ಮಾನ್ಸೂನ್ ಸಮಯದಲ್ಲಿ ಮಧುಮೇಹವನ್ನು ನಿರ್ವಹಿಸಲು ಸಲಹೆಗಳು
Diabetes Control Tips : ಬೆರಳನ್ನು ಚುಚ್ಚುವ ಅವಶ್ಯಕತೆ ಇರದ ಕಂಟಿನ್ಯುಯಸ್ ಗ್ಲೂಕೋಸ್ ಮಾನಿಟರಿಂಗ್ (CGM) ಸಾಧನಗಳಂತಹ ಸಾಧನಗಳನ್ನು ಬಳಸಿಕೊಂಡು ಇದನ್ನು ಸುಲಭವಾಗಿ ಮಾಡಬಹುದು. ಅಂತಹ ಸಾಧನಗಳು ಟೈಮ್ ಇದು ಒಂದು ದಿನದ ಗ್ಲೂಕೋಸ್ ಮಟ್ಟಗಳು ನಿಗದಿತ ವ್ಯಾಪ್ತಿಯಲ್ಲಿ ಉಳಿಯುವ ಸಮಯವನ್ನು ಸೂಚಿಸುವ ಇನ್ ರೇಂಜ್‌ನಂತಹ ಮೆಟ್ರಿಕ್‌ಗಳನ್ನು ಹೊಂದಿವೆ.
Diabetes Control Tips : ಲೆಕ್ಕವಿಲ್ಲದಷ್ಟು ಕಪ್ ಚಾಯ್ ಗಳು, ಕೆಸರು ಗುಂಡಿಗಳಲ್ಲಿ ಕುಣಿಯುವುದು, ಕಾಗದದ ದೋಣಿಗಳು, ಕಿಟಕಿಯ ಹೊರಗೆ ನೋಡಿಕೊಂಡು ಸಂಗೀತವನ್ನು ಕೇಳುತ್ತಾ ಬಿಸಿಬಿಸಿಯಾದ ಪಕೋಡಗಳನ್ನು ಸವಿಯುವುದು ಇವೆಲ್ಲವೂ ಸದಾ ನಮ್ಮ ಮೇಲೆ ಜಾದೂವನ್ನು ಮಾಡುವ ಮಾನ್‌ಸೂನ್‌ಗೆ ಅನ್ವರ್ಥಕವಾಗಿರುವ ಕೆಲವು ಅಂಶಗಳಾಗಿವೆ.
ಈ ಸಮಯದಲ್ಲಿ, ಮಧುಮೇಹವಿರುವ ಜನರು ನಿಯಮಿತವಾಗಿ ಪರಿಶೀಲಿಸಿಕೊಳ್ಳುವುದರ ಕುರಿತು ನಿಗಾವಹಿಸುವುದು ಬಹಳ ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೆ, ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಬೇಕು. ಬೆರಳನ್ನು ಚುಚ್ಚುವ ಅವಶ್ಯಕತೆ ಇರದ ಕಂಟಿನ್ಯುಯಸ್ ಗ್ಲೂಕೋಸ್ ಮಾನಿಟರಿಂಗ್ (CGM) ಸಾಧನಗಳಂತಹ ಸಾಧನಗಳನ್ನು ಬಳಸಿಕೊಂಡು ಇದನ್ನು ಸುಲಭವಾಗಿ ಮಾಡಬಹುದು. ಅಂತಹ ಸಾಧನಗಳು ಟೈಮ್ ಇದು ಒಂದು ದಿನದ ಗ್ಲೂಕೋಸ್ ಮಟ್ಟಗಳು ನಿಗದಿತ ವ್ಯಾಪ್ತಿಯಲ್ಲಿ ಉಳಿಯುವ ಸಮಯವನ್ನು ಸೂಚಿಸುವ ಇನ್ ರೇಂಜ್‌ನಂತಹ ಮೆಟ್ರಿಕ್‌ಗಳನ್ನು ಹೊಂದಿವೆ. ನಿಮ್ಮ ರೀಡಿಂಗ್‌ಗಳನ್ನು ಹೆಚ್ಚಾಗಿ ಪರಿಶೀಲಿಸುವುದರಿಂದ ಅತಿ ಉತ್ತಮ ವ್ಯಾಪ್ತಿಯಲ್ಲಿ ಹೆಚ್ಚು ಸಮಯ ಕಳೆಯುವುದರೊಂದಿಗೆ ಸಂಬಂಧಿಸಿದ್ದು, ಇದು ನಿಮ್ಮ ಗ್ಲೂಕೋಸ್ ನಿಯಂತ್ರಣವನ್ನು ಸುಧಾರಿಸಬಹುದು.
