ಪ್ರತಿನಿತ್ಯ ಈ ರೀತಿ ಸೇವಿಸಿದರೆ ಅರಿಶಿನ ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್
ಸಂಶೋಧನೆಯ ಪ್ರಕಾರ, ಅರಿಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ನವದೆಹಲಿ : ಅರಿಶಿನ (Turmeric) ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಆಯುರ್ವೇದದಲ್ಲಿ ನಂಬಲಾಗಿದೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುವ ಗಿಡ ಮೂಲಿಕೆಯಾಗಿದೆ. ಅರಿಶಿನವನ್ನು ಔಷಧವಾಗಿಯೂ ಬಳಸಲಾಗುತ್ತದೆ. ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. ತಜ್ಞರ ಪ್ರಕಾರ, ಅರಿಶಿನ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ (Immunity) ಹೆಚ್ಚುತ್ತದೆ. ಅರಿಶಿನವು ಮಧುಮೇಹ ರೋಗಿಗಳಿಗೂ ತುಂಬಾ ಪ್ರಯೋಜನಕಾರಿ. ಅರಿಶಿನವನ್ನು ನಿಯಮಿತವಾಗಿ ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ (Blood Sugar) ಅಂಶವನ್ನು ನಿಯಂತ್ರಿಸಬಹುದು. ನೀವು ಸಹ ಮಧುಮೇಹದಿಂದ ಬಳಲುತ್ತಿದ್ದರೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕಾದರೆ, ಅರಿಶಿನವನ್ನು ಈ ರೀತಿ ಸೇವಿಸಿ.
ಸಂಶೋಧನೆಯ ಪ್ರಕಾರ, ಅರಿಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : Is Hoarse Voice Corona Symptom?: ಗಂಟಲು ಹಿಡಿಯುವುದು ಕೂಡ ಕೊರೊನಾ ಲಕ್ಷಣವೇ? ನಿರ್ಲಕ್ಷಿಸಬೇಡಿ ತಕ್ಷಣ ಟೆಸ್ಟ್ ಮಾಡಿಸಿ
ಅರಿಶಿನ, ದಾಲ್ಚಿನ್ನಿ ಮತ್ತು ಹಾಲು :
ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ದಾಲ್ಚಿನ್ನಿ ಬೆರೆಸಿದ ಅರಿಶಿನ ಹಾಲು (Turmeric) ಕುಡಿದರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ ಎನ್ನುವುದು ಸಂಶೋಧನೆಗಳಲ್ಲಿ ಸಾಬೀತಾಗಿದೆ.
ಅರಿಶಿನ, ಹಾಲು ಮತ್ತು ಕರಿಮೆಣಸು :
ಒಂದು ಲೋಟದಷ್ಟು ಬಿಸಿ ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ ಅರಿಶಿನ ಬೆರೆಸಿ. ನಂತರ ಅದನ್ನು ತಣ್ಣಗಾಗಲು ಬಿಡಿ. ಹಾಲು ತಣ್ಣಗಾದ ನಂತರ, ಅದಕ್ಕೆ ಕರಿಮೆಣಸು (Pepper) ಬೆರೆಸಿ. ಕರಿಮೆಣಸಿನಲ್ಲಿ ಪೈಪರೀನ್ ಕಂಡುಬರುತ್ತದೆ. ಇದನ್ನು ಬಳಸುವುದರಿಂದ, ರಕ್ತನಾಳು ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ : ಆಕ್ಸಿಮೀಟರ್ ಖರೀದಿಸುವ ಮುನ್ನ ಈ 8 ವಿಚಾರಗಳನ್ನು ತಿಳಿದುಕೊಳ್ಳಿ
ಅರಿಶಿನ, ಶುಂಠಿ ಮತ್ತು ಹಾಲು :
ಮೊದಲನೆಯದಾಗಿ, ಅರಿಶಿನ-ಹಾಲಿನಲ್ಲಿ ಒಂದು ಚಿಟಿಕೆ ಶುಂಠಿ (Ginger) ಪುಡಿಯನ್ನು ಬೆರೆಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಹೀಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಇದಲ್ಲದೆ, ಆಮ್ಲಾ (Amla) ಜ್ಯೂಸ್‌ನಲ್ಲಿ ಒಂದು ಚಿಟಿಕೆ ಅರಿಶಿನ ಮಿಶ್ರಣವನ್ನು ಬೆರೆಸಿ ಕುಡಿಯುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡಲಾಗುತ್ತದೆ. ಆಮ್ಲಾ ಡಯಾಬಿಟಿಕ್ (Diabetic) ವಿರೋಧಿ ಗುಣಗಳನ್ನು ಹೊಂದಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.