ಆಲೂಗಡ್ಡೆ ತಿಂದರೆ ತೂಕ ಕಡಿಮೆಯಾಗುತ್ತಾ.. ಅಥವಾ ಇಲ್ಲವೆ..? ತಪ್ಪದೇ ತಿಳಿಯಿರಿ..

Potato Health Benefits : ಆಲೂಗಡ್ಡೆ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಈ ಪೋಸ್ಟ್‌ನಲ್ಲಿ ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಮತ್ತು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ..

Written by - Krishna N K | Last Updated : Aug 5, 2023, 05:21 PM IST
  • ಆಲೂಗಡ್ಡೆ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ.
  • ನಮ್ಮಲ್ಲಿ ಹಲವರು ಆಲೂಗಡ್ಡೆ ಪದಾರ್ಥವನ್ನು ಹೆಚ್ಚಾಗಿ ತಿನ್ನುತ್ತಾರೆ.
  • ಆಲೂಗಡ್ಡೆ ತಿಂದ್ರೆ ದಪ್ಪಾ ಆಗ್ತೀವಿ ಅಂತ ಅದರಿಂದ ದೂರ ಇರ್ತಾರೆ.
ಆಲೂಗಡ್ಡೆ ತಿಂದರೆ ತೂಕ ಕಡಿಮೆಯಾಗುತ್ತಾ.. ಅಥವಾ ಇಲ್ಲವೆ..? ತಪ್ಪದೇ ತಿಳಿಯಿರಿ.. title=

Weight loss tips : ನಮ್ಮಲ್ಲಿ ಹಲವರು ಆಲೂಗಡ್ಡೆ ಪದಾರ್ಥವನ್ನು ಹೆಚ್ಚಾಗಿ ತಿನ್ನುತ್ತಾರೆ. ಕೆಲವುರ ಅಯ್ಯೂ.. ಆಲೂಗಡ್ಡೆ ತಿಂದ್ರೆ ದಪ್ಪಾ ಆಗ್ತೀವಿ ಅಂತ ಅದರಿಂದ ದೂರ ಇರ್ತಾರೆ. ಆದರೆ ಇದು ಆರೋಗ್ಯದ ಮೇಲೆ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿದೆ. ಆಲೂಗಡ್ಡೆ ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅಂತ ನೋಡೋಣ..?

ಆಲೂಗಡ್ಡೆ ಅತ್ಯಂತ ಜನಪ್ರಿಯ ತರಕಾರಿಗಳಲ್ಲಿ ಒಂದಾಗಿದೆ. ಇದನ್ನು ಅನೇಕ ಭಕ್ಷ್ಯಗಳನ್ನು ತಯಾರಿಸಲು ಬಳಸಬಹುದು. ಇದರಲ್ಲಿ ಪ್ರೋಟೀನ್, ರುಚಿ ಮತ್ತು ಆರೋಗ್ಯದಂತಹ ಅನೇಕ ಪೋಷಕಾಂಶಗಳಿವೆ. ಆಲೂಗಡ್ಡೆಯನ್ನು ಚಿಪ್ಸ್ ಮಾಡಿ ಇಲ್ಲವೆ ಬೇಯಿಸಿ ತಿನ್ನಬಹುದು. 

ಇದನ್ನೂ ಓದಿ: ದೈಹಿಕ ಸಂಬಂಧ ಬೆಳೆಸಿದ ಬಳಿಕ ಖಾಸಗಿ ಅಂಗದಿಂದ ರಕ್ತ ಬಂದರೆ ಈ 4 ಕಾಯಿಲೆಗಳ ಸಂಕೇತವಾಗಿರಬಹುದು ಎಚ್ಚರ !

ಆಲೂಗಡ್ಡೆ ದೇಹಕ್ಕೆ ಒಳ್ಳೆಯದೇ? : ಆಲೂಗಡ್ಡೆ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂಬುದು ಯಾವಾಗಲೂ ಚರ್ಚೆಯ ವಿಷಯವಾಗಿದೆ. ಒಂದೆಡೆ ತರಕಾರಿಯಾಗಿ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂದು ಹೇಳಿದರೆ, ಇನ್ನೊಂದೆಡೆ ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿದೆ ಎಂಬ ವಾದವೂ ಏಳುತ್ತದೆ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಎಂದು ಹಲವರು ನಂಬುತ್ತಾರೆ. 

ವೈದ್ಯರು ಏನು ಹೇಳುತ್ತಾರೆ? : ವೈದ್ಯಕೀಯ ತಜ್ಞರ ಪ್ರಕಾರ, ಆಲೂಗಡ್ಡೆಯಲ್ಲಿ ಫೈಬರ್, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿದೆ. ಇದು ದೇಹಕ್ಕೆ ಕೆಟ್ಟದು ಎಂದು ಹಲವರು ಭಾವಿಸುತ್ತಾರೆ, ನಾವು ಅದನ್ನು ಹೇಗೆ ಬೇಯಿಸುತ್ತೇವೆ ಮತ್ತು ಅದನ್ನು ತಿನ್ನುತ್ತೇವೆ ಎಂಬುದರ ಇದು ಮೇಲೆ ಅವಲಂಬಿತವಾಗಿರುತ್ತದೆ. 

