Tomato Skin care : ಪ್ರತಿಯೊಬ್ಬರೂ ಟೊಮೆಟೊ ತಿನ್ನಲು ಇಷ್ಟಪಡುತ್ತಾರೆ. ಟೊಮೆಟೊವನ್ನು ಹೆಚ್ಚಾಗಿ ಕರಿ ಮತ್ತು ಸಲಾಡ್‌ಗಳಲ್ಲಿ ಬಳಸಲಾಗುತ್ತದೆ. ಸ್ವಲ್ಪ ಸಿಹಿ ಮತ್ತು ಹುಳಿ ರುಚಿಯು ಟೊಮೆಟೊವನ್ನು ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಟೊಮೆಟೊ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ವಿಟಮಿನ್‌ಗಳು, ಖನಿಜಾಂಶಗಳು, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕ್ರೋಮಿಯಂ ಇತ್ಯಾದಿಗಳನ್ನು ಒಳಗೊಂಡಿರುವ ಟೊಮೆಟೊ ಆರೋಗ್ಯಕ್ಕೆ ಒಳ್ಳೆಯದು.


COMMERCIAL BREAK
SCROLL TO CONTINUE READING

 


ಆದರೆ, ಏನು ಗೊತ್ತಾ? ಟೊಮೆಟೋ ಬರೀ ಅಡುಗೆ ಮತ್ತು ತಿನ್ನೋಕೆ ಅಷ್ಟೇ ಅಲ್ಲ, ಸೌಂದರ್ಯದ ಆರೈಕೆಗೂ ಒಳ್ಳೆಯದು. ಟೊಮ್ಯಾಟೋಸ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಅನೇಕ ಚರ್ಮದ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ತ್ವಚೆಗೆ ಟೊಮೆಟೊವನ್ನು ಹೇಗೆ ಬಳಸಬೇಕು ಮತ್ತು ಅದರ ಪ್ರಯೋಜನಗಳೇನು ಎಂದು ತಿಳಿಯಿರಿ.


ಇದನ್ನೂ ಓದಿ: ಶನಿದೋಷದಿಂದ ಮುಕ್ತಿ ನೀಡಿ, ಹಣದ ಸುರಿಮಳೆಗೆ ಕಾರಣವಾಗುವ ಈ ವಿಷ್ಣುಪ್ರಿಯ ಸಸ್ಯ ನಿಮ್ಮ ಮನೆಯಲ್ಲೂ ಇರಲಿ!


  • ತ್ವಚೆಯ ಮೇಲೆ ನೈಸರ್ಗಿಕ ಹೊಳಪನ್ನು ಪಡೆಯಲು ಟೊಮೆಟೊಗಳನ್ನು ಬಳಸಬಹುದು. ಟೊಮೆಟೊಗಳನ್ನು ತೆಳುವಾಗಿ ಕತ್ತರಿ ಅಥವಾ ಪೇಸ್ಟ್ ಮಾಡಿ ಅದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಬೇಕು. 15-20 ನಿಮಿಷಗಳ ನಂತರ ತಣ್ಣನೆ ನೀರಿನಿಂದ ತೊಳೆದುಕೊಳ್ಳಬೇಕು. ಆದರೆ, ನಿಮ್ಮ ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ ಕೆಲವೊಮ್ಮೆ ನೀವು ಅಲರ್ಜಿ ಅಥವಾ ಅಸ್ವಸ್ಥತೆಯನ್ನು ಅನುಭವಿಸಬಹುದು. ಈ ಸಂದರ್ಭದಲ್ಲಿ, ತಕ್ಷಣವೇ ಮುಖವನ್ನು ತೊಳೆದುಕೊಂಡುಬಿಡಿ.

  • ತುಟಿಗಳ ಮೇಲಿನ ಒಣ ಚರ್ಮವನ್ನು ಹೋಗಲಾಡಿಸಲು ಟೊಮೇಟೊ ಒಳ್ಳೆಯದು. ನಿಂಬೆ ರಸ ಮತ್ತು ಟೊಮೆಟೊ ಸೇರಿಸಿ ಮತ್ತು ತುಟಿಗಳಿಗೆ ಅನ್ವಯಿಸಿ. ಹೀಗೆ ಮಾಡುವುದರಿಂದ ತುಟಿಗಳು ಗುಲಾಬಿ ಮಾತ್ರವಲ್ಲ, ಹೊಳೆಯುತ್ತವೆ.

  • ತ್ವಚೆಯ ಕಲೆಗಳನ್ನು ಹೋಗಲಾಡಿಸಲು ಟೊಮೆಟೊ ಸಹಕಾರಿ. ಕಲೆ ಇರುವ ಪ್ರದೇಶಕ್ಕೆ ಟೊಮೆಟೊ ಮತ್ತು ಅಲೋವೆರಾ ಜೆಲ್ ಮಿಶ್ರಣವನ್ನು ಅನ್ವಯಿಸಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ನಿರಂತರವಾಗಿ ಮಾಡಿದರೆ ತ್ವಚೆಯ ಮೇಲಿನ ಕಲೆಗಳು ಮಾಯವಾಗಿ ಸುಂದರವಾಗುತ್ತದೆ.

  • ಕಣ್ಣಿನ ಕೆಳಗಿನ ಕಪ್ಪು ಕಲೆಗಳು ನಿಮ್ಮನ್ನು ತುಂಬಾ ಕಾಡುತ್ತಿದ್ದರೆ ಅದನ್ನೂ ಪರಿಹರಿಸಲು ಸ್ವಲ್ಪ ಟೊಮೆಟೊ ಸಾಕು. ಅಂದರೆ, ಕಪ್ಪು ಕಲೆಗಳ ಮೇಲೆ ಸ್ವಲ್ಪ ಟೊಮೆಟೊ ರಸವನ್ನು ಅನ್ವಯಿಸಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.


ಆದಾಗ್ಯೂ, ತ್ವಚೆಯ ಮೇಲೆ ಟೊಮೆಟೊಗಳನ್ನು ಬಳಸುವಾಗ ತಿಳಿದಿರಬೇಕಾದ ಒಂದು ವಿಷಯವಿದೆ. ನೀವು ಯಾವುದೇ ಅಸ್ವಸ್ಥತೆಯನ್ನು ಅನುಭವಿಸಿದರೆ, ತಕ್ಷಣವೇ ಟೊಮೆಟೊ ಪೇಸ್ಟ್ ಅನ್ನು ತೊಳೆಯಿರಿ. ಏಕೆಂದರೆ ತಜ್ಞರ ಪ್ರಕಾರ ಟೊಮ್ಯಾಟೊ ಸೂಕ್ಷ್ಮ ಚರ್ಮಕ್ಕೆ ಹಾನಿ ಮಾಡುತ್ತದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.