Best Mileage Cars In India: ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಜನರು ತಮ್ಮ ವಾಹನಗಳಿಂದ ಗರಿಷ್ಠ ಮೈಲೇಜ್ ಪಡೆಯಲು ಬಯಸುತ್ತಾರೆ, ಇದರಿಂದ ಅವರು ಕಡಿಮೆ ಹಣವನ್ನು ಖರ್ಚು ಮಾಡುವ ಮೂಲಕ ದೂರದ ಪ್ರಯಾಣ ಮಾಡಬಹುದು. ಇಲ್ಲಿ ಕುತೂಹಲಕಾರಿ ಅಂಶವೆಂದರೆ ಬೆಲೆಯಲ್ಲಿ ಅಗ್ಗವಾಗಿರುವ ವಾಹನಗಳು ಮೈಲೇಜ್‌ನಲ್ಲೂ ಉತ್ತಮವಾಗಿವೆ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅಂತಹ 4 ಕಾರುಗಳ ಪಟ್ಟಿಯನ್ನು ನಾವು ನಿಮಗಾಗಿ ತಂದಿದ್ದೇವೆ, ಮೈಲೇಜ್ ವಿಷಯದಲ್ಲಿ ಈ ಕಾರುಗಳು ಅಗ್ರಸ್ಥಾನದಲ್ಲಿದೆ. ವಿಶೇಷತೆ ಎಂದರೆ ಈ ಪಟ್ಟಿಯಲ್ಲಿ ಸಿಎನ್ ಜಿ ಕಾರುಗಳಲ್ಲದೆ ಪೆಟ್ರೋಲ್ ಕಾರು ಕೂಡ ಶಾಮೀಲಾಗಿದೆ.
1. ಮಾರುತಿ ಸುಜುಕಿ ವ್ಯಾಗನ್ಆರ್ CNG - 34.05Kmpl
ಮಾರುತಿ ವ್ಯಾಗನ್ಆರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದ ಕಾರುಗಳಲ್ಲಿ ಒಂದಾಗಿದೆ. ಇದು 1.0 ಲೀಟರ್ ಮತ್ತು 1.2 ಲೀಟರ್ ಎರಡು ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ. ಕಾರಿನಲ್ಲಿ ಸಿಎನ್‌ಜಿ ಆಯ್ಕೆಯನ್ನೂ ನೀಡಲಾಗಿದೆ. CNG ಆಯ್ಕೆಯೊಂದಿಗೆ ಈ ಕಾರು 34.05km/kg ವರೆಗೆ ಮೈಲೇಜ್ ನೀಡುತ್ತದೆ. ವ್ಯಾಗನ್ಆರ್ ಸಿಎನ್‌ಜಿ ಬೆಲೆ ರೂ.6.43 ಲಕ್ಷದಿಂದ ಪ್ರಾರಂಭವಾಗುತ್ತದೆ.
2. ಟಾಟಾ ಟಿಯಾಗೊ CNG - 26.40KM/KG
ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್ ಕಾರ್ ಒಟ್ಟು ಆರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ - XE, XT, XZ, XZA, XZ+ ಮತ್ತು XZA+. ಎಲ್ಲಾ ರೂಪಾಂತರಗಳು 1.2L, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತವೆ, ಇವು 86bhp ಶಕ್ತಿ ಮತ್ತು 113Nm ಗರಿಷ್ಠ ಪೀಕ್ ಟಾರ್ಕ್ ಉತ್ಪಾದಿಸುತ್ತವೆ. Tiago CNG ಜೊತೆಗೆ CNG ಕಿಟ್ 26.49 km/kg ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ.6.44 ಲಕ್ಷಗಳಿಂದ ಪ್ರಾರಂಭವಾಗುತ್ತದೆ.
ಇದನ್ನೂ ಓದಿ-ನಾಳೆ ಮೇಷ ರಾಶಿಯಲ್ಲಿ ರಾಹು-ಚಂದ್ರರ ಮೈತ್ರಿಯಿಂದ 'ಗ್ರಹಣ ದೋಷ ಯೋಗ', ಈ ರಾಶಿಗಳ ಜನರಿಗೆ ಎಚ್ಚರಿಕೆ!
3. ಮಾರುತಿ ಸುಜುಕಿ ಸೆಲೆರಿಯೊ - 27Kmpl
ಮಾರುತಿ ಸೆಲೆರಿಯೊ ನಾಲ್ಕು ಟ್ರಿಮ್‌ಗಳಲ್ಲಿ ಬರುತ್ತದೆ - LXi, VXi, ZXi ಮತ್ತು ZXi+. ಇದು 1.0L, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಗರಿಷ್ಠ 67bhp ಪವರ್ ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದರ AMT ರೂಪಾಂತರವು 26.68kmpl ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹ್ಯಾಚ್‌ಬ್ಯಾಕ್ ಮಾದರಿಯ ಪ್ರಸ್ತುತ ಬೆಲೆ ರೂ 5.35 ಲಕ್ಷದಿಂದ ರೂ 7.13 ಲಕ್ಷದವರೆಗೆ ಇದೆ.
ಇದನ್ನೂ ಓದಿ-ಮಗಳ ವಿವಾಹಕ್ಕೆ ಸರ್ಕಾರ ನೀಡುತ್ತೇ 51,000 ರೂ.ಗಳು, ಇಲ್ಲಿದೆ ಸಂಪೂರ್ಣ ವಿವರ!
4. ಮಾರುತಿ ಸುಜುಕಿ ಬಲೆನೊ CNG - 30.61km/Kg
ಮಾರುತಿ ಸುಜುಕಿ ಬಲೆನೊ ಹೊಸ ಅವತಾರದಲ್ಲಿ ಕಳೆದ ವರ್ಷ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು 1.2L, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ-ಫಿಟ್ಡ್ CNG ಕಿಟ್‌ನೊಂದಿಗೆ ಲಭ್ಯವಿದೆ. ಬಲೆನೊ CNG 30.61km/kg ಇಂಧನ ದಕ್ಷತೆಯ ಭರವಸೆ ನೀಡುತ್ತದೆ ಎಂದು ಕಾರು ಉತ್ಪಾದಕ ಕಂಪನಿ ಹೇಳಿಕೊಂಡಿದೆ. ಹ್ಯಾಚ್‌ಬ್ಯಾಕ್ 55-ಲೀಟರ್ CNG ಟ್ಯಾಂಕ್ ಅನ್ನು ಹೊಂದಿದೆ. ಬಲೆನೊ ಸಿಎನ್‌ಜಿ ಬೆಲೆ 8.30 ಲಕ್ಷ ರೂ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.