Right Way To Eat: ವಯಸ್ಸು ಹಾಗೂ ಡಯಾಬಿಟಿಸ್ ನಿಯಂತ್ರಣಕ್ಕೆ ಆಹಾರ ಸೇವನೆಯ ಈ ವಿಶೇಷ ವಿಧಾನ ನಿಮಗೂ ತಿಳಿದಿರಲಿ

Aging Control Tips - ಡಯಾಬಿಟಿಸ್ ನಿಯಂತ್ರಣಕ್ಕೆ ಕೇವಲ ಸರಿಯಾದ ಡಯಟ್ ಸೇವಿಸುವುದು ಸಾಕಾಗುವುದಿಲ್ಲ. ಸರಿಯಾದ ಆಹಾರ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದು ಕೂಡ ಮುಖ್ಯ. 

Written by - Nitin Tabib | Last Updated : Jan 21, 2022, 01:36 PM IST
  • ಹೆಚ್ಚಾಗುತ್ತಿರುವ ವಯಸ್ಸು ಹಾಗೂ ಡಯಾಬಿಟಿಸ್ ನಿಯಂತ್ರಿಸುವ ವಿಧಾನ ತಿಳಿದುಕೊಳ್ಳಿ
  • ಆದಾರ ಸೇವಿಸುವ ಸರಯಾಯದ ಪದ್ಧತಿಯಿಂದ ಸಾಕಷ್ಟು ಲಾಭ.
  • ಕಾರ್ಬೋಹೈಡ್ರೇಟ್ ಸೇವನೆಗೂ ಮುನ್ನ ಪ್ರೋಟೀನ್ ಸೇವಿಸಿ.
Right Way To Eat: ವಯಸ್ಸು ಹಾಗೂ ಡಯಾಬಿಟಿಸ್ ನಿಯಂತ್ರಣಕ್ಕೆ ಆಹಾರ ಸೇವನೆಯ ಈ ವಿಶೇಷ ವಿಧಾನ ನಿಮಗೂ ತಿಳಿದಿರಲಿ title=
Right Way To Eat (Representational Image)

ನವದೆಹಲಿ: Diabetes Control Tips - ಮಧುಮೇಹ (Diabetes) ಮತ್ತು ವೃದ್ಧಾಪ್ಯ (Aging) ಈ ಎರಡೂ ವಿಷಯಗಳನ್ನು ಪ್ರತಿಯೊಬ್ಬರೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಆದರೆ, ವಾಸ್ತವದಲ್ಲಿ ಕೆಲವೇ ಜನರು ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದುವು ಬೇರೆ ವಿಷಯ. ಈ ಎರಡೂ ವಿಷಯಗಳನ್ನು ನಿಯಂತ್ರಿಸಲು ಕೆಲ ಸುಲಭವಾದ ಮಾರ್ಗಗಳಿವೆ. ಅವುಗಳಲ್ಲಿ ಒಂದು ನಾವು ಸೇವಿಸುವ ಆಹಾರದ ಸರಿಯಾದ ಕ್ರಮ. ಓರ್ವ ವ್ಯಕ್ತಿ ತಾನು ದಿನನಿತ್ಯ ಸೇವಿಸುವ ಆಹಾರವನ್ನೇ ಸರಿಯಾದ ಕ್ರಮದಲ್ಲಿ ಸೇವಿಸಿದರೆ ಆತ ತನ್ನ ಸಾಕಷ್ಟು ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು (Weight Loss). ಅಷ್ಟೇ ಅಲ್ಲ ಆತ ತನ್ನ ವಯಸ್ಸಿಗಿಂತ ಸಾಕಷ್ಟು ಯಂಗ್ ಆಗಿ ಕಾಣಿಸಿಕೊಳ್ಳಬಹುದು.