ಇದನ್ನೂ ಓದಿ: ಈ ಸಸ್ಯದ ಕೇವಲ ಎರಡೇ ಎಲೆ ಸಾಕು! ನಿಯಂತ್ರಣಕ್ಕೆ ಬರುವುದು ಶುಗರ್

ಆಲೂಗಡ್ಡೆ ಬೇಯಿಸುವುದು ಹೇಗೆ? : ಆಲೂಗಡ್ಡೆ ಎಲ್ಲಾ ತರಕಾರಿಗಳಂತೆ, ಇದು ಸಹ ಪ್ರೋಟೀನ್‌ಯುಕ್ತವಾಗಿದೆ. ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆಯೋ ಇಲ್ಲವೋ ಎಂಬುದು ಅದನ್ನು ಬೇಯಿಸುವ ವಿಧಾನವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಫ್ರೆಂಚ್ ಫ್ರೈಗಳಂತಹ ಮಸಾಲೆಯುಕ್ತ ಆಲೂಗಡ್ಡೆ ಪದಾರ್ಥ ಆರೋಗ್ಯಕರವಲ್ಲ. 

ನೀವು ಆಲೂಗೆಡ್ಡೆಯನ್ನು ಆರೋಗ್ಯಕರ ರೀತಿಯಲ್ಲಿ ತಿನ್ನಲು ಬಯಸಿದರೆ, ಖಂಡಿತವಾಗಿಯೂ ಎಣ್ಣೆಯಲ್ಲಿ ತಿನ್ನಬಾರದು. ಅದರಲ್ಲೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಇಂತಹ ಆಹಾರಗಳನ್ನು ತ್ಯಜಿಸಬೇಕು. ಇದು ಬಹಳಷ್ಟು ಕೊಬ್ಬನ್ನು ಹೊಂದಿರುತ್ತದೆ. 

ನೀವು ಪ್ರತಿದಿನ ಆಲೂಗಡ್ಡೆ ತಿಂದರೆ ಏನಾಗುತ್ತದೆ? : ಪ್ರತಿದಿನ ಒಂದು ಆಲೂಗೆಡ್ಡೆ ತಿಂದರೆ ನಮ್ಮ ದೇಹಕ್ಕೆ ಒಂದಿಷ್ಟು ಪ್ರಯೋಜನಗಳು ಸಿಗುತ್ತವೆ ಎಂಬುದು ಅರಗಿಸಿಕೊಳ್ಳಲಾಗದ ಸತ್ಯ. ಆರೋಗ್ಯ ತಜ್ಞರ ಪ್ರಕಾರ ಎಣ್ಣೆಯಲ್ಲಿ ಬೇಯಿಸದ ಆಲೂಗೆಡ್ಡೆಗಳನ್ನು ತಿನ್ನುವವರಿಗೆ ಬೊಜ್ಜಿನ ಅಪಾಯವನ್ನು ಕಡಿಮೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: ಈ ಹಳದಿ ಹಣ್ಣುಗಳನ್ನು ಸೇವಿಸಿದರೆ ಜೀವನ ಪರ್ಯಂತ ಎದುರಾಗುವುದಿಲ್ಲ ಹೃದಯಾಘಾತದ ಆಪಾಯ

ಆಲೂಗಡ್ಡೆ ತಿಂದರೆ ತೂಕ ಇಳಿಕೆಯಾಗುತ್ತದೆಯೇ? : ಡಯೆಟ್ ಮಾಡುವವರು ತೂಕ ಇಳಿಸಿಕೊಳ್ಳಲು ಆಲೂಗಡ್ಡೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ, ಹೆಚ್ಚು ತಿನ್ನಬೇಡಿ. ಸ್ವಲ್ಪ ಪ್ರಮಾಣದ ಆಲೂಗಡ್ಡೆ ತೂಕ ನಷ್ಟಕ್ಕೆ ಖಂಡಿತವಾಗಿಯೂ ಪ್ರಯೋಜನಕಾರಿ ಎಂದು ಫಿಟ್ನೆಸ್ ತಜ್ಞರು ಹೇಳುತ್ತಾರೆ. 

ಜೀರ್ಣಕ್ರಿಯೆಗೆ ಸಹಕಾರಿ: ಆಲೂಗಡ್ಡೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಈ ಕುರಿತು ನಡೆಸಿದ ಅಧ್ಯಯನದಲ್ಲಿ ಆಲೂಗಡ್ಡೆಯಲ್ಲಿರುವ ‘ಸ್ಟಾರ್ಚ್’ ಎಂಬ ವಸ್ತು ಜೀರ್ಣಕ್ರಿಯೆಗೆ ನೆರವಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಆಲೂಗಡ್ಡೆಯು ಹೊಟ್ಟೆಯಲ್ಲಿ ಬೆಳೆಯುವ ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News