ಹೃದಯ ಆರೋಗ್ಯವಾಗಿರಬೇಕಾದರೆ ಈ ನಾಲ್ಕು ವಸ್ತುಗಳಿಂದ ಅಂತರ ಕಾಯ್ದುಕೊಳ್ಳಿ
Heart Attack Risk:ಆಹಾರ ತಜ್ಞ ಡಾ. ಆಯುಷಿ ಯಾದವ್ ಪ್ರಕಾರ ಹೃದಯದ ಆರೋಗ್ಯ ಉತ್ತಮವಾಗಿರಬೇಕಾದರೆ, ಕೆಲವು ವಸ್ತುಗಳಿಂದ ಅಂತರ ಕಾಯ್ದುಕೊಳ್ಳಲೇಬೇಕು.
Heart Attack Risk : ಭಾರತದ ಜನರು ತಮ್ಮ ಹೃದಯದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ನಾವು ಎಣ್ಣೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುತ್ತೇವೆ. ಅತಿಯಾದ ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್ ನಂತಹ ಕಾಯಿಲೆಗಳ ಅಪಾಯ ಎದುರಾಗುತ್ತದೆ. ಆಹಾರ ತಜ್ಞ ಡಾ. ಆಯುಷಿ ಯಾದವ್ ಪ್ರಕಾರ ಹೃದಯದ ಆರೋಗ್ಯ ಉತ್ತಮವಾಗಿರಬೇಕಾದರೆ, ಕೆಲವು ವಸ್ತುಗಳಿಂದ ಅಂತರ ಕಾಯ್ದುಕೊಳ್ಳಲೇಬೇಕು.
ಹೃದಯದ ಆರೋಗ್ಯಕ್ಕಾಗಿ ಈ ವಸ್ತುಗಳಿಂದ ದೂರವಿರಿ :
1. ಉಪ್ಪು : ಸೀಮಿತ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಹೆಚ್ಚು ಉಪ್ಪನ್ನು ಸೇವಿಸಲು ಪ್ರಾರಂಭಿಸಿದಾಗ ಸಮಸ್ಯೆ ಎದುರಾಗುತ್ತದೆ. ಇದರಿಂದ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗಿ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ನಂತರ ಹೃದಯ ಸಂಬಂಧಿ ಕಾಯಿಲೆಗಳು ಪ್ರಾರಂಭವಾಗುತ್ತವೆ.
ಇದನ್ನೂ ಓದಿ : ಮೂಳೆ ಕ್ಯಾನ್ಸರ್ ಲಕ್ಷಣಗಳು: ಗಮನಹರಿಸಬೇಕಾದ 10 ಅಪಾಯಕಾರಿ ಸಂಕೇತಗಳಿವು
2. ಸಂಸ್ಕರಿತ ಮಾಂಸ :
ದೇಹದ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು ಮಾಂಸವನ್ನು ಸೇವಿಸಿದರೆ, ಅದು ಹಾನಿಕಾರಕವಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಂಸ್ಕರಿಸಿದ ಮಾಂಸವನ್ನು ಒಳಗೊಂಡಿರುವ ಸಂಸ್ಕರಿಸಿದ ಆಹಾರದ ಪ್ರವೃತ್ತಿ ಹೆಚ್ಚಾಗಿದೆ. ಅದರಲ್ಲಿ ಪ್ರಿಸರ್ವೆಟಿವ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇದರಿಂದಾಗಿ ಹೃದಯ ಕಾಯಿಲೆಗಳ ಅಪಾಯವು ಉದ್ಭವಿಸುತ್ತದೆ.
3. ಸಕ್ಕರೆ :
ಸಿಹಿ ಪದಾರ್ಥಗಳು ನಮ್ಮ ಆರೋಗ್ಯದ ದೊಡ್ಡ ಶತ್ರುವಾಗಿದೆ. ಹೆಚ್ಚು ಸಕ್ಕರೆಯನ್ನು ಸೇವಿಸುವುದರಿಂದ, ಸ್ಥೂಲಕಾಯತೆಗೆ ಬಲಿಯಾಗಬಹುದು. ಇದು ಭವಿಷ್ಯದಲ್ಲಿ ಹೃದ್ರೋಗಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಸಕ್ಕರೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಇದನ್ನೂ ಓದಿ : ಅಧಿಕ ಕೊಲೆಸ್ಟ್ರಾಲ್‌ನ ಶತ್ರು ಈ ಹಸಿರುಕಾಳು: ಇದನ್ನು ನೆನೆಸಿ ತಿನ್ನುವುದರಿಂದ ಸಿಗುತ್ತೆ ಅಪಾರ ಪ್ರಯೋಜನ
4. ಟೆನ್ಶನ್ :
ಚಿಂತೆ ಅನ್ನೋದು ಚಿತೆಗೆ ಸಮಾನ. ಆರೋಗ್ಯದ ದೃಷ್ಟಿಯಿಂದ ಇದು ಅಕ್ಷರಶಃ ನಿಜ. ಜೀವನದಲ್ಲಿ ಒತ್ತಡ, ಖಿನ್ನತೆ ಉದ್ವೇಗ ಇದ್ದರೆ, ಅದು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಒತ್ತಡ ಮುಕ್ತ ಜೀವನ ನಡೆಸುವುದು ಬಹಳ ಮುಖ್ಯ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.