ಈ ತಪ್ಪು ತೂಕ ಹೆಚ್ಚಳಕ್ಕೆ ಕಾರಣ
ಸಾಮಾನ್ಯವಾಗಿ ಜನರು ತರಕಾರಿಗಳು-ಸಲಾಡ್, ಪ್ರೋಟೀನ್ ಗಳನ್ನು ಆಹಾರ ಸೇವನೆಯ ನಂತರ ಅಥವಾ ಆಹಾರ ಸೇವನೆಯ ಜೊತೆಗೆ ಸೇವಿಸುತ್ತಾರೆ. ಇದು ಹಾರ್ಮೋನುಗಳ ಮೇಲೆ ವ್ಯತ್ಯಾಸವನ್ನುಂಟುಮಾಡುತ್ತದೆ ಮತ್ತು ತೂಕವನ್ನು ಹೆಚ್ಚಿಸುತ್ತದೆ. ಆದರೆ ಕಾರ್ಬೋಹೈಡ್ರೇಟ್‌ಗಳ (Carbohyderate In Meal) ಮೊದಲು ತರಕಾರಿ-ಪ್ರೋಟೀನ್‌ಗಳನ್ನು (Protine In Meal) ಸೇವಿಸಿದರೆ, ಅದು ಇನ್ಸುಲಿನ್ ಮತ್ತು ಗ್ಲೂಕೋಸ್ ಸ್ಪೈಕ್‌ಗಳನ್ನು ಶೇ.30-ಶೇ. 40% ರಷ್ಟು ಕಡಿಮೆ (Tips For Diabetes Control) ಮಾಡುತ್ತದೆ. ನ್ಯೂಯಾರ್ಕ್ ನಗರದ ವೈಲ್ ಕಾರ್ನೆಲ್ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ ಅಧ್ಯಯನವು ಸಾಮಾನ್ಯ ಪದ್ಧತಿಯಲ್ಲಿ ಆಹಾರ ಸೇವನೆ ಮಾಡುವುದು, ನಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ.

ಹಲವು ಬಾರಿ ನಿಯಂತ್ರಿತ ಆಹಾರ ಸೇವನೆ ಕೂಡ ಸಂಪೂರ್ಣ ಲಾಭ ನೀಡುವುದಿಲ್ಲ. ಹೀಗಾಗಿ ತಿನ್ನುವ ಆಹಾರವನ್ನೇ ಸರಿಯಾದ ಕ್ರಮದಲ್ಲಿ ಸೇವಿಸುವುದು ತುಂಬಾ ಆವಶ್ಯಕ. ಹೀಗಾಗಿ ಆಹಾರ ಸೇವನೆಗೂ ಮುನ್ನವೇ ತರಕಾರಿ, ಸಲಾಡ್, ದಾಲ್ ಸೇವನೆ ಮಾಡಿ ಅದರ ನಂತರವೇ ಕಾರ್ಬೋಹೈಡ್ರೇಟ್ ಗಳಿಂದ ಕೂಡಿದ ಆಹಾರ ಸೇವನೆ ಮಾಡಬೇಕು.

ಇದನ್ನೂ ಓದಿ-2022 ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ತಮಿಳು ಸಿನಿಮಾ 'ಜೈ ಭೀಮ್'!

ಇದರಿಂದ ಹಲವು ಲಾಭಗಳಾಗುತ್ತವೆ (Tips For Aging Control)
ಕಾರ್ಬೋಹೈಡ್ರೇಟ್‌ ಯುಕ್ತ ಆಹಾರ ಸೇವನೆಗೂ ಮುನ್ನ ಪ್ರೋಟೀನ್ ಮತ್ತು ಫೈಬರ್ ಯುಕ್ತ ಆಹಾರ ಸೇವನೆ ಮಾಡುವ ಈ ವಿಧಾನವು ಅನೇಕ ನಮಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಹೀಗೆ ತಿಂದಾಗ ನಮ್ಮ ಹಾರ್ಮೋನ್ ಗಳು ಸಮತೋಲನದಲ್ಲಿರುತ್ತವೆ. ಫಲವತ್ತತೆ ಉತ್ತಮವಾಗಿರುತ್ತದೆ. ಚರ್ಮವು ಉತ್ತಮವಾಗಿರುತ್ತದೆ ಮತ್ತು ನಾವು ನಾವು ನೈಜ ವಯಸ್ಸಿಗಿಂತ ಕಿರಿಯರಾಗಿ ಕಾಣಿಸಿಕೊಳ್ಳಬಹುದು. ಅಲ್ಲದೆ, ನಮ್ಮ ತೂಕ ಸಹ ಇದರಿಂದ ನಿಯಂತ್ರಣದಲ್ಲಿರುತ್ತದೆ. ಇದರ ಮತ್ತೊಂದು ಮಹತ್ವದ ಪ್ರಯೋಜನ ಎಂದರೆ, ಇದರಿಂದ ಡಯಾಬಿಟಿಸ್ ಕೂಡ ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ-Fire In BMTC Bus: ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬಿಎಂಟಿಸಿ ಬಸ್

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ, ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Film Theatres: ರಾಜ್ಯ ಸರ್ಕಾರದ ಕೋವಿಡ್ ನಡೆಗೆ ಬೇಸರ: ಮೈಸೂರಿನಲ್ಲಿ ಇಂದಿನಿಂದ ಚಿತ್ರಮಂದಿರ ಬಂದ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News