ಆಕ್ಸಿಮೀಟರ್ ಖರೀದಿಸುವ ಮುನ್ನ ಈ 8 ವಿಚಾರಗಳನ್ನು ತಿಳಿದುಕೊಳ್ಳಿ

ಕರೋನಾ ಕಾಲದಲ್ಲಿ ಮನೆಯಲ್ಲಿ ಆಕ್ಸಿಮೀಟರ್ ಇರುವುದು ತುಂಬಾ ಮುಖ್ಯ.  ರಕ್ತದಲ್ಲಿರುವ ಆಮ್ಲಜನಕ  ಮಟ್ಟವನ್ನು ಮಾಪನ ಮಾಡಲು ನೆರವಾಗುತ್ತದೆ ಈ ಪಲ್ಸ್ ಆಕ್ಸಿಮೀಟರ್ .  

Written by - Ranjitha R K | Last Updated : Apr 30, 2021, 12:50 PM IST
  • ಆಕ್ಸಿಮೀಟರ್ ಮನೆಯಲ್ಲಿರಬೇಕಾದ ತುರ್ತು ಮೆಡಿಕಲ್ ಉಪಕರಣ
  • ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಆಕ್ಸಿಮೀಟರ್ ಲಭ್ಯವಿದೆ
  • ಹಾಗಾದರೆ, ಬೆಸ್ಟ್ ಆಕ್ಸಿಮೀಟರ್ ಖರೀದಿ ಹೇಗೆ..?
ಆಕ್ಸಿಮೀಟರ್ ಖರೀದಿಸುವ ಮುನ್ನ ಈ 8 ವಿಚಾರಗಳನ್ನು ತಿಳಿದುಕೊಳ್ಳಿ title=
ಆಕ್ಸಿಮೀಟರ್ ಮನೆಯಲ್ಲಿರಬೇಕಾದ ತುರ್ತು ಮೆಡಿಕಲ್ ಉಪಕರಣ (file photo)

ನವದೆಹಲಿ : ಕರೋನಾ (Coronavirus) ಆರ್ಭಟಿಸುತ್ತಿರುವ ಈ ಕಾಲದಲ್ಲಿ ಮನೆಯಲ್ಲೊಂದು ಆಕ್ಸಿಮೀಟರ್ (Oxymeter) ಅಂದರೆ ರಕ್ತದ ಆಮ್ಲಜನಕ ಮಾಪಕ ಇದ್ದರೆ ತುಂಬಾ ಕೆಲಸಕ್ಕೆ ಬರುತ್ತದೆ. ಕರೋನಾ ಕಾಲದಲ್ಲಿ ಮನೆಯಲ್ಲಿ ಆಕ್ಸಿಮೀಟರ್ ಇರುವುದು ತುಂಬಾ ಮುಖ್ಯ.  ರಕ್ತದಲ್ಲಿರುವ ಆಮ್ಲಜನಕ (Oxygen) ಮಟ್ಟವನ್ನು ಮಾಪನ ಮಾಡಲು ನೆರವಾಗುತ್ತದೆ ಈ ಪಲ್ಸ್ ಆಕ್ಸಿಮೀಟರ್ (Pulse Oxymeter) . ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮನೆ ಬಳಕೆಗೆ ಆಕ್ಸಿಮೀಟರ್ ಖರೀದಿಸುವ ಮುನ್ನ ಕೆಲವೊಂದು ವಿಚಾರಗಳನ್ನು ನಾವು ತಿಳಿದುಕೊಳ್ಳಲೇ ಬೇಕು. ಅದ್ಯಾವುದು ಇಲ್ಲಿ ನೋಡೋಣ. 

ಆಕ್ಸಿಮೀಟರ್ ಫೀಚರ್ ಗಳೇನು.?
1. ಇದು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾದ ಸಣ್ಣ ಉಪಕರಣ
2. ಕೆಲವು ಉಪಕರಣಗಳು ಪಲ್ಸ್ ಮೀಟರ್ (Pulse meter) ರೀಡ್ ಮಾಡಿದ ಮೇಲೆ ಬೀಪ್ ಸೌಂಡ್ ಮಾಡುತ್ತವೆ.
3. ಕೆಲವೇ ಸೆಕೆಂಡುಗಳಲ್ಲಿ  ಸ್ಕ್ರೀನ್ ಮೇಲೆ ರಿಸಲ್ಟ್ ಡಿಸ್ ಪ್ಲೇ ಮಾಡುತ್ತದೆ. 
4. ಅದರ ರೀಡಿಂಗ್ಸ್ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದು. 

ಇದನ್ನೂ ಓದಿ : Ayurvedic Medicine To Cure Corona: Corona ಸೋಂಕಿನ ಸಾಮಾನ್ಯ-ಮಧ್ಯಮ ಲಕ್ಷಣಗಳಿಗೆ ಪರಿಣಾಮಕಾರಿ ಈ ಆಯುರ್ವೇದ ಔಷಧಿ!

