Touch Me not Benefits: ಡಯಾಬಿಟಿಸ್ ನಿಂದ ಹಿಡಿದು ಪೈಲ್ಸ್ ವರೆಗೆ ಹಲವು ಕಾಯಿಲೆಗಳಿಗೆ ರಾಮಬಾಣ ಈ `ಮುಟ್ಟಿದರೆ ಮುನಿ`
Touch Me Not Benefits: ಈ ಸಸ್ಯ ಮೂಲವ್ಯಾಧಿ, ಸಕ್ಕರೆ ಕಾಯಿಲೆ ಹಾಗೂ ಒತ್ತಡದಂತಹ ರೋಗಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಸಾಬೀತಾಗುತ್ತದೆ. ಈ ಸಸ್ಯದ ಎಲೆಗಳು, ತೊಗಟೆ ಮತ್ತು ಬೀಜಗಳಿಂದಾಗುವ ಆರೋಗ್ಯಕರ ಲಾಭಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Touch Me Not Benefits: ನಮ್ಮ ನಿಸರ್ಗದಲ್ಲಿ ಔಷಧೀಯ ಗುಣಗಳಿಂದ ಕೂಡಿದ ಹಲವಾರು ಮರಗಿಡಗಳಿವೆ. ಕೆಲವು ಗಿಡಮರಗಳ ಎಲೆಗಳು, ಕೆಲವು ಗಿಡಮರಗಳ ತೊಗಟೆ, ಕೆಲವು ಗಿಡಮರಗಳ ಬೀಜಗಳು ಶರೀರದ ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ. ಟಚ್ ಮಿ ನಾಟ್ ಎಂದರೆ ಮುಟ್ಟಿದರೆ ಮುನಿ ಗಿಡ ಕೂಡ ಅವುಗಳಲ್ಲಿನ ಒಂದು ಚಿಕ್ಕ ಗಿಡ. ಇಂಗ್ಲಿಷ್‌ನಲ್ಲಿ ಇದನ್ನು ಟಚ್ ಮಿ ನಾಟ್ ಎಂದು ಕರೆದರೆ, ಹಿಂದಿಯಲ್ಲಿ ಇದನ್ನು ಲಾಜ್ವಂತಿ ಎಂದು ಕರೆಯಲಾಗುತ್ತದೆ. ಆದರೆ ಈ ಸಸ್ಯವು ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದು ನಿಮಗೆ ತಿಳಿದಿದೆಯೇ?
ಪೈಲ್ಸ್, ಮಧುಮೇಹ, ಒತ್ತಡದಂತಹ ಅನೇಕ ಪ್ರಮುಖ ಕಾಯಿಲೆಗಳನ್ನು ಗುಣಪಡಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಇದುವರೆಗೆ ಈ ಸಸ್ಯವನ್ನು ಬಹುತೇಕ ಜನರು ತಮ್ಮ ಮನೆಯಲ್ಲಿ ಅಲಂಕಾರಕ್ಕೆ ಹಚ್ಚುತ್ತಿದ್ದರು ಆದರೆ ಇದೀಗ ಇದರ ಪ್ರಯೋಜನಗಳನ್ನು ತಿಳಿದ ನಂತರ ನೀವೂ ಕೂಡ ನಿಮ್ಮ ಮನೆಯಲ್ಲಿ ಈ ಗಿಡವನ್ನು ಖಂಡಿತ ನೆಡುವಿರಿ. ಈ ಸಸ್ಯವನ್ನು ಮುಟ್ಟಿದ ತಕ್ಷಣ, ಅದು ನಾಚಿಕೆಯಿಂದ ಮುದುಡಿಕೊಳ್ಳುತ್ತದೆ. ಇದು ಈ ಸಸ್ಯದ ವಿಶೇಷತೆ. ಹಾಗಾದರೆ ಬನ್ನಿ ಈ ಸಸ್ಯದ ಪ್ರಯೋಜನಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.
ಮುಟ್ಟಿದರೆ ಮುನಿಯ ಔಷಧೀಯ ಗುಣಗಳು
>> ಅಸ್ತಮಾ ನಿವಾರಕ
>> ನೋವು ನಿವಾರಕ
>> ಖಿನ್ನತೆ-ಶಮನಕಾರಿ
>> ಗಾಯ ನಿವಾರಕ
>> ಮೂತ್ರವರ್ಧಕ
>> ಆಂಟಿಫೆರ್ಟಿಲಿಟಿ
>> ಆಂಟಿವೆನಮ್
>> ಆಂಟಿಮೈಕ್ರೊಬಿಯಲ್
>> ಆಂಟಿಫಂಗಲ್
>> ಆಂಟಿವೈರಲ್
ಪೈಲ್ಸ್- ಫಿಸ್ಟುಲಾ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ
ಈ ಮುಚ್ಚುಗದ ಮುಳ್ಳು ಸಸ್ಯ ಪೈಲ್ಸ್ ಚಿಕಿತ್ಸೆಗೆ ತುಂಬಾ ಪ್ರಯೋಜನಕಾರಿಯಾಗಿದೆ.ಇದರ ಎಲೆಗಳನ್ನು ನುಣ್ಣಗೆ ಪೇಸ್ಟ್ ಮಾಡಿ ಮತ್ತು ಬಾಧಿತ ಪ್ರದೇಶಕ್ಕೆ ಲೇಪಿಸಿ.ಇದನ್ನು ಹಲವಾರು ವರ್ಷಗಳಿಂದ ಪೈಲ್ಸ್ ಚಿಕಿತ್ಸೆಗೆ ಬಳಸಲಾಗುತ್ತಿದೆ,ಈ ಪೇಸ್ಟ್ ಬಳಕೆ ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಇದು ಕಿರಿಕಿರಿ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.
