ್ಟಿರುವ ನಿಂಬೆಯನ್ನು (Lemon) ಬಳಸಬಹುದು. ನಿಂಬೆಯಲ್ಲಿಯೂ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದು ನಿಮ್ಮ ಚರ್ಮದ ಬ್ಲ್ಯಾಕ್‌ಹೆಡ್‌ಗಳನ್ನು ತೆಗೆದುಹಾಕುತ್ತದೆ. ಅಲ್ಲದೆ ಆಂಟಿ ಏಜಿಂಗ್ ಆಗಿಯೂ ಇದು ಕೆಲಸ ಮಾಡುತ್ತದೆ. ಒಂದು ನಿಂಬೆಹಣ್ಣಿನ ರಸವನ್ನು ತೆಗೆದು ಅದನ್ನು ಹತ್ತಿಯ ಸಹಾಐದಿಂದ ಮುಖಕ್ಕೆ ಹಚ್ಚಿ, ಸಂಪೂರ್ಣ ಒಣಗಿದ ನಂತರ ನೀರಿನಿಂದ ತೊಳೆಯಿರಿ.. ನಿಂಬೆ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ . ಹೀಗಾಗಿ ಮುಖದಲ್ಲಿ ನ್ಯಾಚುರಲ್ ಗ್ಲೋ (Natural glow) ಸಿಗುತ್ತದೆ.
3. ಹಾಲಿನ ಕೆನೆ :
ಮನೆಯಲ್ಲಿ ಇರಿಸಲಾಗಿರುವ ಹಾಲಿನ ಕೆನೆ ಬಳಸಿ ಕೂಡಾ ಹೊಳೆಯುವ ಸ್ಕಿನ್ (glowing Skin) ಪಡೆದುಕೊಳ್ಳಬಹುದು. ಕೆನೆಗೆ ಒಂದು ಚಿಟಿಕೆ ಅರಿಶಿನ ಪುಡಿ (Turmeric) ಮತ್ತು ರೋಸ್ ವಾಟರ್ (Rose water) ಸೇರಿಸಿ ಮುಖಕ್ಕೆ ಹಚ್ಚಿ. ನಂತರ ಮುಖವನ್ನು ಉಗುರು ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಈ ವಿಧಾನವನ್ನು ಅನುಸರಿಸುತ್ತಾ ಬಂದರೆ, ಕೆಲವೇ ದಿನಗಳಲ್ಲಿ ವಿಭಿನ್ನ ಹೊಳಪು ಕಂಡು ಬರುತ್ತದೆ.
ಇದನ್ನೂ ಓದಿ : ಕರೋನಾ ಕಾಲದಲ್ಲಿ ಶುಗರ್ ಲೆವೆಲ್ ಕಾಪಾಡಲು ತಿನ್ನಿ ಈ ಸೂಪರ್ ಫುಡ್.!
4. ಜೇನುತುಪ್ಪ :
ಹೊಳೆಯುವ ಚರ್ಮಕ್ಕೆ ಜೇನು (Honey) ತುಂಬಾ ಪ್ರಯೋಜನಕಾರಿ. ಜೇನುತುಪ್ಪ ಮುಖದ ಮೇಲೆ ಮೊಡವೆಗಳಾಗದಂತೆ ತಡೆಯುತ್ತದೆ. ಅಲ್ಲದೆ ಚರ್ಮದ ಕೆಲ ಸಮಸ್ಯೆಗಳನ್ನು ನಿವಾರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.