ಇದನ್ನೂ ಓದಿ: ಆಲೂಗಡ್ಡೆ ತಿಂದರೆ ತೂಕ ಕಡಿಮೆಯಾಗುತ್ತಾ.. ಅಥವಾ ಇಲ್ಲವೆ..? ತಪ್ಪದೇ ತಿಳಿಯಿರಿ..
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಎಂಡೋಕ್ರೈನಾಲಜಿಸ್ಟ್ ಆದ ಡಾ. ಅಭಿಜಿತ್ ಭೋಗರಾಜ್ ಹೇಳುತ್ತಾರೆ, " ಮಧುಮೇಹವಿರುವ ಜನರಿಗೆ ಮಾನ್ಸೂನ್ ಆರಂಭವು ಜ್ವರ ಮತ್ತು ನೀರಿನಿಂದ ಹರಡುವ ರೋಗಗಳಂತಹ ಸೋಂಕುಗಳ ಆಗಮನವನ್ನು ಸೂಚಿಸುತ್ತದೆ. ಇದು ಅವರ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾಗಿದ್ದು, ಅವರಿಗೆ ಇದು ವಿಶೇಷವಾಗಿ ಸವಾಲಿನ ಸಮಯವಾಗಿದೆ. ಮಧುಮೇಹ ಇರುವವರು ಈ ಸಮಯದಲ್ಲಿ ಆರೋಗ್ಯ ತೊಂದರೆ ಮತ್ತು ಗ್ಲೂಕೋಸ್ ಮಟ್ಟದ ಏರಿಳಿತಗಳನ್ನು ತಪ್ಪಿಸಲು ಮತ್ತು ಆರೋಗ್ಯವಾಗಿರಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು ಮತ್ತು ಪೂರ್ವಭಾವಿ ಕ್ರಮಗಳನ್ನು ಅನುಸರಿಸಬೇಕು. ಆದ್ದರಿಂದ, ಮಳೆಗಾಲದಲ್ಲಿ ಪರಿಶೀಲನೆಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಇದನ್ನು ಕಂಟಿನ್ಯುಯಸ್ ಗ್ಲೂಕೋಸ್ ಮಾನಿಟರಿಂಗ್ (CGM) ನಂತಹ ಪರಿಹಾರಗಳ ಮೂಲಕ ಬೆಂಬಲಿಸಬಹುದು.
ಈ ವರ್ಷ ನಿಮ್ಮ ಮಧುಮೇಹವನ್ನು ನಿರ್ವಹಿಸಿಕೊಂಡೇ ಮಳೆಗಾಲವನ್ನು ಆನಂದಿಸುವ ವಿಧಾನಗಳ ಕುರಿತು ಕೆಲವು ಸಲಹೆಗಳು ಇಲ್ಲಿವೆ:
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲನೆ ಮಾಡಿ: ಈ ಸಮಯದಲ್ಲಿ ನಿಮ್ಮ ದೈನಂದಿನ ವ್ಯಾಯಾಮ ಅಥವಾ ಆಹಾರ ಕ್ರಮವನ್ನು ನೀವು ಬದಲಾಯಿಸಬಹುದಾದುದರಿಂದ, ನಿಮ್ಮ ಗ್ಲೂಕೋಸ್ ಮಟ್ಟವನ್ನು ಆಗಾಗ್ಗೆ ಪರಿಶೀಲಿಸುವುದು ಅತ್ಯಗತ್ಯ. ಅದೃಷ್ಟವಶಾತ್, ಇದಕ್ಕಾಗಿ ಅನೇಕ ಮಾರ್ಗಗಳಿವೆ. ಧರಿಸಬಹುದಾದ CGM ಸಾಧನಗಳು, ಉದಾಹರಣೆಗೆ ಫ್ರೀಸ್ಟೈಲ್ ಲಿಬ್ರೆ, ನಿಮ್ಮ ಗ್ಲೂಕೋಸ್ ರೀಡಿಂಗ್‌ಗಳಿಗೆ ನೈಜ-ಸಮಯದ ಪ್ರವೇಶವನ್ನು ಒದಗಿಸಬಹುದು. ಪ್ರತಿ ದಿನದ 24 ಗಂಟೆಗಳಲ್ಲಿ ಸುಮಾರು 17 ಗಂಟೆಗಳ ಕಾಲ ನೀವು ಅತ್ಯುತ್ತಮ ಗ್ಲೂಕೋಸ್ ಮಟ್ಟದ ವ್ಯಾಪ್ತಿಯಲ್ಲಿ (ಸಾಮಾನ್ಯವಾಗಿ 70 - 180 mg/dl) ಇರಲು ಪ್ರಯತ್ನಿಸಬೇಕು. ಮಳೆಯೇ ಬಂದರೂ ಅಥವಾ ಬಿಸಿಲೇ ಬಂದರೂ, ಈ ರೀತಿಯಾಗಿ, ನೀವು ನಿಮ್ಮ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು.
