ಕೊರೊನಾವೈರಸ್‌ನ ಈ ಎರಡನೇ ಅಲೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅಪಾಯಕಾರಿ ಮತ್ತು ಇಲ್ಲಿಯವರೆಗೆ ದೇಶಾದ್ಯಂತ ಸುಮಾರು 20 ದಶಲಕ್ಷ ಜನರು ಈ ವೈರಸ್‌ಗೆ ತುತ್ತಾಗಿದ್ದಾರೆ.  2 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೇಗೆ ಬಲಪಡಿಸಬೇಕು ನಿಮ್ಮ ರೋಗನಿರೋಧಕ ಶಕ್ತಿ ಪ್ರಬಲವಾಗಿದ್ದರೆ, ನೀವು ಈ ಸೋಂಕನ್ನು ತಪ್ಪಿಸಬಹುದು ಮತ್ತು ಯಾವುದೇ ಕಾರಣದಿಂದ ನೀವು ಸೋಂಕಿಗೆ ಒಳಗಾಗಿದ್ದರೆ, ಯಾವುದೇ ತೊಂದರೆಯಿಲ್ಲದೆ ನೀವು ಬೇಗನೆ ಚೇತರಿಸಿಕೊಳ್ಳುತ್ತೀರಿ ಎಂದು ವೈದ್ಯರು ಹೇಳುತ್ತಾರೆ.


COMMERCIAL BREAK
SCROLL TO CONTINUE READING

ಟೊಮೆಟೊ ಜ್ಯೂಸ್ ಪ್ರಯೋಜನಗಳು :


ಹಾಗಾದ್ರೆ ನಿಮ್ಮ ರೋಗ ನಿರೋಧಕ ಶಕ್ತಿ(Immunity Power)ಯನ್ನು ಬಲಪಡಿಸುವುದಕ್ಕೆ ನೀವು ಹಾಲಿನಲ್ಲಿ ಅರಿಶಿನ, ತುಳಸಿ ಕಷಾಯ ಸೇರಿದಂತೆ ಇನ್ನೂ ಹಲವು ಆಯುರ್ವೇದ ಗಿಡಮೂಲಿಕೆಗಳು ಮತ್ತು ಪಾನೀಯಗಳನ್ನು ಸೇವಿಸುತ್ತಿರಬೇಕು. ಇಂದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಜ್ಯೂಸ್ ಬಗ್ಗೆ ಹೇಳುತ್ತಿದ್ದೇವೆ. ಇದು ತುಂಬಾ ರುಚಿಕರವಾಗಿರುತ್ತದೆ. ನಾವು ಸಾಕಷ್ಟು ರೋಗನಿರೋಧಕ  ಹೊಂದಿರುವ ಟೊಮೆಟೊ ಜ್ಯೂಸ್ ಬಗ್ಗೆ ಮಾತನಾಡುತ್ತಿದ್ದೇವೆ.


ಇದನ್ನೂ ಓದಿ : Fact check : ನಿಂಬೆರಸ ಮೂಗಿಗೆ ಹಾಕುವುದರಿಂದ ಕರೋನಾ ವೈರಸ್ ಸಾಯುತ್ತಾ? ಸತ್ಯಾಸತ್ಯತೆ ತಿಳಿಯಿರಿ


ಟೊಮೆಟೊ ಜ್ಯೂಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಟೊಮ್ಯಾಟೋ ಜ್ಯೂಸ್(Tomato Juice) ನಲ್ಲಿ ಸಾಕಷ್ಟು ವಿಟಮಿನ್ ಸಿ, ವಿಟಮಿನ್ ಇ ಮತ್ತು ಬೀಟಾ ಕ್ಯಾರೋಟಿನ್ ಕಂಡುಬರುತ್ತದೆ. ಆದ್ದರಿಂದ, ಟೊಮೆಟೊ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಒಂದು ಲೋಟ ಟೊಮೆಟೊ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ರಕ್ತವನ್ನು ತಿಳಿಗೊಳಿಸುತ್ತದೆ ಮತ್ತು ಕರುಳನ್ನು ಸಹ ಸ್ವಚ್ಛಗೊಳಿಸುತ್ತದೆ. ಅಲ್ಲದೆ, ಟೊಮೆಟೊ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ, ಲೈಕೋಪೀನ್ ಸಮೃದ್ಧವಾಗಿರುವುದರಿಂದ, ಅನೇಕ ರೀತಿಯ ಕ್ಯಾನ್ಸರ್ ಅನ್ನು ತಡೆಯುತ್ತದೆ ಮತ್ತು ಸಾಕಷ್ಟು ಪೋಷಕಾಂಶಗಳಿಂದ ಕೂಡಿದೆ.


ಇದನ್ನೂ ಓದಿ : Health Tips: ಬೇಸಿಗೆಯಲ್ಲಿ ದೇಸಿ ತುಪ್ಪ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ


ಟೊಮೆಟೊ ಜ್ಯೂಸ್ ಮಾಡುವುದು ಹೇಗೆ?


ಈ ಜ್ಯೂಸ್ ತಯಾರಿಸಲು, 2 ಟೊಮ್ಯಾಟೊ, 1 ಗ್ಲಾಸ್ ನೀರು ಮತ್ತು ಒಂದು ಸ್ಫೂನ್ ಉಪ್ಪು(Salt) ಬೇಕು. ಟೊಮೆಟೊವನ್ನು ಚೆನ್ನಾಗಿ ತೊಳೆದು ಕತ್ತರಿಸಿ, ನೀರು ಸೇರಿಸಿ ಒಂದು ಚಿಟಿಕೆ ಉಪ್ಪು ಬೆರೆಸಿ. ಈಗ ಅದನ್ನುಕುಡಿಯಿರಿ. ನೀವು ಬಯಸಿದರೆ, ನೀವು ಉಪ್ಪು ಇಲ್ಲದೆ ಟೊಮೆಟೊ ರಸವನ್ನು ಸಹ ಕುಡಿಯಬಹುದು. ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : ಕರೋನಾ ಕಾಲದಲ್ಲಿ ಅಮೃತ ಸಮಾನ ಈ ಅಮೃತ ಬಳ್ಳಿ ಜ್ಯೂಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.