100 ಡಿಗ್ರಿಗಿಂತ ಹೆಚ್ಚು ಜ್ವರವಿದ್ದರೆ ಈ 7 ಪರಿಣಾಮಕಾರಿ ಮಾರ್ಗಗಳನ್ನು ಪ್ರಯತ್ನಿಸಿ
ಕೊರೊನಾ ಸೋಂಕಿನಲ್ಲಿ ಅಥವಾ ವೈರಲ್ ಜ್ವರದ (viral fever) ವೇಳೆ ದೇಹದ ತಾಪಮಾನ ವಿಪರೀತ ಏರುತ್ತದೆ. ಇದು ಜ್ವರದ ಸಮಯದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ.
ನವದೆಹಲಿ : ಕೊರೊನಾ ಸೋಂಕಿನಲ್ಲಿ ಅಥವಾ ವೈರಲ್ ಜ್ವರದ (viral fever) ವೇಳೆ ದೇಹದ ತಾಪಮಾನ ವಿಪರೀತ ಏರುತ್ತದೆ. ಇದು ಜ್ವರದ ಸಮಯದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ. ಜ್ವರದ ವೇಳೆ ಕಡಿಮೆ ತಾಪಮಾನಗಳಿದ್ದರೆ, ಔಷಧಿಗಳಿಲ್ಲದಿದ್ದರೂ ಗುಣಮುಖರಾಗಬಹುದು. ಆದರೆ ಜ್ವರದೊಂದಿಗೆ ನಡುಕ, ಮೈ ಕೈ ನೋವು ಮತ್ತು ವಾಂತಿಯಂತಹ ಲಕ್ಷಣಗಳಿದ್ದರೆ (Symptoms of viral fever), ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದಲ್ಲದೆ, ಕೆಲವು ನೈಸರ್ಗಿಕ ವಿಧಾನಗಳನ್ನು ಕೂಡಾ ಅಳವಡಿಸಿಕೊಳ್ಳಬಹುದು. ಇದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಿ :
ಜ್ವರದ (Fever) ಸಮಯದಲ್ಲಿ ಹೆಚ್ಚಿದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೆಚ್ಚು ನೀರು ಕುಡಿಯುವುದು ಅವಶ್ಯಕ. ನೀರನ್ನು ಕುಡಿಯದಿದ್ದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ದ ಸಮಸ್ಯೆಗೆ ಕಾರಣವಾಗಬಹುದು (Viral Fever Home Remedies). ಹಣ್ಣಿನ ರಸಗಳು, ಗಿಡಮೂಲಿಕೆ ಚಹಾಗಳು ಮತ್ತು ಡಿಕೊಕ್ಷನ್ ಗಳನ್ನೂ ಸೇವಿಸಬಹುದು.
ಇದನ್ನೂ ಓದಿ : Corona In Children: ಈ ಒಂದು ತಪ್ಪು ಮಕ್ಕಳನ್ನು ಕರೋನಾ ಸೂಪರ್ ಸ್ಪ್ರೆಡರ್ ಮಾಡಬಹುದು, ಎಚ್ಚರ
ಬಹಳಷ್ಟು ವಿಶ್ರಾಂತಿ :
ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಜ್ವರದಿಂದ ಬಳಲುತ್ತಿರುವ ರೋಗಿಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ತ್ವರಿತವಾಗಿ ಚೇತರಿಸಿಕೊಳ್ಳಲು ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು.
ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ :
ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೀವು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬಹುದು. ಸ್ನಾನ ಮಾಡುವುದರಿಂದ ದಣಿದ ಸ್ನಾಯುಗಳಿಗೆ ಪರಿಹಾರ ಸಿಗುತ್ತದೆ (Natural Home Remedies for fever).
ಹಗುರವಾದ ಬಟ್ಟೆಗಳನ್ನು ಧರಿಸಿ :
ಸಾಮಾನ್ಯವಾಗಿ ಜ್ವರ ಬಂದ ಕೂಡಲೇ ದಪ್ಪಗಿರುವ ಬಟ್ಟೆಗಳನ್ನು ಹಾಕಿಕೊಳ್ಳುವ ಅಭ್ಯಾಸ ಬಹುತೇಕರಲ್ಲಿ ಇರುತ್ತದೆ. ಆದರೆ ಹೀಗೆ ಮಾಡಬಾರದು. ಹಾಗೆ ಮಾಡುವುದರಿಂದ ಜ್ವರವು ಮತ್ತಷ್ಟು ಹೆಚ್ಚಾಗುತ್ತದೆ. ಜ್ವರದ ಸಂದರ್ಭದಲ್ಲಿ ತೆಳ್ಳಗಿರುವ ಹಗುರವಾದ ಬಟ್ಟೆಗಳನ್ನು ಧರಿಸಿ.
ಇದನ್ನೂ ಓದಿ : Right Way To Eat: ವಯಸ್ಸು ಹಾಗೂ ಡಯಾಬಿಟಿಸ್ ನಿಯಂತ್ರಣಕ್ಕೆ ಆಹಾರ ಸೇವನೆಯ ಈ ವಿಶೇಷ ವಿಧಾನ ನಿಮಗೂ ತಿಳಿದಿರಲಿ
ಸ್ಪಾಂಜ್ ಮಾಡಲು ಪ್ರಯತ್ನಿಸಿ :
ವಿಪರೀತ ಜ್ವರವಿದ್ದು, ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ತಾಪಮಾನವನ್ನು ತಗ್ಗಿಸಲು ನಿಮ್ಮ ದೇಹವನ್ನು ಉಗುರು ಬೆಚ್ಚಗಿನ ನೀರಿನಿಂದ ಸ್ಪಾಂಜ್ ಮಾಡಿ. ಹಣೆಯ ಮತ್ತು ಕತ್ತಿನ ಪ್ರದೇಶಕ್ಕೆ ಹೆಚ್ಚು ಗಮನ ಕೊಡಿ.
ಐಸ್ ನಿಂದ ಸಿಗಲಿದೆ ಪರಿಹಾರ :
ಕುಡಿಯುವ ನೀರು ಅಥವಾ ಇತರ ದ್ರವಗಳು ವಾಕರಿಕೆಗೆ ಕಾರಣವಾಗುತ್ತಿದ್ದರೆ, ಈ ಹೊತ್ತಿನಲ್ಲಿ ಐಸ್ (ice) ಅನ್ನು ಹೀರಬಹುದು. ಹಣ್ಣಿನ ರಸವನ್ನು (fruit juice) ಐಸ್-ಕ್ಯೂಬ್ ಟ್ರೇನಲ್ಲಿ ಹಾಕಿ ಐಸ್ ಆದ ಬಳಿಕ ಅದನ್ನು ಹೀರುತ್ತಾ ಇರಬಹುದು.
ಗಾರ್ಗಲ್ ಮಾಡುವುದು :
ಗಂಟಲು ನೋವು ಮತ್ತು ಜ್ವರದಲ್ಲಿ ಗಾರ್ಗ್ಲಿಂಗ್ ಪರಿಹಾರವನ್ನು ನೀಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಬೆರೆಸಿ ಮತ್ತು ದಿನಕ್ಕೆ ನಾಲ್ಕು ಬಾರಿ ಗಾರ್ಗ್ಲಲ್ ಮಾಡಿ. ಜೇನುತುಪ್ಪ (honey) ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಸಹ ನೀರಿನಲ್ಲಿ ಬೆರೆಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.