ನಿಮ್ಮ ಆಹಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇರಿಸಿ: ಮಧುಮೇಹವು ನಿಮ್ಮ ರೋಗನಿರೋಧಕ ಶಕ್ತಿಗೆ ಪೆಟ್ಟು ಕೊಡಬಹುದು . ಆದ್ದರಿಂದ, ನಿಮ್ಮ ಸ್ಥಳೀಯ ಬೀದಿ ಬದಿಯ ತಿಂಡಿ ಮಾರಾಟಗಾರರಲ್ಲಿ ತಿನ್ನುವ ಆಸೆ ಬರಬಹುದಾದರೂ, ಮಧುಮೇಹವಿರುವ ಜನರು ನೀರಿನಿಂದ ಹರಡುವ ರೋಗಗಳಿಗೆ ಒಡ್ಡಿಕೊಳ್ಳುವುದನ್ನು ತಗ್ಗಿಸಿಕೊಳ್ಳಲು ಹೊರಗೆ ತಿನ್ನುವುದನ್ನು ತಪ್ಪಿಸಬೇಕು. ಹಸಿ ಆಹಾರ ಪದಾರ್ಥಗಳಿಂದ ದೂರವಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಉತ್ಕರ್ಷಣ ನಿರೋಧಕ-ಸಮೃದ್ಧ ಅಂಶಗಳಿಂದ ಸಮೃದ್ಧವಾಗಿರುವ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಅಂಟಿಕೊಳ್ಳಿ. ಇದು ಈ ಸಮಯದಲ್ಲಿ ನಿಮ್ಮ ಸೋಂಕುಗಳು ಅಥವಾ ರೋಗಗಳು ಅಂಟಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಹುಳುಗಳು ಅಥವಾ ಬ್ಯಾಕ್ಟೀರಿಯಾಗಳಿಗೆ ಮನೆಯಾಗುವ ಸೊಪ್ಪಿನ ತರಕಾರಿಗಳನ್ನು ಸರಿಯಾಗಿ ತೊಳೆಯುವುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಪಾದಗಳು ಒದ್ದೆ ಇರದಂತೆ ನೋಡಿಕೊಳ್ಳಿ : ಮಧುಮೇಹ ಇರುವವರು ಈ ಸಮಯದಲ್ಲಿ ತಮ್ಮ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪಾದಗಳ ಆರೈಕೆ ಮಳೆಗೆ ನೆನೆದ ನಂತರ ಮತ್ತು ಅದರೊಂದಿಗೆ ಬರಬಹುದಾದ ಸೋಂಕುಗಳಿಗೆ ತೆರೆದುಕೊಂಡ ನಂತರ ತಮ್ಮ ಪಾದಗಳನ್ನು ತೊಳೆದುಕೊಳ್ಳುವುದು ಇದರಲ್ಲಿ ಸೇರಿದೆ. ನಿಮ್ಮ ಪಾದಗಳು ಒದ್ದೆಯಾಗುವುದು ಅತ್ಯಂತ ಸಂಭವನೀಯತೆಯಾಗಿರುವುದರಿಂದ ನೀವು ಹೆಚ್ಚುವರಿ ಸಾಕ್ಸ್‌ಗಳನ್ನು ಸಹ ಒಯ್ಯುವುದು ಒಳ್ಳೆಯದು. ಶಿಲೀಂಧ್ರಗಳ ಸೋಂಕನ್ನು ತಪ್ಪಿಸಲು ಶುಷ್ಕ ಮತ್ತು ಸ್ವಚ್ಛವಾಗಿರುವ ಆರಾಮದಾಯಕ ಬೂಟುಗಳನ್ನು ಧರಿಸಿ (ಮತ್ತು ಕೊಳಚೆ ಗುಂಡಿಗಳಲ್ಲಿ ಕಾಲಿಟ್ಟು ನಡೆಯಬೇಡಿ).