ಮಧುಮೇಹದಲ್ಲಿ ಪ್ರಯೋಜನಕಾರಿ
ಇದು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ, ಇದರ ಸೇವನೆಯು ಮಧುಮೇಹವನ್ನು ನಿಯಂತ್ರಿಸುತ್ತದೆ. ಇದು ಅನೇಕ ಅದ್ಯಯನಗಳಲ್ಲಿ ಅಂಗೀಕರಿಸಲ್ಪಟ್ಟಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒತ್ತಡವನ್ನು ನಿವಾರಿಸುತ್ತದೆ
ಇದು ಆತಂಕ-ವಿರೋಧಿ ಔಷಧೀಯ ಗುಣಗಳನ್ನು ಹೊಂದಿದೆ, ಇಂತಹ ಪರಿಸ್ಥಿತಿಯಲ್ಲಿ, ಈ ಸಸ್ಯವನ್ನು ಸ್ಪರ್ಶಿಸುವ ಮೂಲಕ, ನೀವು ಒತ್ತಡದಿಂದ ಮುಕ್ತರಾಗುತ್ತೀರಿ.
ಗಾಯ ಗುಣಪಡಿಸಿ, ಕೀಲು ನೋವನ್ನು ನಿವಾರಿಸುತ್ತದೆ
>> ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ಪರಿಹಾರ ಒದಗಿಸುತ್ತದೆ.
ಹುಣ್ಣುಗಳನ್ನು ಇದು ನಿವಾರಿಸುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆಯನ್ನು ದೂರಗೊಳಿಸುತ್ತದೆ.
ಇದನ್ನೂ ಓದಿ-Health Tips: ಪುರುಷರ ಹಲವು ಸಮಸ್ಯೆಗಳಿಗೆ ರಾಮಬಾಣ ಅಮೃತ ಬಳ್ಳಿ, ಹೇಗೆ ಸೇವಿಸಬೇಕು?
ನಾಚಿಕೆ ಮುಳ್ಳು ಗಿಡವನ್ನು ಹೇಗೆ ಬಳಸಬೇಕು?
ಮುಟ್ಟಿದರೆ ಮುನಿ ಗಿಡವನ್ನು ನೀವು ಒಟ್ಟು ಮೂರು ರೀತಿಯಲ್ಲಿ ಸೇವಿಸಬಹುದು. ಅದರ ಪುಡಿ ಮಾಡುವ ಮೂಲಕ, ಅದರ ಎಲೆಗಳನ್ನು ಅಗಿಯುವ ಮೂಲಕ ಅಥವಾ ಅದರ ನೀರನ್ನು ತಯಾರಿಸುವ ಮೂಲಕ ನೀವು ಅದನ್ನು ಉಪಯೋಗಿಸಬಹುದು. ಗಾಯಗಳನ್ನು ಗುಣಪಡಿಸಲು ಮತ್ತು ಊತವನ್ನು ಕಡಿಮೆ ಮಾಡಲು ನೀವು ಇದನ್ನು ಪೇಸ್ಟ್ ರೂಪದಲ್ಲಿ ಅನ್ವಯಿಸಬಹುದು, ಅತಿಸಾರಕ್ಕೆ ಚಿಕಿತ್ಸೆ ನೀಡಲು ನೀವು ಒಂದು ಕಪ್ ಮೈಮೋಸ ಚಹಾವನ್ನು ಕುಡಿಯಬಹುದು, ಇದರೊಂದಿಗೆ ನೀವು ಮಸಾಜ್ ಮಾಡಲು ಎಣ್ಣೆಯೊಂದಿಗೆ ಮೈಮೋಸವನ್ನು ಬಳಸಬಹುದು. ಒತ್ತಡವನ್ನು ಕಡಿಮೆ ಮಾಡಲು ನೀವು ಅದರ ಎಲೆಗಳನ್ನು ಅಗಿಯಬಹುದು. ನೀವು ಅದರ ಬೀಜಗಳನ್ನು ಸಹ ಬಳಸಬಹುದು.
ಇದನ್ನೂ ಓದಿ-ಪೈಲ್ಸ್ ಸಮಸ್ಯೆಯನ್ನು ಮೂಲದಿಂದ ನಿವಾರಿಸಲು ಮನೆಮದ್ದು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.