ಆಕ್ಸಿಮೀಟರ್ ಖರೀದಿಸುವ ಮುನ್ನ ಪರಿಗಣಿಸಬೇಕಾದ ಅಂಶಗಳು:
1. ಆಕ್ಸಿಮೀಟರ್ (Oxymeter) ಬೆಲೆ. 1000 ದಿಂದ ಹಿಡಿದು 4000 ತನಕದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
2. ಆಕ್ಸಿಮೀಟರ್ ರಿಸಲ್ಟ್‍ನ ನಿಖರತೆ ಬಹಳ ಮುಖ್ಯ. ನಿಖರ ರಿಸಲ್ಟ್ ನೀಡುವ ಆಕ್ಸಿಮೀಟರ್ ಗಳನ್ನು ಮಾತ್ರ ಖರೀದಿ ಮಾಡಿ
3. ಕೆಲವು ಆಕ್ಸಿಮೀಟರ್ ಗಳು ತಕ್ಷಣ ರಿಸಲ್ಟ್ ಡಿಸ್ ಪ್ಲೇ ಮಾಡುತ್ತವೆ. ಇನ್ನು ಕೆಲವು ರಿಸಲ್ಟ್  ತೋರಿಸಲು ಕನಿಷ್ಠ 5 ಸೆಕೆಂಡ್ ತೆಗೆದುಕೊಳ್ಳುತ್ತವೆ. ನಿಮ್ಮ ಆಯ್ಕೆ ಯಾವುದು ನೋಡಿ.
4. ಬಝರ್ ಅಥವಾ ಅಲಾರಮ್ ಸೌಂಡ್ (Alarm sound) ಬೇಕಾ ಎನ್ನುವುದು ನಿರ್ಧರಿಸಿಕೊಳ್ಳಿ
5. ಆಕ್ಸಿಮೀಟರ್ ವಾಟರ್ ರೆಸಿಸ್ಟೆಂಟ್ ಆಗಿದೆಯಾ ತಿಳಿದುಕೊಳ್ಳಿ
6. ಆಕ್ಸಿಮೀಟರ್ ಕಂಪನಿಗೆ ಬೇರೆ ಬೇರೆ ಸಂಸ್ಥೆಗಳು ನೀಡಿದ ಸರ್ಟಿಫಿಕೆಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
7. ಇ-ಕಾಮರ್ಸ್ ಸೈಟಿನಲ್ಲಿ ಆಕ್ಸಿಮಿಟರ್ ಬಗ್ಗೆ ಬಂದಿರುವ ರಿವ್ಯೂಗಳನ್ನು ಓದಿ
8. ನಿಮಗೆ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಬೇಕಾ ಅಥವಾ ಹ್ಯಾಂಡ್ ಹೆಲ್ಡ್ ಆಕ್ಸಿಮೀಟರ್ ಬೇಕಾ ಅನ್ನೋದು ನಿರ್ಧರಿಸಿಕೊಳ್ಳಿ. ಹ್ಯಾಂಡ್ ಹೆಲ್ಡ್ ಆಕ್ಸಿಮೀಟರನ್ನು ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತದೆ. 

ಇದನ್ನೂ ಓದಿ : Coronavirus: Covishield ಬಳಿಕ ಇದೀಗ Covaxin ದರದಲ್ಲಿಯೂ ಇಳಿಕೆಯ ಘೋಷಣೆ ಮಾಡಿದ ಭಾರತ್ ಬಯೋಟೆಕ್

ಆಕ್ಸಿಮೀಟರನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಬಳಸಬಹುದು. ಆಕ್ಸಿಮೀಟರಿನ ಕುಹರದೊಳಗೆ ನಿಮ್ಮ ಬೆರಳು ಫಿಕ್ಸ್ ಆದರೆ ಸಾಕು. ಆದು ನಿಮ್ಮ ರಕ್ತದ ಆಮ್ಲಜನಕವನ್ನು ರೀಡ್ ಮಾಡುತ್ತದೆ.  ಮಾರುಕಟ್ಟೆಯಲ್ಲಿ (Market) 1000ದಿಂದ ಹಿಡಿದು 4000 ತನಕದ ಆಕ್ಸಿಮೀಟರ್ ಗಳು ಲಭ್ಯವಿದೆ. ಬ್ರಾಂಡ್, ಫೀಚರ್ ಇತ್ಯಾದಿ ಆಧಾರದ ಮೇಲೆ ಬೆಲೆ ಬದಲಾಗುತ್ತದೆ. ಆನ್ ಲೈನ್ ನಲ್ಲಿ (Online) ಖರೀದಿಸಿದರೆ ಕೆಲವೊಂದು ಡಿಸ್ಕೌಂಟ್ ಕೂಡಾ ಸಿಗುತ್ತದೆ. ಯಾವತ್ತಿಗೂ ಉತ್ತಮ ಮತ್ತು ನಿಖರ ಫಲಿತಾಂಶ ನೀಡುವ ಆಕ್ಸಿಮೀಟರ್ ಖರೀದಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News