ಇದನ್ನೂ ಓದಿ: ಈ ಕಾಯಿಲೆ ಇರುವವರು ಅಪ್ಪಿ ತಪ್ಪಿಯೂ ಸಾಬುದಾನಿ ತಿನ್ನಬೇಡಿ..! ಆರೋಗ್ಯವು ಹದಗೆಡುತ್ತದೆ
ವ್ಯಾಯಾಮವನ್ನು ಬಿಡಬೇಡಿ: ಮಳೆಗಾಲ ಬಂತೆಂದರೆ ಮನೆಯಲ್ಲಿ ಕುಳಿತು ವಿಶ್ರಮಿಸಬೇಕೆನ್ನುವ ಭಾವ ಮೂಡುತ್ತದೆ. ಆದರೆ, ಮಧುಮೇಹವಿರುವರು ಸಕ್ರಿಯರಾಗಿರಬೇಕು ಮತ್ತು ವ್ಯಾಯಾಮದಲ್ಲಿ ಸ್ಥಿರತೆಯನ್ನು ಇಟ್ಟುಕೊಳ್ಳಬೇಕು. ಮಳೆಯಿಂದಾಗಿ ಕೆಲವು ಹೊರಾಂಗಣ ಆಯ್ಕೆಗಳು ಲಭ್ಯವಿಲ್ಲದಿದ್ದರೂ, ನೀವು ಯಾವಾಗಲೂ ಒಳಾಂಗಣದಲ್ಲಿ ಕಡಿಮೆ ತೀವ್ರತೆಯ ವ್ಯಾಯಾಮವನ್ನು ಪ್ರಯತ್ನಿಸಬಹುದು. ಉದಾಹರಣೆಗೆ,ಒಂದು ಸಣ್ಣ 30-ನಿಮಿಷಗಳ ತಾಲೀಮು ಅಥವಾ ದೈನಂದಿನ ಬೆಳಗಿನ ನಡಿಗೆಗಳು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಅಪಾರವಾಗಿ ಸಹಾಯ ಮಾಡುತ್ತದೆ.
ಸದಾ ಹೈಡ್ರೇಟೆಡ್ ಆಗಿರಿ: ಮಳೆಗಾಲದಲ್ಲಿ ಎಲ್ಲೆಲ್ಲೂ ನೀರಿದ್ದರೂ, ನಿಮ್ಮ ದೇಹವು ಸ್ವಯಂಚಾಲಿತವಾಗಿ ಹೈಡ್ರೀಕರಿಸುತ್ತದೆ ಎಂದು ಅರ್ಥವಲ್ಲ. ಭಾರತೀಯ ಮಾನ್ಸೂನ್‌ಗಳ ಮಾದರಿಯಾಗಿರುವ ಶಾಖದೊಂದಿಗಿನ ತೇವಾಂಶವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಮಧುಮೇಹ ಇರುವವರು ಸಾಕಷ್ಟು ಪ್ರಮಾಣದ ನೀರನ್ನು ಸೇವಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ: ಗಾಳಿಯಲ್ಲಿನ ತೇವಾಂಶವು ಕಣ್ಣಿನ ಸೋಂಕುಗಳು ಹರಡುವುದನ್ನು ಸುಲಭವಾಗಿಸುತ್ತದೆ. ಆದ್ದರಿಂದ, ಮಧುಮೇಹ ಇರುವವರು ಕೈ ತೊಳೆದ ನಂತರವೇ ಕಣ್ಣುಗಳನ್ನು ಮುಟ್ಟಿಕೊಳ್ಳುವಂತೆ ಜಾಗರೂಕತೆ ವಹಿಸಬೇಕು. ಸಾಧ್ಯವಾದರೆ, ನೀವು ಮಳೆಯಲ್ಲಿ ನೆನೆಯುತ್ತಿದ್ದರೆ ರಕ್ಷಣಾತ್ಮಕ ಕನ್ನಡಕವನ್ನು ಧರಿಸಿ. ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಮಧುಮೇಹದೊಂದಿಗೆ ಕೆಲವು ಕಣ್ಣಿನ ಕಾಯಿಲೆಗಳು ಬರುವ ಹೆಚ್ಚಿನ ಅಪಾಯವಿರುವುದರಿಂದ, ನೀವು ಯಾವುದೇ ಸಂಬಂಧಿತ ಗುಣಲಕ್ಷಣಗಳನ್ನು ಪರಿಶೀಲಿಸಲು ವಾರ್ಷಿಕವಾಗಿ ಕಣ್ಣಿನ ತಪಾಸಣೆಗಳನ್ನು ಸಹ ಪರಿಗಣಿಸಬೇಕು.
ಈ ಸಲಹೆಗಳ ಜೊತೆಗೆ, ಮಧುಮೇಹ ಹೊಂದಿರುವ ಜನರು ಹೈಪರ್ಗ್ಲೈಸೀಮಿಯಾ ಅಥವಾ ಹೈಪೊಗ್ಲಿಸಿಮಿಯಾದ ಯಾವುದೇ ಗುಣಲಕ್ಷಣಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ತಕ್ಷಣವೇ ಇವುಗಳ ಬಗ್ಗೆ ಕಾಳಾಜಿ ವಹಿಸಬೇಕು. ಒಟ್ಟಾರೆಯಾಗಿ ಹೇಳುವುದಾದರೆ, ಮಳೆಗಾಲದಲ್ಲಿ ಮಧುಮೇಹ ಇರುವ ಯಾವುದೇ ವ್ಯಕ್ತಿಗೆ 'ಜಾಗರೂಕರಾಗಿರಿ' ಎಂಬುದೇ ಮಂತ್ರವಾಗಿರಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